More

    ಸೈನಿಕನ ಮೃತ ದೇಹಕ್ಕಾಗಿ ಎಂಟು ತಿಂಗಳಿನಿಂದ ನೆಲ ಅಗೆಯುತ್ತಿರುವ ತಂದೆ!

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಅರೆ ಸೇನಾ ಪಡೆಯಲ್ಲಿ (ಟುಟೋರಿಯಲ್ ವಿಭಾಗ) ಕೆಲಸ ಮಾಡುವಾಗ ನಾಪತ್ತೆಯಾಗಿದ್ದ ತನ್ನ ಮಗನನ್ನು ಸತತ ಎಂಟು ತಿಂಗಳಿಂದ ಹುಡುಕಾಡುತ್ತಿರುವ ತಂದೆಯೊಬ್ಬನ ಮನಕಲುಕುವ ಕಥನವಿದು. ಆದರೆ, ಆ ತಂದೆ ಎಂಟು ತಿಂಗಳಿನಿಂದ ಮಗನ ಮೃತ ದೇಹಕ್ಕಾಗಿ ನೆಲ ಅಗೆಯುತ್ತಿದ್ದಾನೆ.

    ಹೌದು ಜಮ್ಮು ಕಾಶ್ಮೀರದಲ್ಲಿ 2020 ರ ಆಗಷ್ಟ್​ 2 ರಂದು ಅರೆ ಸೇನಾ ಪಡೆಯಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ಶಾಕೀರ ಮಂಜೂರ್ ಎಂಬ ಸೈನಿಕ ಸ್ನೇಹಿರ ಜೊತೆ ಹೋಗಿ ಬರುತ್ತೇನೆಂದು ಮನೆಯಲ್ಲಿ ತಂದೆ ಅಹ್ಮದ್​ ಅವರಿಗೆ ಹೇಳಿ ಹೊರಗೆ ಹೋಗಿದ್ದ. ಆದರೆ, ಮೂರು ದಿನಗಳ ಬಳಿಕ ಕುಲ್ಗಾಮಾದಲ್ಲಿ ಆತನ ವಾಹನ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

    ಅಸಲಿಗೆ ಶಾಕೀರ್​ನನ್ನು ಆಗಷ್ಟ್​ 2 ರಂದು ಭಯೋತ್ಪಾದಕರು ಅಪಹಿರಿಸದ್ದರು. ತಾನು ಸ್ನೇಹಿತರ ಜೊತೆ ಹೋಗುತ್ತಿರುವುದಾಗಿ ತಂದೆ ಬಳಿ ಭಯೋತ್ಪಾದಕರು ಶಾಕೀರ್​ನಿಂದ ಸುಳ್ಳು ಹೇಳಿಸಿದ್ದರು. ಅಪಹರಣ ಆದ ಒಂದು ವಾರದ ಬಳಿಕ ಆತನ ಮನೆಯಿಂದ ಮೂರು ಕಿಮೀ ದೂರ ಶಾಕೀರ್​​ನ ರಕ್ತಸಿಕ್ತ ಸಮವಸ್ತ್ರ ಪತ್ತೆಯಾಗಿತ್ತು.

    ಇದನ್ನೂ ಓದಿ: ಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ದರ: ಗುಡ್​ ನ್ಯೂಸ್ ಕೊಟ್ಟ ಸಚಿವೆ ನಿರ್ಮಲಾ ಸೀತಾರಾಮನ್

    ಮಗ ಭಯೋತ್ಪಾದಕರ ಕೃತ್ಯಕ್ಕೆ ಬಲಿಯಾಗಿದ್ದಾನೆ ಎಂದು ಶಂಕಿಸಲಾಯಿತು. ಪೊಲೀಸ್ ಹಾಗೂ ಕುಟುಂಬದವರು ಶಾಕೀರ್​ನ ಶವಕ್ಕಾಗಿ ಎಷ್ಟೇ ಹುಡುಕಾಡಿದರೂ ಸಿಗಲಿಲ್ಲ. ಕಡೆಗೆ ಶಾಕೀರ್​ನ ಸಂಬಂಧಿಯೊಬ್ಬರು ಆತನ ತಂದೆ ಅಹ್ಮದ್ ಬಳಿ ಬಂದು ನಿಮ್ಮ ಮಗ ನನ್ನ ಕನಸಿನಲ್ಲಿ ಬಂದು ಆತನ ಶವ ಇರುವ ಸ್ಥಳವನ್ನು ಹೇಳಿದ್ದಾನೆ ಎಂದು ಆಗಸ್ಟ್​ ಕೊನೆಯಲ್ಲಿ ಹೇಳಿದ್ದಳು.

    ಇದನ್ನು ನಂಬಿರುವ ತಂದೆ ಕಳೆದ ಎಂಟು ತಿಂಗಳಿನಿಂದ ಮಗ ಶಾಕೀರ್​​ನ ಶವಕ್ಕಾಗಿ ಭೂಮಿ ಅಗೆಯುತ್ತಿದ್ದಾರೆ. ಆದರೂ ಅವರು ಇನ್ನೂ ತಮ್ಮ ಆಸೆಯನ್ನು ಬಿಟ್ಟಿಲ್ಲ. ಇದಕ್ಕಾಗಿ ಗ್ರಾಮಸ್ಥರೂ ಅಹ್ಮದ್​ ಅವರಿಗೆ ಕೈ ಜೋಡಿಸಿದ್ದಾರೆ. ಶಾಕೀರ್​ ಶವ ಸಿಗದಿದ್ದರಿಂದ ಸೇನೆಯಲ್ಲಿ ಆತನನ್ನು ಇದುವರೆಗೂ ಹುತಾತ್ಮ ಎಂದು ಘೋಷಣೆ ಮಾಡಲಾಗಿಲ್ಲ. ಈ ಕುರಿತು ಏನೇ ಮಾಹಿತಿ ಸಿಕ್ಕರೂ ಕುಟುಂಬದವರೊಂದಿಗೆ ಹಂಚಿಕೊಳ್ಳುತ್ತೇವೆ ಎಂದಿದ್ದಾರೆ ಪೊಲೀಸ್ ಅಧಿಕಾರಿಳು.

    ಇಸ್ರತ್ ಜಹಾನ್ ಎನ್​ಕೌಂಟರ್​ ಪ್ರಕರಣ: ಕೊನೆಯ ಮೂವರು ಆರೋಪಿಗಳನ್ನೂ ಖುಲಾಸೆಗೊಳಿಸಿದ ಸಿಬಿಐ ನ್ಯಾಯಾಲಯ

    ಒಂದೆಡೆ ಪ್ರೀತಿಯ ಹುಡುಗ… ಇನ್ನೊಂದೆಡೆ ಆಣೆ ಮಾಡಿಸಿಕೊಂಡ ಅಣ್ಣ… ಗೊಂದಲದ ಮನಕೆ ದಾರಿ ತೋರಿ ಮೇಡಂ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts