More

    ಡ್ರಗ್ಸ್​ ಕೇಸ್​ನಲ್ಲಿ ಸಿಕ್ಕಿಬಿದ್ದವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್​ರ ಹಿರಿಯ ಪತ್ನಿಯ ಸಹೋದರ!

    ಬೆಂಗಳೂರು: ಪೊಲೀಸ್​ ಇನ್ಫರ್ಮರ್ ಆಗಿ ಕೆಲಸ ಮಾಡಿಕೊಂಡು ಕೊನೆಗೆ ಡ್ರಗ್​ ಕೇಸ್​ನಲ್ಲೇ ಸಿಕ್ಕಿಬಿದ್ದ ಆರೋಪಿ ರತನ್​ಲಾಲ್​ ಎಂಬಾತ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ಹಿರಿಯ ಪತ್ನಿಯ ಸಹೋದರ! ಡ್ರಗ್ಸ್​ ಮಾರಾಟದಿಂದಲೇ ಹಣ ಸಂಪಾದನೆಗಿಳಿದಿದ್ದ ರತನ್​ಲಾಲ್​ ವಿಚಾರಣೆ ವೇಳೆ ಹಲವು ರಹಸ್ಯ ಸಂಗತಿಗಳನ್ನು ಬಾಯ್ಬಿಟ್ಟಿದ್ದಾರೆ.

    ರಾಜಸ್ಥಾನ ಮೂಲದ ರತನ್​ಲಾಲ್​ನನ್ನು 5 ದಿನಗಳ ಕಾಲ ವಶಕ್ಕೆ ಪಡೆದಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ರತನ್​ ಲಾಲ್​ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್​ ಹಿರಿಯ ಪತ್ನಿಯ ಸಹೋದರನಾಗಿದ್ದು, ಅವರಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಅಲ್ಲದೆ ಇತ್ತೀಚಿಗೆ ರತನ್​ಲಾಲ್​ಗೂ ಯೋಗೇಶ್ವರ್​ಗೂ ಯಾವುದೇ ಸಂಪರ್ಕ ಇಲ್ಲ ಎಂದು ಪೊಲೀಸ್​ ಮೂಲಗಳು ಸ್ಪಷ್ಟಪಡಿಸಿವೆ. ಆರೋಪಿಯು ಹಲವು ವರ್ಷಗಳಿಂದ ಖುದ್ದು ಡ್ರಗ್ಸ್​ ದಂಧೆ ನಡೆಸುತ್ತಿದ್ದ. ಡ್ರಗ್ಸ್​ನಿಂದಲೇ ಹಣ ಸಂಪಾದನೆಗೆ ಇಳಿದಿದ್ದ. ತನ್ನ ಡ್ರಗ್ಸ್​ ಮಾಫಿಯಾಗೆ ಪೊಲೀಸರನ್ನೇ ಗಾಳ ಮಾಡಿಕೊಂಡಿದ್ದ ರತನ್​ ಲಾಲ್​, ತನ್ನ ಮೇಲೆ ಅನುಮಾನ ಬಾರದಿರಲೆಂದು ಪೊಲೀಸರಿಗೆ ಮಾಹಿತಿದಾರನಾಗಿ ಕೆಲಸ ಮಾಡಿಕೊಂಡಿದ್ದ.

    ಗಾಂಜಾ, ಆಫೀಮನ್ನು ಆಂಧ್ರ ಪ್ರದೇಶದ ವೈಜಾಗ್​ನಲ್ಲಿ ಖರೀದಿಸುತ್ತಿದ್ದ. ಸಾಮಾನ್ಯವಾಗಿ ಆಂಧ್ರದ ಗುಡ್ಡಗಾಡು ಪ್ರದೇಶಗಳಲ್ಲಿ ನಕ್ಸಲರು ಗಾಂಜಾ ಬೆಳೆಯುವ ಶಂಕೆ ವ್ಯಕ್ತವಾಗಿದೆ. ರತನ್​ ಸಹ ಆಂಧ್ರದಲ್ಲಿರುವ ನಕ್ಸಲ್​ ಸಂಪರ್ಕಿತರಿಂದ ಗಾಂಜಾ ಖರೀದಿಸುತ್ತಿದ್ದ ಎಂಬ ಅನುಮಾನ ವ್ಯಕ್ತವಾಗಿದೆ. ನಾನ್​ ಸಿಂಥಟಿಕ್​ ಡ್ರಗ್ಸ್​ನ್ನು ರಾಜಾಸ್ಥಾನ ಮೂಲದ ಪೆಡ್ಲರ್​ಗಳಿಂದ ಖರೀದಿಸುತ್ತಿದ್ದ.

    ಪ್ರತಿಷ್ಠಿತ ಉದ್ಯಮಿಗಳಿಗೆ ಗಾಂಜಾ, ಆಫೀಮು, ಎಂಡಿಎಂಎ, ಎಕ್ಸ್​ಟಿಸಿಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ. ಸದ್ಯ ಈತ ಯಾರಿಗೆಲ್ಲಾ ಡ್ರಗ್ಸ್​ ಮಾರಾಟ ಮಾಡುತ್ತಿದ್ದ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಈತನ ದಂಧೆಗೆ ಕೆಲ ಪೊಲೀಸ್​ ಸಿಬ್ಬಂದಿ ಸಾಥ್​ ಕೊಟ್ಟಿರುವ ಆರೋಪವೂ ಕೇಳಿ ಬಂದಿದೆ. ರತನ್​ ಲಾಲ್​ ಮನೆಯಲ್ಲಿ ಪೊಲೀಸರು ಪರಿಶೀಲಿಸಿದಾಗ ಸಿಂಥಟಿಕ್​, ನಾನ್​ ಸಿಂಥಟಿಕ್​ ಡ್ರಗ್ಸ್​ ಪತ್ತೆಯಾಗಿದ್ದು, ಇವುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

    ಮೈಸೂರಲ್ಲಿ ಗ್ಯಾಂಗ್​ ರೇಪ್​: ಆರೋಪಿಗಳಲ್ಲೊಬ್ಬ ಭಗ್ನಪ್ರೇಮಿ! ಲವ್​ ಫೇಲ್ಯೂರ್​ಗೆ ಲೈಂಗಿಕ ಚಟ ಅಂಟಿಸಿಕೊಂಡಿದ್ದ…

    ಡ್ರಗ್​ ಪೆಡ್ಲಿಂಗ್ ಬಗ್ಗೆ ಪೊಲೀಸರಿಗೆ ತಿಳಿಸಿದವನ ಬಳಿಯೇ ಇತ್ತು ಗಾಂಜಾ ಮತ್ತು ಏರ್​ಗನ್​!

    ಮಗಳ ಪ್ರಿಯಕರನ ಕೊಂದು ಜೈಲು ಸೇರಿದ ಅಪ್ಪ-ಅಮ್ಮ! ಎಲ್ಲವನ್ನೂ ಕಳೆದುಕೊಂಡಾಕೆ ಕೊನೆಗೂ ಬದುಕಲಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts