More

    ಕಲಬುರಗಿಯ ರಸ್ತೆಗಳಲ್ಲಿ ಕೂತು ನಾಕಾಬಂದಿ ಹಾಕಿದ ರೈತರು: ಕಾರ್ಮಿಕ, ಪ್ರಗತಿಪರ ಸಂಘಟನೆಗಳು ಸಾಥ್​

    ಕಲಬುರಗಿ: ಕೆಂದ್ರ ಸರ್ಕಾರದ ಕೃಷಿ ನೀತಿ ವಿರೋಧಿಸಿ ರೈತರು ಭಾರತ್​ ಬಂದ್​ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರ ಗುಂಪುಗಳು ಪ್ರತ್ಯೇಕವಾಗಿ ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದ ಎದುರು, ರಾಮಮಂದಿರ ರಸ್ತೆ, ಆಳಂದ ನಾಕಾ, ಸೇಡಂ ರಸ್ತೆಯ ಖರ್ಗೆ ಪೆಟ್ರೋಲ್ ಪಂಪ್, ಹುಮನಾಬಾದ್ ವೃತ್ತದಲ್ಲಿ ರಸ್ತೆ ತಡೆ ನಡೆಸಿ ‌ನಗರ‌ ಪ್ರವೇಶದಲ್ಲಿ ನಾಕಾಬಂದಿಗೆ ಯತ್ನಿಸಿದರು.

    ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು, ವಿದ್ಯುತ್ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಂಯುಕ್ತ ಕಿಸಾನ್​ ಮೋರ್ಚಾ ಕರೆ ನೀಡಿದ ಭಾರತ್​ ಬಂದ್ ಅಂಗವಾಗಿ ವಿವಿಧ ರೈತ, ಕಾರ್ಮಿಕ, ಪ್ರಗತಿಪರ ಸಂಘಟನೆಗಳು, ಕಾಂಗ್ರೆಸ್, ಸಿಪಿಐಎಂ, ಎಸ್ ಯುಸಿಐ (ಕಮ್ಯುನಿಸ್ಟ್), ಸಿಪಿಐ ಸೇರಿದಂತೆ ಹಲವು ಸಂಘಟನೆಗಳು ಕಲಬುರಗಿ ಬಂದ್​ಗೆ ಕರೆ ನೀಡಿವೆ.

    ಸಾರಿಗೆ ಸಂಸ್ಥೆ ಬಸ್​ಗಳನ್ನು ಹೊರತುಪಡಿಸಿ ಇತರೆ ವಾಹನಗಳ ಸಂಚಾರ ಎಂದಿನಂತಿದೆ. ಕಲಬುರಗಿ ಕೇಂದ್ರೀಯ ಬಸ್ ನಿಲ್ದಾಣದ ಬಳಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ. ನೀಲಾ, ‘ರೈತರು, ಕಾರ್ಮಿಕರು,‌ ಮಹಿಳೆಯರನ್ನು ತೀವ್ರ ಸಂಕಷ್ಟಕ್ಕೆ ತಳ್ಳಿರುವ ಪ್ರಧಾನಿ ನರೇಂದ್ರ ‌ಮೋದಿ ಅವರು ಚೌಕಿದಾರ ಅಲ್ಲ. ಬದಲಾಗಿ ಅವರು ಅದಾನಿ, ಅಂಬಾನಿಯಂತಹ ಶ್ರೀಮಂತ ಉದ್ಯಮಿಗಳ ಗುಲಾಮ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಬೆಂಗಳೂರಲ್ಲಿ ಬೀದಿಗಿಳಿದ ರೈತ ಸಂಘಟನೆಗಳು, ಎಲ್ಲೆಡೆ ಪೊಲೀಸ್​ ಬಂದೋಬಸ್ತ್

    ಸಾಗರದ ಲಾಡ್ಜ್​ನಲ್ಲಿ ಯುವಕರಿಬ್ಬರು ಆತ್ಮಹತ್ಯೆ! ಸಾವಿಗೂ ಮುನ್ನ ವ್ಯಕ್ತಿಯೊಬ್ಬರ ಫೋಟೋಗೆ ಪೂಜೆ ಮಾಡಿದ್ದರು…

    ಪ್ರಿಯಕರನೊಂದಿಗೆ ಕಬ್ಬಾಳು ಬೆಟ್ಟದಿಂದ ಹಾರಿ ಪ್ರಾಣಬಿಟ್ಟ ವಿವಾಹಿತೆ! 4 ದಿನದ ಬಳಿಕ ಬೆಚ್ಚಿಬಿದ್ದ ಸ್ಥಳೀಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts