More

    ಸುಳ್ಳು ಜಾತಿ ಪ್ರಮಾಣಪತ್ರ: ಇಬ್ಬರು ತಹಸೀಲ್ದಾರ್​ ಸೇರಿ ಐವರ ವಿರುದ್ಧ ಕೇಸ್

    ಶಿವಮೊಗ್ಗ: ಕೆಎಸ್​ಆರ್​ಟಿಸಿ ಬಸ್​ ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬರಿಗೆ ಸುಳ್ಳು ಜಾತಿ ಪ್ರಮಾಣಪತ್ರ ನೀಡಿದ ಆರೋಪದಲ್ಲಿ ಇಬ್ಬರು ತಹಸೀಲ್ದಾರ್ ಸೇರಿ ಒಟ್ಟು ಐವರ ವಿರುದ್ಧ ಜಯನಗರ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

    ಕೆಎಸ್​ಆರ್​ಟಿಸಿ ಚಾಲಕ ಬಿ.ಬೀರನಹಳ್ಳಿಯ ಆರ್.ಕೃಷ್ಣ ನಕಲಿ ಪ್ರಮಾಣ ಪತ್ರ ನೀಡಿದವರು. ಈ ಪ್ರಕರಣಕ್ಕೆ ಸಂಬಂಧಿಸಿ ಅಂದಿನ ತಹಶೀಲ್ದಾರ್​ಗಳಾದ ಮಂಜುನಾಥ್ ಮತ್ತು ಕೊಟ್ರೇಶ್, ರೆವಿನ್ಯೂ ಇನ್​ಸ್ಪೆಕ್ಟರ್ ವಿಜಯಕುಮಾರ್, ಗ್ರಾಮ ಲೆಕ್ಕಿಗ ಸುರೇಶ್ ಅವರ ವಿರುದ್ಧವೂ ಪ್ರಕರಣ ದಾಖಲು ಮಾಡಲಾಗಿದೆ. 2013ರಲ್ಲಿ ಕೃಷ್ಣಪ್ಪ ಪರಿಶಿಷ್ಟ ಬೇಡರ ಜಾತಿಗೆ ಸೇರಿದವನೆಂದು ಪ್ರಮಾಣಪತ್ರ ನೀಡಿ ಮೈಸೂರು ಗ್ರಾಮಾಂತರ ವಿಭಾಗದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ. ಹಾವಾಡಿಗ ಜಾತಿಗೆ ಸೇರಿದವರಾಗಿದ್ದರೂ ಬೇಡ(ಎಸ್​ಟಿ) ಜನಾಂಗದವನೆಂದು ಪ್ರಮಾಣಪತ್ರ ನೀಡಿದ್ದ.

    ಈ ಕುರಿತು ನಿಗಮವು ಸಿಂಧುತ್ವ ಪ್ರಶ್ನಿಸಿ ಜಿಲ್ಲಾಧಿಕಾರಿಗೆ ಪರಿಶೀಲನೆಗೆ ಒಪ್ಪಿಸಿತ್ತು. ಜಾತಿ ಪರಿಶೀಲನಾ ಸಮಿತಿ ಇದನ್ನು ಕೂಲಂಕಷವಾಗಿ ವಿಚಾರಣೆ ನಡೆಸಿ ಚಾಲಕ ಆರ್.ಕೃಷ್ಣ ಸುಳ್ಳು ಜಾತಿ ಪ್ರಮಾಣಪತ್ರ ನೀಡಿದ್ದಾರೆಂದು ಸಾಬೀತುಪಡಿಸಿತ್ತು. ಹಾಗಾಗಿ ಸುಳ್ಳು ಪ್ರಮಾಣ ಪತ್ರ ನೀಡಿದ ಮತ್ತು ಪಡೆದವರ ವಿರುದ್ಧವೂ ಪ್ರಕರಣ ದಾಖಲಾಗಿದೆ.

    ನನ್ನ ತಂದೆ​ಗೆ ಹಲವು ಕಾಲ್​ಗರ್ಲ್​​ ಜತೆ ಸಂಪರ್ಕ ಇತ್ತು, ಅವನೊಬ್ಬ ಕಾಮುಕ, ಮಹಿಳೆಯರನ್ನ ಟ್ರ್ಯಾಪ್​ ಮಾಡ್ತಿದ್ದ…

    ಪದೇಪದೆ ಸರ್ಪಗಳು ಬರುತ್ತಿವೆ… ಎಂದು ಮನೆಯಲ್ಲಿ ಬಾವಿ ತೋಡಿದ ದಂಪತಿ! ವಾರದ ಬಳಿಕ ಕಾದಿತ್ತು ಶಾಕ್​

    ಬೆಂಗಳೂರಿನ ದುರಂತ ಮಾಸುವ ಮುನ್ನವೇ ದಾವಣಗೆರೆಯಲ್ಲಿ ಮತ್ತೊಂದು ಕುಟುಂಬ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts