More

    ನಕಲಿ ಐಎಎಸ್ ಅಧಿಕಾರಿ ಬಂಧನ! ಈತ ರವಿಶಂಕರ್ ಗುರೂಜಿ ಅವರಿಗೂ ಬಲೆ ಬೀಸಿದ್ದ

    ರಾಮನಗರ: ನಕಲಿ ಐಎಎಸ್ ಅಧಿಕಾರಿಯೊಬ್ಬ ಕಗ್ಗಲೀಪುರ ಠಾಣೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ರವಿಶಂಕರ್ ಗುರೂಜಿ ಅವರ ಆಶ್ರಮಕ್ಕೂ ಭೇಟಿ ಕೊಟ್ಟಿದ್ದ ಈತ, ತಾನು ಐಎಎಸ್​ ಅಧಿಕಾರಿಯೆಂದು ಪರಿಚಯ ಮಾಡಿಕೊಂಡಿದ್ದ. ಅಲ್ಲದೆ, ಆರ್ಟ್​ ಆಫ್​ ಲಿವಿಂಗ್​ ಆಶ್ರಮಕ್ಕೆ ಸಂಬಂಧಿಸಿದ ಜಮೀನು ವಿವಾದಕ್ಕೂ ಎಂಟ್ರಿಕೊಟ್ಟು, ಗುರೂಜಿ ಪರ ಬ್ಯಾಟಿಂಗ್​ ಮಾಡಿದ್ದ.

    ಮಹಾರಾಷ್ಟ್ರ ಮೂಲದ ಶಶೀರ್(24) ಬಂಧಿತ. ಕಳೆದ ಮೂರು ವರ್ಷದಿಂದ ಕಗ್ಗಲಿಪುರದಲ್ಲೇ ವಾಸವಾಗಿದ್ದ ಶಶೀರ್, ಓದಿರೋದು ಡಿಪ್ಲೊಮಾ. ಆದ್ರೆ, ತಾನು ಐಎಎಸ್​ ಅಧಿಕಾರಿ, ಮಿನಿಸ್ಟರಿ ಆಫ್ ಹೋಮ್ ಅಫೈರ್​ನಲ್ಲಿ ಅಧಿಕಾರಿಯಾಗಿದ್ದೇನೆ ಎಂದು ಬಿಂಬಿಸಿಕೊಂಡಿದ್ದ. ಸ್ಥಳೀಯ ಪೊಲೀಸರ ಬಳಿಯೂ ತಾನು ಅಧಿಕಾರಿ ಎಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದ.

    ಬೆಂಗಳೂರು ಹೊರವಲಯದಲ್ಲಿರುವ ರವಿಶಂಕರ್ ಗುರೂಜಿ ಆಶ್ರಮಕ್ಕೂ ಭೇಟಿ ಕೊಟ್ಟಿದ್ದ ಶಶೀರ್​, ಐಎಎಸ್ ಅಧಿಕಾರಿಯೆಂದು ಪರಿಚಯ ಮಾಡಿಕೊಂಡಿದ್ದ. ರವಿಶಂಕರ್ ಗುರೂಜಿ ಆಶ್ರಮದ ಜಮೀನು ವಿವಾದದ ವಿಚಾರಕ್ಕೂ ಎಂಟ್ರಿ ಕೊಟ್ಟಿದ್ದ ಶಶೀರ್​, ನಿಮ್ಮ ಜಮೀನು ವಿವಾದವನ್ನ ಬಗೆಹರಿಸಿಕೊಡುವುದಾಗಿ ಹೇಳಿದ್ದ. ಶಶೀರ್​ನ ನಡವಳಿಕೆಯಿಂದ ಅನುಮಾನಗೊಂಡ ಪೊಲೀಸರು ವಿಚಾರ ಮಾಡಿದಾಗ ಅಸಲಿಯತ್ತು ಬಯಲಾಗಿದೆ. ಮಂಗಳವಾರ ರಾತ್ರಿ ನಕಲಿ ಐಎಎಸ್​ ಅಧಿಕಾರಿಯನ್ನ ಕಗ್ಗಲೀಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಡ್ರಗ್ಸ್​ ಕೇಸ್​ನಲ್ಲಿ ಸಿಕ್ಕಿಬಿದ್ದವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್​ರ ಹಿರಿಯ ಪತ್ನಿಯ ಸಹೋದರ!

    ಬೆಂಗಳೂರಿನ ಮಹಿಳಾ ಟೆಕ್ಕಿ ಮೇಲೆ ಅತ್ಯಾಚಾರ: ಮೂವರೂ ಮದ್ಯ ಕುಡಿದೆವು, ಪ್ರಜ್ಞೆ ಬಂದಾಗ ಆತ ಬೆತ್ತಲಾಗಿದ್ದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts