More

    ಜನಾಂಗೀಯ ಕಿಚ್ಚಿಗೆ ಹೊತ್ತಿ ಉರಿಯುತ್ತಿರುವ ಅಮೆರಿಕ

    ವಾಷಿಂಗ್ಟನ್: ಅಮೆರಿಕದಲ್ಲಿ ಆಫ್ರಿಕಾ ಮೂಲದ ವ್ಯಕ್ತಿಯನ್ನು ಪೊಲೀಸರು ಹತ್ಯೆ ಮಾಡಿದ ವಿರುದ್ಧ ಆರಂಭಗೊಂಡಿರುವ ಜನಾಂಗೀಯ ಸಂಘರ್ಷ ತಾರಕಕ್ಕೇರಿದ್ದು, ದಶಕದಲ್ಲೇ ಭೀಕರ ಪ್ರತಿಭಟನಾ ಕಿಚ್ಚಿಗೆ ಅಮೆರಿಕ ಸಾಕ್ಷಿಯಾಗಿದೆ.

    ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತೀವ್ರ ಘರ್ಷಣೆ ನಡೆಯುತ್ತಿದ್ದು, ಅಲ್ಲಲ್ಲಿ ಹಿಂಸಾಚಾರ ಘಟನೆಗಳು ವರದಿಯಾಗಿವೆ. ಪ್ರತಿಭಟನಾಕಾರರು ಶ್ವೇತಭವನದ ಬಳಿಯ ಪಾರ್ಕ್​ನಲ್ಲಿ ಜಮಾವಣೆಗೊಂಡು ವ್ಯಾಪಕ ಪ್ರತಿಭಟನೆ ನಡೆಸಿ, ಒಳನುಗ್ಗಲು ಯತ್ನಿಸಿದ್ದರು. ಶ್ವೇತಭವನದ ಸಿಬ್ಬಂದಿ ಉಪಯೋಗಕ್ಕಾಗಿ ಇದ್ದ ಕಟ್ಟಡವೊಂದಕ್ಕೆ ಬೆಂಕಿ ಹಚ್ಚಿ, ಶ್ವೇತಭವನದತ್ತ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಸುರಕ್ಷತೆ ದೃಷ್ಟಿಯಿಂದ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರನ್ನು ಭದ್ರತಾ ಪಡೆಗಳು ಶ್ವೇತಭವನದ ಗುಪ್ತ ಸ್ಥಳದಲ್ಲಿರುವ ಬಂಕರ್​ನಲ್ಲಿ ಇರಿಸಿದ್ದರು. ಸುಮಾರು ಒಂದು ತಾಸಿನವರೆಗೆ ಟ್ರಂಪ್ ಅಲ್ಲಿದ್ದರು ಎಂದು ತಿಳಿದುಬಂದಿದೆ. ಬಳಿಕ ಪೊಲೀಸರು ಅಶ್ರುವಾಯು ಮತ್ತು ಪೆಪ್ಪರ್ ಸ್ಪ್ರೇಗಳನ್ನು ಪ್ರಯೋಗಿಸಿ ಪ್ರತಿಭಟನಾಕಾರರನ್ನು ಹತ್ತಿಕ್ಕಿದ್ದಾರೆ. ವಾಷಿಂಗ್ಟನ್ ನಗರವೊಂದರಲ್ಲೇ ಸುಮಾರು 1,700ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ.

    ಇದನ್ನೂ ಓದಿ   ಬೆಂಕಿ ಕೆನ್ನಾಲಿಗೆಗೆ ಸುಟ್ಟು ಕರಕಲಾದ ಟೈರ್​ಗಳು

    ಅಮೆರಿಕದ ಹಲವು ರಾಜ್ಯಗಳ 140ಕ್ಕೂ ಹೆಚ್ಚು ನಗರಳಲ್ಲಿ ಪ್ರತಿಭಟನೆ ವ್ಯಾಪಕವಾಗಿದೆ. ವಾಷಿಂಗ್ಟನ್, ಲಾಸ್ ಏಂಜಲಿಸ್, ಅಟ್ಲಾಂಟಾ, ಚಿಕಾಗೊ, ಹ್ಯೂಸ್ಟನ್ ಸೇರಿ 40ಕ್ಕಿಂತ ಹೆಚ್ಚು ಪ್ರಮುಖ ನಗರಗಳಲ್ಲಿ ಸಂಪೂರ್ಣ ಕರ್ಫ್ಯೂ ವಿಧಿಸಲಾಗಿದೆ. ಆದರೂ ಸಾವಿರಾರು ಪ್ರತಿಭಟನಾಕಾರರು ರಸ್ತೆಗಿಳಿಯುತ್ತಿದ್ದು, ಸಾರ್ವಜನಿಕ ಆಸ್ತಿ ಹಾನಿ ಮಾಡುತ್ತಿದ್ದಾರೆ. ಪೊಲೀಸರ ಮೇಲೂ ಹಲ್ಲೆ ನಡೆಸಿದ್ದಾರೆ. ಜನಾಂಗೀಯ ಸಂಘರ್ಷವನ್ನು ಟ್ರಂಪ್ ಆಡಳಿತ ದೇಶೀಯ ಭಯೋತ್ಪಾದನೆ ಎಂದು ಕರೆದಿರುವುದು ಪ್ರತಿಭಟನಾಕಾರರ ಕೋಪವನ್ನು ಹೆಚ್ಚಿಸಿದೆ. ಈವರೆಗೆ ಸುಮಾರು 4 ಸಾವಿರಕ್ಕೂ ಅಧಿಕ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ. ಪ್ರತಿಭಟನಾಕಾರರು ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ತಡೆದು ಹಾನಿಗೊಳಿಸಿ ಬೆಂಕಿ ಹಚ್ಚುತ್ತಿದ್ದಾರೆ. ವಾಷಿಂಗ್ಟನ್​ನಲ್ಲಿ ದೊಡ್ಡ ಟ್ರಂಕ್​ವೊಂದು ಪ್ರತಿಭಟನೆ ಮಧ್ಯೆ ನುಗ್ಗಲು ಯತ್ನಿಸಿದಾಗ ಆಕ್ರೋಶಗೊಂಡ ಪ್ರತಿಭಟನಾಕಾರರು ಟ್ರಕ್​ಗೆ ಹಾನಿ ಮಾಡಿ, ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಪ್ರತಿಭಟನೆ ಹೆಚ್ಚಿಸಿದ ಟ್ರಂಪ್ ಹೇಳಿಕೆ: ‘ನಿಮ್ಮ ವಿರುದ್ಧ ದುಷ್ಟನಾಯಿಗಳನ್ನು ಛೂ ಬಿಡಲೇ ಅಥವಾ ಅತಿಭಯಂಕರ ಆಯುಧ ಬಳಸಲು ಆದೇಶಿಸಲೇ’ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದ್ದರು. ಇದು ಪ್ರತಿಭಟನೆ ಕಾವನ್ನು ಮತ್ತಷ್ಟು ಹೆಚ್ಚಿಸಿದೆ. ಟ್ರಂಪ್​ರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನಾಕಾರರು ತಮ್ಮ ಹೋರಾಟವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಟ್ರಂಪ್ ಹೇಳಿಕೆಗೆ ಅಮೆರಿಕದ ಅನೇಕ ರಾಜ್ಯಗಳ ಮೇಯರ್​ಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಈ ರೀತಿಯ ಹೇಳಿಕೆಯಿಂದ ಪರಿಸ್ಥಿತಿ ನಿರ್ವಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.

    ಇದನ್ನೂ ಓದಿ  ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ

    ನಮ್ಮವರನ್ನು ಸಾಯಲು ಬಿಡುವುದಿಲ್ಲ: ‘ನಮಗೆ ಕಪು್ಪ ಬಣ್ಣದ ಮಕ್ಕಳು, ಸಹೋದರ-ಸಹೋದರಿಯರಿದ್ದಾರೆ. ನಾವು ಅವರನ್ನೆಲ್ಲ ಸಾಯಲು ಬಿಡುವುದಿಲ್ಲ. ಇಷ್ಟು ವರ್ಷ ಅನುಭವಿಸಿರುವ ದಬ್ಬಾಳಿಕೆಯನ್ನು ಮುಂದಿನ ಪೀಳಿಗೆ ಅನುಭವಿಸಲು ಬಿಡುವುದಿಲ್ಲ’ ಎಂದು ಪ್ರತಿಭಟನಾ ನಿರತ ಮುನಾ ಅದ್ಬಿ ಎಂಬ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಂಗಡಿಗಳ ಲೂಟಿ: ಅಮೆರಿಕದ ವಿವಿಧೆಡೆ ಪ್ರತಿಭಟನಾಕಾರರು ಅಂಗಡಿಗಳನ್ನು ಒಡೆದು ಕೈಗೆ ಸಿಕ್ಕ ವಸ್ತುಗಳನ್ನೆಲ್ಲ ದೋಚುತ್ತಿದ್ದಾರೆ. ಲಾಸ್ ಏಂಜಲಿಸ್ ಸೇರಿ ಅನೇಕ ನಗರಗಳಲ್ಲಿನ ಅಂಗಡಿಗಳ ಗ್ಲಾಸ್ ಒಡೆದು ಒಳನುಗ್ಗಿದ ಪ್ರತಿಭಟನಾಕಾರರು ವಸ್ತುಗಳನ್ನೆಲ್ಲ ಸಾಮೂಹಿಕವಾಗಿ ಲೂಟಿ ಮಾಡಿದ್ದಾರೆ. ಸ್ಪೋರ್ಟ್ಸ್ ಶೋರೂಮ್ಳಲ್ಲಿನ ಸೈಕಲ್​ಗಳು ಸೇರಿ ಅನೇಕ ದೊಡ್ಡ ದೊಡ್ಡ ಬೆಲೆ ಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ.

    ಪ್ರತಿಭಟನಾಕಾರರು ಉಗ್ರರು!

    ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಓಬ್ರೇನ್ ಪ್ರತಿಭಟನಾಕಾರರನ್ನು ಉಗ್ರರು ಎಂದು ಕರೆದಿದ್ದಾರೆ. ಇದರಿಂದ ಪ್ರತಿಭಟನೆ ಕಿಡಿ ಮತ್ತಷ್ಟು ಉಲ್ಬಣಿಸಿದೆ. ಪ್ರತಿಭಟನೆ ನಡೆಸುತ್ತಿರುವವರು ಯಾರೇ ಆದರೂ ಅವರು ನಮ್ಮ ನಗರಕ್ಕೆ ಬೆಂಕಿ ಹಚ್ಚುತ್ತಿರುವ ಉಗ್ರರು. ಪ್ರತಿಭಟನೆ ನಿಗ್ರಹಿಸಲು ನಾವು ಅವರಿಗಿಂತ ಕೆಳಹಂತಕ್ಕೆ ಹೋಗುತ್ತೇವೆ ಎಂದು ರಾಬರ್ಟ್ ಹೇಳಿದ್ದಾರೆ.

    ಖಾಕಿ ದೌರ್ಜನ್ಯ ಕಾರಣ

    ನಕಲಿ ಬಿಲ್ ನೀಡಿ ಅಂಗಡಿಯಲ್ಲಿ ಖರೀದಿ ನಡೆಸಿದ್ದಾರೆಂಬ ಆರೋಪದ ಮೇಲೆ ಆಫ್ರಿಕಾ ಮೂಲದ ಅಮೆರಿಕನ್ ಪ್ರಜೆ ಜಾರ್ಜ್ ಫ್ಲಾಯ್್ಡ (46) ಎಂಬುವರನ್ನು ಪೊಲೀಸರು ಕಳೆದ ಸೋಮವಾರ ಬಂಧಿಸಿದ್ದರು. ಈ ಸಮಯದಲ್ಲಿ ಪೊಲೀಸ್ ಅಧಿಕಾರಿ ಫ್ಲಾಯ್್ಡ ಕುತ್ತಿಗೆ ಮೇಲೆ ಮೊಣಕಾಲಿಟ್ಟು ಒತ್ತಿ ಹಿಡಿದಿದ್ದರಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದ. ಇದನ್ನು ಖಂಡಿಸಿ ಮಿನ್ನಿಯಾದಲ್ಲಿ 7 ದಿನದ ಹಿಂದೆ ಆರಂಭವಾದ ಪ್ರತಿಭಟನೆ ಈಗ ವಿವಿಧ ನಗರಗಳಿಗೆ ವಿಸ್ತರಣೆಯಾಗಿದೆ. ಫ್ಲಾಯ್್ಡ ಸಾವಿಗೆ ಕಾರಣರಾದ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕೆಂಬುದು ಪ್ರತಿಭಟನಾಕಾರರ ಆಗ್ರಹ.

    ಅಂತಿಮ ವರ್ಷದ ಪದವಿ ಪರೀಕ್ಷೆಯೂ ರದ್ದು, ಸರಾಸರಿ ಅಂಕ ನೀಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts