More

    ಬೆಂಗಳೂರು ನಿವಾಸಿಗಳೇ ಶವ ಸಂಸ್ಕಾರಕ್ಕೆ ‘ಲಾಸ್ಟ್​ ಜರ್ನಿ’ ಮೊರೆ ಹೋಗುವ ಮುನ್ನ ಎಚ್ಚರ!

    ಬೆಂಗಳೂರು: ರಾಜ್ಯ ರಾಜಧಾನಿ ನಿವಾಸಿಗಳೇ ಎಚ್ಚರ! ನಿಮ್ಮ ಮನೆಯಲ್ಲಿ ಯಾರಾದ್ರೂ ಮೃತಪಟ್ಟಾಗ ಬಿಬಿಎಂಪಿ ವ್ಯಾಪ್ತಿಯ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ‘ಲಾಸ್ಟ್​ ಜರ್ನಿ’ ವೆಬ್​ಸೈಟ್​ನ ಮೊರೆ ಹೋಗುವ ಮುನ್ನ ಜಾಗ್ರತೆ. ಯಾಕಂದ್ರೆ ವಂಚಕರು ಬಿಬಿಎಂಪಿ ಚಿತಾಗಾರದ ಹೆಸರಿನಲ್ಲಿ ವೆಬ್​ಸೈಟ್​ ತೆರೆದು ಶವ ಸಂಸ್ಕಾರದ ನೆಪದಲ್ಲಿ ಹಣ ವಸೂಲಿ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಈ ಸಂಬಂಧ ರಾಜರಾಜೇಶ್ವರಿನಗರ ವಲಯ ಎಇಇ ಗವಿಸಿದ್ದಯ್ಯ ಅವರು ದಕ್ಷಿಣ ವಿಭಾಗ ಸಿಇಎನ್​ ಠಾಣೆಗೆ ದೂರು ನೀಡಿದ್ದಾರೆ. ಇದರ ಅನ್ವಯ ಅಪರಿಚಿತರ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಪಾಲಿಕೆ ವ್ಯಾಪ್ತಿಯ ವಿದ್ಯುತ್​ ಚಿತಾಗಾರಗಳನ್ನು ಸಾರ್ವಜನಿಕರ ಉಪಯೋಗಕ್ಕೆ ಕೊಡಲಾಗಿದೆ. ಕೋವಿಡ್​ ಸೋಂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಮೃತದೇಹಗಳು ಬರುತ್ತಿದ್ದ ಕಾರಣ ಸರತಿ ಸಾಲಿನಲ್ಲಿ ನಿಂತು ಕಾಯುವುದನ್ನು ತಪ್ಪಿಸಲು ಮತ್ತು ಸಮಯ ಉಳಿತಾಯಕ್ಕಾಗಿ ಪಾಲಿಕೆಯಿಂದ ಆನ್​ಲೈನ್​ನಲ್ಲಿ ಉಚಿತವಾಗಿ ಬುಕ್ಕಿಂಗ್​ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಪ್ರತಿ ಶವ ದಹನ ಕ್ರಿಯೆಗೆ ಸ್ವಚ್ಛತೆ ಹಾಗೂ ಇನ್ನಿತರ ಸೇವೆಗೆಂದು ಪಾಲಿಕೆಯು 250 ರೂ. ಶುಲ್ಕ ಪಡೆದು ರಸೀದಿ ನೀಡುತ್ತದೆ. ಆದರೆ, ವಂಚಕರು ಅನಧಿಕೃತವಾಗಿ ‘ಲಾಸ್ಟ್​ ಜರ್ನಿ’ ಎಂಬ ವೆಬ್​ಸೈಟ್​ ತೆರೆದು ವಿದ್ಯುತ್​ ಚಿತಾಗಾರದಲ್ಲಿ ಶವ ಸಂಸ್ಕಾರಕ್ಕೆ ಬುಕ್ಕಿಂಗ್​ ಮಾಡಿಕೊಡುವುದಾಗಿ ಹೇಳಿ 3,500 ರೂ. ವಸೂಲಿ ಮಾಡಿ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ.

    ಸುಮ್ಮನಹಳ್ಳಿ, ಪೀಣ್ಯ, ಪ್ರಾಣಿಗಳ ವಿದ್ಯುತ್​ ಚಿತಾಗಾರದಲ್ಲಿ ಶವ ಸಂಸ್ಕಾರಕ್ಕೆ ಬಂದವರು ಪಾಲಿಕೆ ಶುಲ್ಕ 250 ರೂ. ಕೊಡಲು ನಿರಾಕರಿಸುತ್ತಿದ್ದಾರೆ. ಪ್ರಶ್ನಿಸಿದರೆ, ಈ ಮೊದಲೇ 3,500 ರೂ. ಪಾವತಿ ಮಾಡಿದ್ದೇವೆ. ಬಿಬಿಎಂಪಿ ಅಧಿಕಾರಿಗಳು ಸುಲಿಗೆ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ ಎಂದು ದೂರಿನಲ್ಲಿ ಪಾಲಿಕೆ ಅಧಿಕಾರಿ ಉಲ್ಲೇಖಿಸಿದ್ದಾರೆ. ಇದರ ಆಧಾರದ ಮೇಲೆ ಎಫ್​ಐಆರ್​ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

    ಚಿಕನ್ ಶವರ್ಮ ಸೇವಿಸಿದ್ದ ಓರ್ವ ವಿದ್ಯಾರ್ಥಿನಿ ಸಾವು, 14 ಮಂದಿ ಅಸ್ವಸ್ಥ

    ರಾಮನಗರದಲ್ಲಿ ಪೊಲೀಸ್​ ಮುಖ್ಯಪೇದೆ ಸಾವು: ಮದ್ವೆ ವಾರ್ಷಿಕೋತ್ಸವದ ಮುನ್ನಾದಿನವೇ ದುರಂತ

    ಇಡೀ ರಾತ್ರಿ ಗಂಡನ ಶವದ ಪಕ್ಕ ಮಲಗಿ ಹೈಡ್ರಾಮ… ಒಳ ಉಡುಪಲ್ಲಿ ಪತ್ನಿ ಬಚ್ಚಿಟ್ಟುಕೊಂಡ ಮಾಂಗಲ್ಯದ ಹಿಂದಿತ್ತು ಸ್ಫೋಟಕ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts