More

    ರಿಯಾಲಿಟಿ ಶೋ ‘ಎದೆ ತುಂಬಿ ಹಾಡುವೆನು’ ಟ್ರೋಫಿಗೆ ಮುತ್ತಿಟ್ಟ ಬಳ್ಳಾರಿಯ ಚಿನ್ಮಯ್​! ಮಂಗಳೂರಿನ ಸಂದೇಶ್​ ರನ್ನರ್​ ಅಪ್

    ಬೆಂಗಳೂರು: ಸಂಗೀತ ಲೋಕದ ಜನಪ್ರಿಯ ರಿಯಾಲಿಟಿ ಶೋ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದ ವಿನ್ನರ್​ ಆಗಿ ಗಾಯಕ ಬಳ್ಳಾರಿಯ ಚಿನ್ಮಯ್​ ಹೊರ ಹೊಮ್ಮಿದ್ದಾರೆ.

    ಕಳೆದ ಆಗಸ್ಟ್​ನಿಂದ ಕಲರ್ಸ್​ ಕನ್ನಡ ವಾಹಿನಿಯಲ್ಲಿ ‘ಎದೆ ತುಂಬಿ ಹಾಡುವೆನು’ ಶೋ ಪ್ರಸಾರವಾಗಿದ್ದು, ನಿನ್ನೆ (ಭಾನುವಾರ) ರಾತ್ರಿ ನಡೆದ ಗ್ರ್ಯಾಂಡ್​ ಫಿನಾಲೆಯಲ್ಲಿ ಫಲಿತಾಂಶ ಘೋಷಣೆಯಾಗಿದೆ. ಅಂತಿ ಹಂತ ತಲುಪಿದ್ದ 6 ಸ್ಪರ್ಧಿಗಳ ಪೈಕಿ ನಾಲ್ವರು ಫೈನಲ್​ ಪ್ರವೇಶಿಸಿದ್ದರು. ಬಳ್ಳಾರಿ ಜಿಲ್ಲೆ ಕಂಪ್ಲಿಯ ಚಿನ್ಮಯ್​ ‘ಎದೆ ತುಂಬಿ ಹಾಡುವೆನು’ ಶೋ ಟ್ರೋಫಿಗೆ ಮುತ್ತಿಟ್ಟಿದ್ದು, 10 ಲಕ್ಷ ರೂಪಾಯಿ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಮಂಗಳೂರಿನ ಸಂದೇಶ್​ ಮೊದಲ ರನ್ನರ್​​ ಅಪ್​ ಸ್ಥಾನ ಪಡೆದು 5 ಲಕ್ಷ ರೂಪಾಯಿ ಗೆದ್ದಿದ್ದಾರೆ. 2ನೇ ರನ್ನರ್​ ಅಪ್​ ಆದ ಕಿರಣ್​ಗೆ 3 ಲಕ್ಷ ರೂಪಾಯಿ, 3ನೇ ರನ್ನರ್​ ಅಪ್​ ಆದ ಬೆಂಗಳೂರಿನ ನಾದಿರಾ ಬಾನುಗೆ 1 ಲಕ್ಷ ರೂಪಾಯಿ ಒಲಿದಿದೆ.

    ಹಲವು ವರ್ಷದಿಂದ ಈಟಿವಿಯಲ್ಲಿ ಪ್ರಸಾರ ಆಗುತ್ತಿದ್ದ ಜನಪ್ರಿಯ ‘ಎದೆ ತುಂಬಿ ಹಾಡುವೆನು’ ಸಂಗೀತ ಸ್ಪರ್ಧಾ ಸರಣಿ ಕೆಲ ವರ್ಷಗಳಿಂದ ನಿಂತಿತ್ತು. 2021ರ ಆಗಸ್ಟ್​ನಿಂದ ಕಲರ್ಸ್​ ಕನ್ನಡ ವಾಹಿನಿಯಲ್ಲಿ ‘ಎದೆ ತುಂಬಿ ಹಾಡುವೆನು’ ಹೆಸರಿನಲ್ಲೇ ರಿಯಾಲಿಟಿ ಶೋ ಆರಂಭವಾಯಿತು. ಈ ಶೋನ ತೀರ್ಪುಗಾರರಾಗಿ ರಾಜೇಶ್​ ಕೃಷ್ಣನ್​, ವಿ.ಹರಿಕೃಷ್ಣ, ರಘು ದೀಕ್ಷಿತ್​ ಕಾರ್ಯನಿರ್ವಹಿಸಿದ್ದಾರೆ. ವಿಶೇಷ ತೀರ್ಪುಗಾರರಾಗಿ ಎಸ್​ಪಿಬಿ ಅವರ ಪುತ್ರ ಚರಣ್​ ಪಾಲ್ಗೊಂಡಿದ್ದರು. ಅಂದು ಈಟಿವಿಯಲ್ಲಿ ಎಸ್​.ಪಿ.ಬಾಲಸುಬ್ರಹ್ಮಣ್ಯಂ ಅವರು ನಡೆಸಿಕೊಡುತ್ತಿದ್ದ ಕಾರ್ಯಕ್ರಮ ದಕ್ಷಿಣ ಭಾರತದಲ್ಲಿ ಜನಪ್ರಿಯವಾಗಿತ್ತು.

    ಟ್ರೆಂಡ್​ ಆಯ್ತು ಮದ್ವೆ ಆಹ್ವಾನ ಪತ್ರಿಕೆಯಲ್ಲಿ ಅಪ್ಪು ಫೋಟೋ: ಪುನೀತ್​ ಅಗಲಿಕೆ ನೋವಲ್ಲೂ ಹೆಚ್ಚುತ್ತಿದೆ ಅಭಿಮಾನ

    ಗಂಡನ ಆ ಒಂದು ವಿರೋಧಕ್ಕೆ ನೊಂದು ಮಗು ಜತೆ ಸಾವಿನ ಮನೆಯ ಕದ ತಟ್ಟಿದ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts