More

    ಬೆಂಗಳೂರಲ್ಲಿ ಪಟಾಕಿ ಸ್ಫೋಟ: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಶಾಸಕ ಜಮೀರ್​

    ಬೆಂಗಳೂರು: ವಿವಿ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ತರಗುಪೇಟೆ ಬಳಿ ಶ್ರಿ ಮಹಾಕಾಳಿ ಅಮ್ಮನ್ ಲಾರಿ ಸರ್ವೀಸ್ ಗೋದಾಮಿನಲ್ಲಿ ಸಂಭವಿಸಿದ ಪಟಾಕಿ ಸ್ಫೋಟ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಚಾಮರಾಜಪೇಟೆ ಶಾಸಕ ಜಮೀರ್​ ಅಹ್ಮದ್​ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಈ ಅವಘಡದಲ್ಲಿ ಗಂಭೀರ ಗಾಯಗೊಂಡ ನಾಲ್ವರಿಗೆ ತಲಾ 50 ಸಾವಿರ ಪರಿಹಾರ ಘೋಷಿಸಿದ್ದಾರೆ. ಅಲ್ಲದೆ, ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನೂ ತಾವೇ ಭರಿಸುವುದಾಗಿ ಭರವಸೆ ನೀಡಿದ್ದಾರೆ.

    ಪಟಾಕಿ ಸ್ಫೋಟಗೊಂಡ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಟಾಟ ಏಸ್ ಡ್ರೈವರ್ ಮನೋಹರ್ (40) ಮತ್ತು ಪಂಚರ್ ಅಂಗಡಿಯ ಅಸ್ಲಾಂ ಪಾಷ (45) ಮೃತರು. ಮಂಜುನಾಥ್, ಜೇಮ್ಸ್, ಗಣಪತಿ, ರಂಗಸ್ವಾಮಿ ಎಂಬುವರು ಗಾಯಗೊಂಡಿದ್ದು, ರಂಗಸ್ವಾಮಿ(74) ಸ್ಥಿತಿ ಗಂಭೀರವಾಗಿದೆ. ವಿಕ್ಟೋರಿಯಾ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಲಾಗಿದ್ದು, ಶಾಸಕ ಜಮೀರ್​ ಆಸ್ಪತ್ರೆಗೂ ಭೇಟಿ ನೀಡಿದರು.

    ಘಟನಾ ಸ್ಥಳವನ್ನ ಎಫ್​ಎಸ್ಎಲ್ ತಂಡ ಪರಿಶೀಲನೆ ನಡೆಸುತ್ತಿದೆ. ಶ್ರಿ ಮಹಾಕಾಳಿ ಅಮ್ಮನ್ ಲಾರಿ ಸರ್ವೀಸ್ ಗೋದಾಮಿನಲ್ಲಿ 80 ಪಟಾಕಿ ಬಾಕ್ಸ್​ಗಳು ಇದ್ದವು. ಈ ಪೈಕಿ 2 ಬಾಕ್ಸ್​ ಸ್ಫೋಟಗೊಂಡಿದ್ದು, 78 ಬಾಕ್ಸ್​ ಹಾಗೇ ಇವೆ. ಪ್ರತಿ ಬಾಕ್ಸ್​ 15-20 ಕೆಜಿ ತೂಕ ಇದೆ. ಪಟಾಕಿ ಸ್ಫೋಟದಿಂದಲೇ ಈ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಘಟನೆ ಸಂಬಂಧ ಮಾಲೀಕ ಗಣೇಶ್​ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

    ಬೆಂಗಳೂರಲ್ಲಿ ಮತ್ತೊಂದು ಬೆಂಕಿ ಅವಘಡ: ಛಿದ್ರಗೊಂಡ ದೇಹಗಳು, ಇಬ್ಬರು ದುರ್ಮರಣ

    ಟ್ಯೂಷನ್​ ಮುಗಿಸಿ ಮನೆಗೆ ಬಂದ ಬಾಲಕ ಚೀರಾಡುತ್ತಾ ಹೊರ ಓಡಿದ… ಒಳಹೊಕ್ಕ ಸ್ಥಳೀಯರಿಗೆ ಕಾದಿತ್ತು ಶಾಕ್​!

    ವಿದ್ಯಾರ್ಥಿಯ ತಾಯಿಯನ್ನ ಪೀಡಿಸಿ ತರಗತಿಯಲ್ಲೇ ಮಸಾಜ್​ ಮಾಡಿಸಿಕೊಂಡ ಮುಖ್ಯಶಿಕ್ಷಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts