More

    ಜಯದ ಹಳಿ ಏರಲು ರಾಜಸ್ಥಾನ-ಪಂಜಾಬ್ ಫೈಟ್: ಒತ್ತಡದಲ್ಲಿ ಧವನ್ ಪಡೆ

    ಮುಲ್ಲನ್‌ಪುರ: ಹಿಂದಿನ ಪಂದ್ಯದಲ್ಲಿ ಅಂತಿಮ ಓವರ್‌ಗಳಲ್ಲಿ ಸೋಲು ಅನುಭವಿಸಿರುವ ತಂಡಗಳಾದ ರಾಜಸ್ಥಾನ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್, ಐಪಿಎಲ್-17ರಲ್ಲಿ ಶನಿವಾರ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಆತಿಥೇಯ ಶಿಖರ್ ಧವನ್ ಪಡೆ ಪ್ಲೇಆ್ ಅವಕಾಶ ವೃದ್ಧಿಸಿಕೊಳ್ಳಲು ಗೆಲ್ಲಲೇಬೇಕಾದ ಒತ್ತಡದಲ್ಲಿದ್ದರೆ, ಸಂಜು ಸ್ಯಾಮ್ಸನ್ ಬಳಗ ಜಯದ ಹಾದಿಗೆ ಮರಳುವ ನಿರೀಕ್ಷೆಯಲ್ಲಿದೆ.
    ಸತತ ಐದನೇ ಗೆಲುವು ದಾಖಲಿಸುವ ಅವಕಾಶ ಹೊಂದಿದ್ದ ರಾಜಸ್ಥಾನ ರಾಯಲ್ಸ್, ಗುಜರಾತ್ ಟೈಟಾನ್ಸ್ ಎದುರು ಅಂತಿಮ ಓವರ್‌ನಲ್ಲಿ ಎಡವಿತು. ಆಡಿರುವ 5 ಪಂದ್ಯಗಳಲ್ಲಿ 4 ಗೆಲುವು, 1 ಸೋಲಿನೊಂದಿಗೆ 8 ಅಂಕ ಕಲೆಹಾಕಿರುವ ರಾಜಸ್ಥಾನ ಟೂರ್ನಿಯಲ್ಲಿ ಸಮತೋಲನ ಹೊಂದಿರುವ ತಂಡ ಎನಿಸಿದೆ. ತವರಿನಲ್ಲಿ ಮೊದಲ ಸೋಲುಂಡಿರುವುದು ರಾಜಸ್ಥಾನಕ್ಕೆ ಆಘಾತ ಎನಿಸಿದ್ದು, ಪುಟಿದೇಳುವ ತವಕದಲ್ಲಿದೆ. ಕಳೆದ ಆರು ಆವೃತ್ತಿಗಳಲ್ಲಿ ಕೇವಲ 2 ಬಾರಿ ಪ್ಲೇಆ್ಗೆ ಅರ್ಹತೆ ಪಡೆದಿರುವ ಪಂಜಾಬ್ ಕಿಂಗ್ಸ್ ಅಸ್ಥಿರ ನಿರ್ವಹಣೆಯಿಂದ ಟೂರ್ನಿಯಲ್ಲಿ ವೈಲ್ಯ ಕಂಡಿದೆ. ಆಡಿರುವ 5 ಪಂದ್ಯಗಳಲ್ಲಿ 2 ಗೆಲುವು, 3 ಸೋಲಿನೊಂದಿಗೆ 4 ಅಂಕ ಕಲೆಹಾಕಿದ್ದು, ಜಯದ ಒತ್ತಡದಲ್ಲಿದೆ. ತವರಿನಲ್ಲಿ ಹಿಂದಿನ ಪಂದ್ಯ ಸೋತಿರುವುದು ಹಿನ್ನಡೆ ಎನಿಸಿದೆ.

    ಆರಂಭಿಕ ಜೈಸ್ವಾಲ್ ವೈಫಲ್ಯ:ಐಪಿಎಲ್ ಟೂರ್ನಿಗೂ ಮುನ್ನ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಸತತ 2 ದ್ವಿಶತಕ ಸಹಿತ ರನ್ ಮಳೆಹರಿಸಿದ ಯುವ ಆರಂಭಿಕ ಯಶಸ್ವಿ ಜೈಸ್ವಾಲ್ ಚುಟುಕು ಕ್ರಿಕೆಟ್‌ನಲ್ಲಿ ರನ್‌ಗಳಿಸಲು ಪರದಾಡುತ್ತಿದ್ದಾರೆ. ಕಳೆದ 5 ಇನಿಂಗ್ಸ್‌ಗಳಲ್ಲಿ ಕೇವಲ 63 ರನ್‌ಗಳಿಸಿರುವ ಜೈಸ್ವಾಲ್ ಾರ್ಮ್ ತಂಡಕ್ಕೆ ಚಿಂತೆ ತಂದಿದೆ. ಆರ್‌ಸಿಬಿ ವಿರುದ್ಧ ಶತಕ ಸಿಡಿಸಿ ಲಯ ಕಂಡುಕೊಂಡಿರುವ ಜೋಸ್ ಬಟ್ಲರ್ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ನಾಯಕ ಸಂಜು ಸ್ಯಾಮ್ಸನ್, ರಿಯಾನ್ ಪರಾಗ್ ಭರ್ಜರಿ ಾರ್ಮ್‌ನಲ್ಲಿದ್ದು, ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬಿದ್ದಾರೆ. ಬೌಲಿಂಗ್‌ನಲ್ಲಿ ಹಿಂದಿನ ಪಂದ್ಯದಲ್ಲಿ ಎಸಗಿದ ತಪ್ಪು ಮರುಕಳಿಸದಂತೆ ಸ್ಯಾಮ್ಸನ್ ಎಚ್ಚರವಹಿಸಬೇಕಿದೆ. ಯಜುವೇಂದ್ರ ಚಾಹಲ್ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

    ಅಸ್ಥಿರ ನಿರ್ವಹಣೆ: ಪಂಜಾಬ್ ಕಿಂಗ್ಸ್ ಆಟಗಾರರು ಅಸ್ಥಿರ ನಿರ್ವಹಣೆಯಿಂದ ಹೊರಬರಬೇಕಿದೆ. ಶಿಖರ್ ಧವನ್- ಜಾನಿ ಬೇರ್‌ಸ್ಟೋ ಉತ್ತರ ಆರಂಭ ಒದಗಿಸುವಲ್ಲಿ ವಿಲರಾಗಿದ್ದು, ಚೇಸಿಂಗ್‌ನಲ್ಲಿ ತಂಡಕ್ಕೆ ಹಿನ್ನಡೆ ಎನಿಸಿದೆ. ದೇಶೀಯ ಬ್ಯಾಟರ್‌ಗಳಾದ ಶಶಾಂಕ್ ಸಿಂಗ್, ಆಶುತೋಶ್ ಶರ್ಮ ಮೇಲೆ ಹಿಂದಿನ 2 ಪಂದ್ಯಗಳಲ್ಲಿ ಹೆಚ್ಚು ಅವಲಂಬಿತವಾಗಿತ್ತು. ಕಗಿಸೊ ರಬಾಡ, ಅರ್ಷದೀಪ್ ಸಿಂಗ್ ಲಯಕ್ಕೆ ಮರಳಿದ್ದಾರೆ. ಆದರೆ ಆಲ್ರೌಂಡರ್ ಸ್ಯಾಮ್ ಕರ‌್ರನ್, ಸಿಕಂದರ್ ರಾಜಾ ನಿರೀಕ್ಷಿತ ಪ್ರದರ್ಶನ ತೋರಿಲ್ಲ. ಅನುಭವಿ ಸ್ಪಿನ್ನರ್‌ಗಳ ಕೊರತೆ ಕಾಡುತ್ತಿದೆ.

    ಮುಖಾಮುಖಿ: 26
    ರಾಜಸ್ಥಾನ: 15
    ಪಂಜಾಬ್: 11
    ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts