More

    ಬಡತನ ಕಾರಣಕ್ಕೆ 2 ವರ್ಷ ಓದಿಗೆ ಗುಡ್​ಬೈ ಹೇಳಿದ್ದ ವಿಜಯ್​ಗೂ ತಿಪಟೂರಿಗೂ ಇತ್ತು ಅವಿನಾಭಾವ ನಂಟು!

    | ಸೋರಲಮಾವು ಶ್ರೀಹರ್ಷ ತುಮಕೂರು
    ರಾಷ್ಟ್ರ ಪಶಸ್ತಿ ಪುರಸ್ಕೃತ ಪ್ರತಿಭಾನ್ವಿತ ನಟ ಸಂಚಾರಿ ಅವರ ಅಗಲಿಕೆ ಕಲ್ಪತರು ನಾಡು ತಿಪಟೂರಿಗೂ ತೀವ್ರ ನೋವು ತಂದಿದೆ. ತುಮಕೂರು ಗಡಿಗೆ ಅಂಟಿಕೊಂಡಿರುವ ಚಿಕ್ಕಮಗಳೂರು ಜಿಲ್ಲೆಯ ಗಡಿಯಲ್ಲಿರುವ ಪಂಚನಹಳ್ಳಿಯ ಸಂಚಾರಿ ವಿಜಯ್ ಅವರು ಪಿಯು ಶಿಕ್ಷಣ ಪಡೆದದ್ದು ತಿಪಟೂರಿನ ಕಲ್ಪತರು ವಿದ್ಯಾಸಂಸ್ಥೆಯಲ್ಲಿ.

    1999-2002ರವರೆಗೂ ತಿಪಟೂರಿನಲ್ಲಿದ್ದ ವಿಜಯ್ ಇಲ್ಲಿನ ಗೆಳೆಯರಾದ ವಿಜಯ್, ಗಿರೀಶ್, ವಿಜಯ್, ಮನೋಹರ್ ಮತ್ತಿತರರ ಜತೆ ತಮ್ಮ ಹಳೆಯ ಬೈಸಿಕಲ್​ನಲ್ಲಿ ಮಾಡಿದ್ದ ಪ್ರವಾಸ ಲೆಕ್ಕಕ್ಕಿಲ್ಲ. ಧರ್ಮಸ್ಥಳ, ಮಂಗಳೂರು, ಕುಕ್ಕೆ ಸುಬ್ರಹ್ಮಣ್ಯಕ್ಕೆಲ್ಲ ಸೈಕಲ್ ತುಳಿದ ನೆನಪುಗಳನ್ನು ಅವರೇ ಬರೆದುಕೊಂಡಿದ್ದಾರೆ.

    ಬಡತನ ಕಾರಣಕ್ಕೆ 2 ವರ್ಷ ಓದಿಗೆ ಗುಡ್​ಬೈ ಹೇಳಿದ್ದ ವಿಜಯ್​ಗೂ ತಿಪಟೂರಿಗೂ ಇತ್ತು ಅವಿನಾಭಾವ ನಂಟು!

    ಸೈಕಲ್ ಟೂರ್​ನಲ್ಲಿ ತಿಪಟೂರು ಬಿಟ್ಟ ಸೈಕಲ್ ನಿಲ್ಲುತ್ತಿದ್ದದ್ದು ಹಾಸನದಲ್ಲಿಯೇ. ಅಂದಿನ ಮಳೆಯ ನಡುವೆಯೇ ಸಾಕಷ್ಟು ಸಲ ಪ್ರವಾಸದ ಪ್ರಯಾಣವನ್ನು ನೆನೆದು ಭಾವುಕರಾಗುತ್ತಾರೆ ಅವರ ಸ್ನೇಹಿತರು. ನಂತರ ಗೆಳೆಯರು ಬೈಕ್ ಖರೀದಿಸಿದಾಗಲೂ ವಿಜಯ್ ಚಿಕ್ಕಮಗಳೂರು, ಮುಳ್ಳಯ್ಯನಗಿರಿ, ಕಲ್ಲತ್ತಿಗಿರಿ, ಕೆಮ್ಮಣ್ಣುಗುಂಡಿಗೆ ಸಾಕಷ್ಟು ಸಲ ಹೋಗಿ ಬಂದಿರುವ ನೆನಪಿನ ಬುತ್ತಿಯಿದೆ.

    ಬಡತನ ಕಾರಣಕ್ಕೆ 2 ವರ್ಷ ಓದಿಗೆ ಗುಡ್​ಬೈ ಹೇಳಿದ್ದ ವಿಜಯ್​ಗೂ ತಿಪಟೂರಿಗೂ ಇತ್ತು ಅವಿನಾಭಾವ ನಂಟು!

    ತಿಪಟೂರಿನಲ್ಲಿಯೇ ಡ್ರೈವಿಂಗ್ ಕಲಿತಿದ್ದು: ವಿಜಯ್ ಪಿಯು ಓದುವಾಗಲೇ ಅವರ ಗೆಳೆಯ ತಿಪಟೂರಿನ ಸಚಿನ್ ಮಾರುತಿ 800 ಕಾರು ಇಟ್ಟುಕೊಂಡಿದ್ದರು. ಅದೇ ಕಾರಿನಲ್ಲಿ ವಿಜಯ್ ಆರಂಭದಲ್ಲಿ ಕಾರು ಕಲಿತದ್ದು. ಸದಾ ಪ್ರವಾಸಕ್ಕೆ ಹಾತೊರೆಯುತ್ತಿದ್ದು ಇವರ ಸ್ನೇಹ ಬಳಗ ಇದೇ ಕಾರಿನಲ್ಲಿ ಅದೆಷ್ಟೊ ಸಲ ಸುತ್ತಾಡಿದೆ.

    ಬಡತನ ಕಾರಣಕ್ಕೆ 2 ವರ್ಷ ಓದಿಗೆ ಗುಡ್​ಬೈ ಹೇಳಿದ್ದ ವಿಜಯ್​ಗೂ ತಿಪಟೂರಿಗೂ ಇತ್ತು ಅವಿನಾಭಾವ ನಂಟು!

    ಪಿಯುಸಿ ನಂತರ ಬಡತನದ ಕಾರಣಕ್ಕೆ ಎರಡು ವರ್ಷ ಓದಿಗೆ ಗುಡ್​ಬೈ ಹೇಳಿದ್ದ ಸಂಚಾರಿ ವಿಜಯ್ ನಂತರ ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಬಿಎಸ್ಸಿಗೆ ಪ್ರವೇಶ ಪಡೆದರು. ಬಳಿಕ ಸಿಇಟಿ ಬರೆದು ಇಂಜಿನಿಯರಿಂಗ್​ಗೆ ಸೀಟು ಗಿಟ್ಟಿಸಿಕೊಂಡ ಕಾರಣಕ್ಕೆ ತಿಪಟೂರು ಬಿಟ್ಟು ಬೆಂಗಳೂರು ಸೇರಿದರು. ನಂತರ ಅವಕಾಶಗಳು ಸಿಕ್ಕವು, ಪ್ರತಿಭೆಗೆ ಮನ್ನಣೆ ಸಿಕ್ಕಿ ಕೀರ್ತಿ ಪಡೆದರೂ ತಿಪಟೂರು ಜತೆಗೆ ಒಡನಾಟ ಮುಂದುವರಿದಿತ್ತು.

    ಬಡತನ ಕಾರಣಕ್ಕೆ 2 ವರ್ಷ ಓದಿಗೆ ಗುಡ್​ಬೈ ಹೇಳಿದ್ದ ವಿಜಯ್​ಗೂ ತಿಪಟೂರಿಗೂ ಇತ್ತು ಅವಿನಾಭಾವ ನಂಟು!

    ರಾಷ್ಟ್ರ ಪ್ರಶಸ್ತಿ ಪಡೆದ ನಂತರ ಸ್ನೇಹಿತರು ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಬರುತ್ತಿದ್ದರು. ಊರಿಗೆ ತೆರಳುವಾಗಲೆಲ್ಲಾ ತಿಪಟೂರು ಗೆಳೆಯರನ್ನು ಮಾತನಾಡಿಸಿಕೊಂಡೇ ಹೋಗುತ್ತಿದ್ದರು. ದೊಡ್ಡ ನಟನಾದರೂ ಹಳೆಯದನ್ನು ಮರೆತಿರಲಿಲ್ಲ. ಅವನ ಸಾವು ನಮಗೆ ನಂಬಲಾಗುತ್ತಿಲ್ಲ ಎಂದು ವಿಜಯ್ ಜತೆಗಿದ್ದ ನೂರಾರು ಫೋಟೋ ಹರಡಿಕೊಂಡು ಕಣ್ಣೀರು ಸುರಿಸಿದರು ಗೆಳೆಯ ಸಚಿನ್.

    ಬಡತನ ಕಾರಣಕ್ಕೆ 2 ವರ್ಷ ಓದಿಗೆ ಗುಡ್​ಬೈ ಹೇಳಿದ್ದ ವಿಜಯ್​ಗೂ ತಿಪಟೂರಿಗೂ ಇತ್ತು ಅವಿನಾಭಾವ ನಂಟು!

    ಸಂಚಾರಿ ವಿಜಯ್ ಸರಸ್ವತಿ ಪುತ್ರ. ಕಡು ಬಡತನದಲ್ಲಿ ಪಿಯು ಓದಲು ತಿಪಟೂರಿಗೆ ಬಂದಾಗಲೇ ಗೆಳೆಯರ ಬಳಗ ಸೃಷ್ಟಿಸಿಕೊಂಡಿದ್ದ. ಎಲ್ಲಿಯೇ ರಸಮಂಜರಿ ನಡೆದರೂ ಮೈಕ್ ಪಡೆಯಲು ಹಾತೊರೆಯುತ್ತಿದ್ದ, ಅವನು ನಮ್ಮ ಮಾರುತಿ 800 ಕಾರಿನಲ್ಲಿಯೇ ಡ್ರೈವಿಂಗ್ ಕಲಿತದ್ದು. ಹುಟ್ಟು ಕಲಾವಿದನ ಅಗಲಿಕೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ.
    | ಸಚಿನ್ ಸಂಚಾರಿ ವಿಜಯ್ ಒಡನಾಡಿ, ತಿಪಟೂರು

    ಸಾವಿಗೂ 4 ದಿನ ಮೊದಲೇ ಸಂಚಾರಿ ವಿಜಯ್​ ಬರೆದಿದ್ದ ಈ ಬರಹ ಓದಿದ್ರೆ ಕಣ್ಣು ತುಂಬಿ ಬರುತ್ತೆ

    ನಟ ಸಂಚಾರಿ ವಿಜಯ್​ಗೆ ಧಾರವಾಡ ಕಲಾವಿದನ ‘ಕಲಾ ಶ್ರದ್ಧಾಂಜಲಿ’

    ಸಾವಿನಲ್ಲೂ ಸಾರ್ಥಕತೆ ಮೆರೆದ ಸಂಚಾರಿ ವಿಜಯ್​, ಅಂಗಾಂಗ ದಾನದಿಂದ 7 ಜನರಿಗೆ ಹೊಸ ಬದುಕು

    ರವೀಂದ್ರ ಕಲಾಕ್ಷೇತ್ರಕ್ಕೆ ಬಂದ ವಿಜಯ್​ ಪಾರ್ಥಿವ ಶರೀರ, ಸ್ನೇಹಿತನ ತೋಟದಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts