More

    ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಇನ್​ಸ್ಪೆಕ್ಟರ್ ಈಗ ಸೆಲ್ಯೂಟ್ ಹೊಡೀತಾರೆ: ಅಕೈ ಪದ್ಮಶಾಲಿ

    ಬೆಂಗಳೂರು: ಅಂದು ಕಬ್ಬನ್​ ಪಾರ್ಕಿನ ಪೊಲೀಸ್​ ಠಾಣೆ ಇನ್​ಸ್ಪೆಕ್ಟರ್​ ಆಗಿದ್ದವರು ನಮ್ಮನ್ನ ಲೈಂಗಿಕವಾಗಿ ಬಳಸಿಕೊಂಡ್ರು. ಸ್ಟೇಷನ್​ ಅನ್ನು ನಮ್ಮಿಂದ ಕ್ಲೀನ್​ ಮಾಡಿಸಿಕೊಂಡ್ರು. ಅಷ್ಟೇ ಅಲ್ಲ ಅವರ ಬೂಟ್​ಗಳನ್ನ ಪಾಲಿಶ್​ ಮಾಡಿಸಿಕೊಂಡು ಅವರ ಜಿಪ್​ಗಳನ್ನ ನಮ್ಮ ಕೈಯಲ್ಲೇ ಹಾಕಿಸಿಕೊಳ್ಳುತ್ತಿದ್ದರು. ಇಂತಹ ಒಂದು ಕಠೋರ ಮನಸ್ಥಿತಿಯಲ್ಲಿ ಅವರು ಸ್ಟೇಷನ್​ ಅನ್ನು 2003ರಿಂದ 2006ರ ವರೆಗೂ ನಿರ್ವಹಣೆ ಮಾಡಿದ್ರು. ಇದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ… ಅದೇ ವ್ಯಕ್ತಿ ಕೆಲ ವರ್ಷಗಳ ಬಳಿಕ ನಾನು ಮೈಸೂರಿನ ಪೊಲೀಸ್​ ಅಕಾಡೆಮಿಯಿಂದ ಹೊರ ಬಂದಾಗ ನನಗೆ ಸೆಲ್ಯೂಟ್​ ಹೊಡೆದಾಗ ಆತ್ಮಗೌರವ, ಘನತೆಯನ್ನ ಹೆಚ್ಚಿಸಿತು. ಸಮಾಜಕ್ಕೆ ಕೊಟ್ಟ ದೊಡ್ಡ ಗೌರವ ಅನ್ನಿಸ್ತು. ಸಾಮಾಜ ಬದಲಾವಣೆ ಆಗಿದೆ ಅನ್ನಿಸ್ತು…’

    ಇದು ಲೈಂಗಿಕ ಅಲ್ಪಸಂಖ್ಯಾತರ ಪರ ಹೋರಾಟಗಾರ್ತಿ ಅಕೈ ಪದ್ಮಶಾಲಿ ತಾವು ಅನುಭವಿಸಿದ ನೋವನ್ನ ‘ದಿಗ್ವಿಜಯ ನ್ಯೂಸ್​’ ಬಳಿ ಬಿಚ್ಚಿಟ್ಟ ಪರಿ. ಇದೇ ರೀತಿ ಹಲವು ಕಹಿ ಘಟನೆಯನ್ನ ಬಿಚ್ಚಿಟ್ಟಿದ್ದಾರೆ. ‘ನಾನು ಡಿಪ್ಲೊಮಾ ಓದುತ್ತಿದ್ದೆ. ನನ್ನಲ್ಲಿದ್ದ ಹೆಣ್ಣಿನ ಭಾವನೆ ಕಂಡು ನಾನು ಗಂಡಾ ಅಥವಾ ಹೆಣ್ಣಾ? ನನಗೆ ಯೋನಿ ಇದ್ಯಾ? ಶಿಶ್ನ ಇದ್ಯಾ? ಎಂದು ಚೆಕ್​ ಮಾಡಲು ನನ್ನ ಮೈಮೇಲಿದ್ದ ಬಟ್ಟೆಯನ್ನ ಹರಿದು ಟಾಯ್ಲೆಟ್​ನಲ್ಲಿ ಬೆತ್ತಲೆ ಮಾಡಿ ಜನ ನೋಡಿದ್ರು. ಆ ಕೆಟ್ಟ ಘಟನೆಯ ನೋವನ್ನ ಸಹಿಸೋಕೆ ಆಗಲ್ಲ… ಇಂತಹ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಬೇಕು. ಹೆಣ್ಣುಮಕ್ಕಳ ಮೇಲೆ ಯಾವುದೇ ರೀತಿಯ ದೌರ್ಜನ್ಯ ಆಗಲು ಬಿಡಬಾರದು. ನಾವು ಕೂಡ ಹೆಣ್ಣುಮಕ್ಕಳೆ. ನಮ್ಮನ್ನು ಹೆಣ್ಣು ಎಂದೇ ಸಮಾಜದಲ್ಲಿ ಪರಿಗಣಿಸಬೇಕು’ ಎಂದು ಇದೇ ವೇಳೆ ಆಗ್ರಹಿಸಿದರು.

    ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಇನ್​ಸ್ಪೆಕ್ಟರ್ ಈಗ ಸೆಲ್ಯೂಟ್ ಹೊಡೀತಾರೆ: ಅಕೈ ಪದ್ಮಶಾಲಿ‘ಚಕ್ಕಾ, ಕೋಜಾ, ಶಿಖಂಡ, ನಾಮರ್ದ, ಒಂಬತ್ತು ಎಂಬ ಪದಗಳು ನಮಗೆ ಬೇಡ. ನಮ್ಮನ್ನು ಹಾಗೆ ಕರೆಯಬೇಡಿ. ಜೋಗ್ತಾ, ಅಂತರ್​ಲಿಂಗಿ​, ಲಿಂಗತ್ವ ಅಲ್ಪಸಂಖ್ಯಾತರು, ಲೈಂಗಿಕ ಅಲ್ಪಸಂಖ್ಯಾತರು, ಲಿಂಗತ್ವ ಬದಲಾಯಿಸಿಕೊಂಡವರು ಎಂದು ಬಳಸಿ. ನಮಗೆ ಕೆಟ್ಟ ಪದಗಳನ್ನ ಬಳಕೆ ಮಾಡಬೇಡಿ’ ಎಂದ ಅಕೈ ಪದ್ಮಶಾಲಿ ಅವರು, ‘2006ರಲ್ಲಿ ಚಂದ್ರಿಕಾ ಎಚ್​ಐವಿ ಸೋಂಕಿನಿಂದ ಮೃತಪಟ್ಟಿದ್ದಳು. ಅಂದು ಅವಳ ಮೃತದೇಹವನ್ನ ಚಿತಾಗಾರಕ್ಕೆ ಸ್ಮಶಾನಕ್ಕೆ ಸುಡಲು ತೆಗೆದುಕೊಂಡು ಹೋದೆವು. ಆಗ ಚಂದ್ರಿಕಾ ಹೆಣ್ಣು ಅಥವಾ ಗಂಡು ಎಂದು ಚಿತಾಗಾರದವರು ಪ್ರಶ್ನಿಸಿದ್ರು. ಎರಡೂ ಅಲ್ಲ ಎಂದಿದ್ದಕ್ಕೆ ಇಲ್ಲಿ ದಫನ್​ ಮಾಡೋಕೆ ಆಗಲ್ಲ ಅಂದು ಬಿಟ್ರು. ಪ್ರತಿಭಟನೆ ಮಾಡಿ ಅಂತ್ಯಸಂಸ್ಕಾರ ಮಾಡಿಸಿದ್ದಾಯ್ತು’ ಎನ್ನುತ್ತಲೇ ಭಾವುಕರಾದರು. ಆ ಮೂಲಕ ಲೈಂಗಿಕ ಅಲ್ಪಸಂಖ್ಯಾತರು ಸತ್ತ ಮೇಲೂ ಈ ಸಮಾಜ ನೋಡುವ ಕೆಟ್ಟ ದೃಷ್ಟಿ ಬಗ್ಗೆ ವಿವರಿಸಿದರು. ‘ನಾನು ಸತ್ತಾಗ ದೇಹವನ್ನ ಸುಡಬೇಡಿ. ನನ್ನ ದೇಹವನ್ನ ಬೆಂಗಳೂರು ಮೆಡಿಕಲ್​ ಕಾಲೇಜಿಗೆ ದಾನ ಮಾಡಬೇಕು ಎಂದು ಹೀಗಾಗಲೇ ಬರೆದು ಕೊಟ್ಟಿದ್ದೇನೆ’ ಎಂದರು.

    ಹುಟ್ಟಿದ್ದು ಗಂಡಾಗಿ ಬೆಳೆಯುತ್ತಾ ಹೆಣ್ಣಾದಾಗ ಸಾಕಷ್ಟು ಸಮಸ್ಯೆಗಳನ್ನ ಎದುರಿಸಿ ಸದ್ಯ ಲೈಂಗಿಕ ಅಲ್ಪಸಂಖ್ಯಾತರ ಪರ ಹೋರಾಡುತ್ತಿರುವ ಸಾಮಾಜಿಕ ಕಾರ್ಯಕರ್ತೆ ಅಕೈ ಪದ್ಮಶಾಲಿ ಅವರು ಬಾಲ್ಯದಿಂದಲೇ ಅವಮಾನ, ನೋವಿನ ಮೆಟ್ಟಿಲು ಹತ್ತಿಕೊಂಡೇ ಬೆಳೆದವರು. ತಮ್ಮ ಬದುಕಲ್ಲಿ ಅವರು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಮಗ ಆದವನು ಮಗಳಂತೆ ವರ್ತಿಸುವುದನ್ನ ಕಂಡು ಬಾಲ್ಯದಲ್ಲೇ ಅಪ್ಪ-ಅಮ್ಮನಿಂದಲೂ ನಿಂದಿಸಿಕೊಂಡಿದ್ದರಂತೆ ಜಗದೀಶ(ಇಂದಿನ ಅಕೈ ಪದ್ಮಶಾಲಿ).ಈ ಬಗ್ಗೆಯೂ ಹೇಳಿದ ಅವರು, ‘ಆಗ ನಮಗೆ ತಿನ್ನೋಕೆ ಊಟ ಇರಲಿಲ್ಲ, ಹಾಕೋಕೆ ಒಳ್ಳೆಯ ಬಟ್ಟೆ ಇರಲಿಲ್ಲ. ತಿಂಬಾ ಕಷ್ಟದಲ್ಲಿ ಬೆಳೆದು ಬಂದ್ವಿ. ಚಡ್ಡಿ-ಅಂಗಿ ಧರಿಸಿ ನಾನು 6ನೇ ತರಗತಿ ಶಾಲೆಗೆ ಹೋಗುತ್ತಿದೆ. ಆಗ ನಾನು ನನ್ನ ಅಕ್ಕನ ಕಾಡಿಗೆಯನ್ನ ನನ್ನ ಕಣ್ಣಿಗೆ ಹಚ್ಚಿಕೊಳ್ಳುತ್ತಿದ್ದೆ. ಹೆಣ್ಣಿನಂತೆ ವರ್ತಿಸುತ್ತಿದೆ. ಆಗ ಮನೆಯಲ್ಲಿ ಬಿಸಿನೀರನ್ನು ನನ್ನ ಕಾಲಿನ ಮೇಲೆ ಹಾಕಿ ಶಿಕ್ಷಿಸಿದ್ದರು. ಆದರೆ ಇದರಲ್ಲಿ ಅವರ ತಪ್ಪಿಲ್ಲ. ಅಂದಿನ ಕಾಲದ ಸಮಾಜದ ವ್ಯವಸ್ಥೆಯೇ ಹಾಗಿತ್ತು. ಕಳೆದ 5 ವರ್ಷದ ಹಿಂದೆ ಸೀರೆ ಧರಿಸಿ ನಾನು ಅಪ್ಪಮ ಮನೆಗೆ ಹೋಗಿದ್ದೆ. ಗೌರಿ ಹಬ್ಬದ ದಿನ ನನಗೆ ಅರಿಶಿಣ-ಕುಂಕುಮ ಕೊಟ್ಟು ಕಳುಹಿಸಿದ್ದರು. ಸದ್ಯ ಈಗ ನನ್ನಪ್ಪ ಬದುಕಿಲ್ಲ…’ ಎಂದ ಅಕೈ ಪದ್ಮಶಾಲಿ, ‘ಹೆಣ್ಣುಮಕ್ಕಳ ಮೇಲೆ ಯಾವುದೇ ರೀತಿಯ ದೌರ್ಜನ್ಯ ಆಗಲು ಬಿಡಬಾರದು. ನಾವು ಕೂಡ ಹೆಣ್ಣುಮಕ್ಕಳೆ. ನಮ್ಮನ್ನು ಹೆಣ್ಣು ಎಂದೇ ಸಮಾಜದಲ್ಲಿ ಪರಿಗಣಿಸಬೇಕು’ ಎಂದು ಆಗ್ರಹಿಸಿದರು.

    ಕುಡಿವ ನೀರಿನ ಪೈಪ್​ನಲ್ಲಿ ಮಾಂಸದ ಮುದ್ದೆ, ಮೂಳೆ ಪತ್ತೆ! ಬಗೆದಷ್ಟೂ ಜಟಿಲವಾಗ್ತಿದೆ ಯುವತಿ ಕಾಲಿನ ರಹಸ್ಯ…

    ಮಿಸ್​ ಯೂ ಫ್ರೆಂಡ್ಸ್​, ನಾನು ಸಾಯುವೆ, ನನ್ನ ಬ್ಯಾನರ್​ ಹಾಕಿ… ಎಂದು ಸಂದೇಶ ಕಳಿಸಿ ಪ್ರಾಣಬಿಟ್ಟ ವಿದ್ಯಾರ್ಥಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts