More

    ಮಲೆನಾಡಿನಲ್ಲಿ ಹೆಚ್ಚಾಯ್ತು ಕಾಡಾನೆಗಳ ಹಾವಳಿ: ಮನೆಗೇ ಬಂದು ಕಿಟಿಕಿ ಗಾಜು ಒಡೆದು ದಾಂಧಲೆ

    ಹಾಸನ: ಇತ್ತೀಚೆಗೆ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಜನರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಗಲು ಹೊತ್ತಿನಲ್ಲೂ ಕಾಡಾನೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಇಲ್ಲಿನ ಜನರು ಭಯದಿಂದಲೇ ಕಾಲ ಕಳೆಯುತ್ತಿದ್ದಾರೆ.

    ಜಿಲ್ಲೆಯ ಸಕಲೇಶಪುರ ತಾಲೂಕಿನ ಕೆಸಗುಲಿ ಗ್ರಾಮದಲ್ಲಿ ಮನೆಯ ಮುಂದೆ ಸುತ್ತಾಡಿದ ಆನೆ, ಕಿಟಿಕಿ ಗಾಜುಗಳನ್ನು ಒಡೆದು ಹಾಕಿದೆ. ಆನೆಯಿಂದ ಬೆದರಿದ ಮನೆಯ ಸದಸ್ಯರು ಹೊರಗೆ ಬರದೇ ಭಯದಲ್ಲೇ ಅಡಗಿಕುಳಿತಿದ್ದರು.

    ಶೇಖರ್​ ಎಂಬುವವರ ಮನೆ ಸುತ್ತ ಓಡಾಡಿದ ಆನೆ ಕಿಟಕಿ ಗಾಜು ಹಾಗೂ ಪಾಟ್​ಗಳನ್ನು ಒಡೆದುಹಾಕಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರಿಂದ ಅಧಿಕಾರಿಗಳು ಗ್ರಾಮಕ್ಕೆ ಬಂದು, ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಕಾಡಾನೆಗಳು ಗ್ರಾಮದ ಸುತ್ತಮುತ್ತ ಇರುವುದರಿಂದ ಮೈಕ್​ನಲ್ಲಿ ಅನೌನ್ಸ್​ ಮಾಡಿದ ಅಧಿಕಾರಿಗಳು ಗ್ರಾಮಸ್ಥರು ಎಚ್ಚರಿಕೆಯಿಂದ ಓಡಾಡುವಂತೆ ಸೂಚಿಸಿದ್ದಾರೆ.

    ಸದ್ಯ ಕಾಡಾನೆಗಳು ಎಲ್ಲಿ ಅಡಗಿವೆ ಎಂಬ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದು, ಆನೆಗಳು ಇರುವುದು ಖಚಿತಪಡಿಸಿ, ಕಾಡುಗಳಿಗೆ ಹಿಮ್ಮೆಟ್ಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಭಾರತ ಕ್ರಿಕೆಟ್​ ತಂಡದ ನಾಯಕ ರೋಹಿತ್​ ಶರ್ಮಾಗೆ ಕರೊನಾ ಪಾಸಿಟಿವ್​: ಬಿಸಿಸಿಐ ಸ್ಪಷ್ಟನೆ

    ಎಲ್ಲಿವರೆಗೂ ಅಡಗಿಕುಳಿತುಕೊಳ್ಳುತ್ತೀರಾ…? ರೆಬೆಲ್​ ಶಾಸಕರಿಗೆ ಸಂಜಯ್​ ರಾವತ್​ ಸವಾಲ್​​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts