More

    ಸಂಬಂಧಗಳ ಬೆಸೆಯುವ ಹಬ್ಬ; ತಾರೆಯರ ನವರಾತ್ರಿ

    ಇಂದಿನಿಂದ ದಸರಾ ಸಂಭ್ರಮ. ಭಾರತೀಯರಿಗೆ ಮುಂದಿನ 10 ದಿನಗಳ ಕಾಲ, ಪ್ರತಿ ದಿನ ಸಹ ಒಂದಲ್ಲ ಒಂದು ಕಾರಣಕ್ಕೆ ಮುಖ್ಯ ಎಂದರೆ ತಪ್ಪಿಲ್ಲ. ದಸರಾ ಹಬ್ಬವು ತಮಗೆಷ್ಟು ಮಹತ್ವವಾದದ್ದು ಎಂದು ಕನ್ನಡ ಚಿತ್ರರಂಗದ ಜನಪ್ರಿಯ ನಟಿಯರು ಪ್ರತಿ ದಿನ ತಮ್ಮ ಅನುಭವಗಳನ್ನು ‘ವಿಜಯವಾಣಿ’ ಜತೆಗೆ ವಿಶೇಷವಾಗಿ ಹಂಚಿಕೊಳ್ಳಲಿದ್ದಾರೆ.

    ದಸರಾ ಹಬ್ಬ ಅಂದರೆ ನನಗೆ ವಿಶೇಷ. ಸಾಮಾನ್ಯವಾಗಿ ಪ್ರತಿ ವರ್ಷ ದಸರಾ ಹಬ್ಬದ ಸಮಯದಲ್ಲಿ ನಾನು ಭರತನಾಟ್ಯ ಕಾರ್ಯಕ್ರಮಗಳಲ್ಲಿ ಬಿಜಿಯಾಗಿರುತ್ತೇನೆ. ಜತೆಗೆ ಮನೆಯಲ್ಲಿ ಪಟ್ಟದ ಗೊಂಬೆ ಕೂರಿಸುವುದು, ಸರಸ್ವತಿ ಪೂಜೆ, ಆಯುಧ ಪೂಜೆಯನ್ನು ಸಂಭ್ರಮದಿಂದ ಆಚರಿಸುತ್ತೇವೆ. ಅರಿಶಿನ ಕುಂಕುಮಕ್ಕೆ ಸ್ನೇಹಿತೆಯರು, ಸಂಬಂಧಿಕರನ್ನು ಕರೆಯುತ್ತೇವೆ. ಪುಟ್ಟ ಮಕ್ಕಳಿಗೆ ಬಾಗಿನ ಕೊಡುತ್ತೇವೆ. ನನ್ನ ಅತ್ತೆ, ದೊಡ್ಡಮ್ಮ ಮನೆಯಲ್ಲಿ ಗೊಂಬೆಗಳನ್ನು ಕೂರಿಸಿ ತುಂಬ ಚೆನ್ನಾಗಿ ದಸರಾ ಆಚರಿಸುತ್ತಾರೆ. ಅವರ ಮನೆಗಳಿಗೆ ಹೋಗುತ್ತೇನೆ. ದಸರಾ ಸಂಬಂಧಗಳನ್ನು ಬೆಸೆಯುವ ಹಬ್ಬ.

    ಈ ಬಾರಿಯ ದಸರಾ ನನಗೆ ತುಂಬ ವಿಶೇಷವಾಗಲು ಕಾರಣ, ಇದೇ ಮೊದಲ ಬಾರಿಗೆ ಮೈಸೂರು ದಸರಾದಲ್ಲಿ ಅರಮನೆ ಮುಂದೆ ಭರತನಾಟ್ಯ ಕಾರ್ಯಕ್ರಮ ನೀಡಲಿದ್ದೇನೆ. ನಾನು ಮತ್ತು ವಂದನಾ ಕಾಸರವಳ್ಳಿ ಸೇರಿ ಒಂದು ಗಂಟೆಯ ಕಾರ್ಯಕ್ರಮ ನಿರ್ದೇಶಿಸಿದ್ದೇವೆ. ಸುಮಾರು 80 ಜನ ಡಾನ್ಸರ್​ಗಳು, ಒಂಭತ್ತು ಮಂದಿ ನಟಿಯರು ನಮ್ಮ ಜತೆ ಕಾರ್ಯಕ್ರಮ ನೀಡಲಿದ್ದಾರೆ. ಅಕ್ಟೋಬರ್ 2ರಂದು ಕಾರ್ಯಕ್ರಮ ನಡೆಯಲಿದೆ. ಹೀಗಾಗಿಯೇ ಈ ಬಾರಿ ಈ ಕಾರ್ಯಕ್ರಮವೇ ನಮಗೆ ದಸರಾ ಹಬ್ಬವಾಗಿದೆ.

    | ರೂಪಿಕಾ

    ಅಂಗೈಯಲ್ಲೇ ಅಂಬಾರಿ-ಜಂಬೂಸವಾರಿ: ಕುಳಿತಲ್ಲೇ ಕಣ್ತುಂಬಿಕೊಳ್ಳಬಹುದು ದಸರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts