More

    ರೈತರ ಮಕ್ಕಳಿಗೆ ಶಿಷ್ಯವೇತನ: ನೂತನ ಸಿಎಂ ಬೊಮ್ಮಾಯಿ ಘೋಷಣೆ

    ಬೆಂಗಳೂರು: ನೂತನ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಬಸವರಾಜ ಬೊಮ್ಮಾಯಿ ಅವರು ಮಹತ್ವದ ನಿರ್ಣಯಗಳನ್ನು ಘೋಷಿಸಿದ್ದಾರೆ.

    ಸಿಎಂ ಆಗಿ ಪದಗ್ರಹಣ ಸ್ವೀಕರಿಸುತ್ತಿದ್ದಂತೆ ಹಿರಿಯ ಅಧಿಕಾರಿಗಳ ಜತೆ ವಿಧಾನಸೌಧದಲ್ಲಿ ಸಭೆ ನಡೆಸಿದ ಬಳಿಕ ವಿಧಾನಸೌಧದಲ್ಲಿ ಚೊಚ್ಚಲ ಸುದ್ದಿಗೋಷ್ಠಿದ ಮೊಮ್ಮಾಯಿ, ಸರ್ಕಾರದ ಮುಂದಿನ ಯೋಜನೆ, ಗುರಿ, ರಾಜ್ಯವನ್ನು ತೀವ್ರವಾಗಿ ಕಾಡುತ್ತಿರುವ ಕರೊನಾ, ಪ್ರವಾಹ ಪರಿಸ್ಥಿತಿ ನಿರ್ವಹಣೆ ಕುರಿತು ಮಹತ್ವದ ಮಾಹಿತಿ ನೀಡಿದರು. ಜತೆಗೆ ರೈತರ ಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದು. ಅವರು ಮುಖ್ಯವಾಹಿನಿಯಲ್ಲಿ ಇರಬೇಕು. ಆ ನಿಟ್ಟಿನಲ್ಲಿ ಅವರ ಉನ್ನತ ಶಿಕ್ಷಣಕ್ಕೆ ನೆರವಾಗಲೆಂದು ರೈತ ಮಕ್ಕಳಿಗೆ ಇನ್ಮುಂದೆ ವಿದ್ಯಾರ್ಥಿ ವೇತನ ನೀಡಲಾಗುತ್ತೆ ಎಂದು ನೂತನ ಯೋಜನೆಯಲ್ಲಿ ಘೋಷಣೆ ಮಾಡಿದರು. ಅಲ್ಲದೆ ಸಂಧ್ಯಾ ಸುರಕ್ಷಾ, ಅಂಗವಿಕಲರ, ವಿಧವಾ ವೇತನ ಹೆಚ್ಚಳ ಮಾಡಿ ಘೋಷಿಸಿದರು.

    ಸಿಎಂ ಮಹತ್ವದ 4 ನಿರ್ಣಯ ಘೋಷಣೆ ಮಾಡಿದರು. ಅದರ ವಿವಿರ ಇಲ್ಲಿದೆ.

    • ರೈತರ ಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದು. ಅವರು ಮುಖ್ಯವಾಹಿನಿಯಲ್ಲಿ ಇರಬೇಕು. ಆ ನಿಟ್ಟಿನಲ್ಲಿ ನೆರವಾಗಲೆಂದು ರೈತ ಮಕ್ಕಳಿಗೆ ಇನ್ಮುಂದೆ ವಿದ್ಯಾರ್ಥಿ ವೇತನ ನೀಡಲಾಗುತ್ತೆ.
    • ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ಕೊಡುತ್ತಿರುವ 1000 ರೂಪಾಯಿಯನ್ನು 1,200 ಗೆ ಹೆಚ್ಚಳ ಮಾಡಲಾಗಿದೆ. 
    • ಹಾಲಿ ನೀಡುತ್ತಿರುವ ವಿಧವಾ ವೇತನ 600 ರೂನಿಂದ 800 ರೂಪಾಯಿಗೆ ಏರಿಕೆ
    • ಅಂಗವಿಕಲರಿಗೆ 600 ರೂ.ನಿಂದ 8೦೦ ರೂ.ಗೆ ಹೆಚ್ಚಳ. ಇದರಿಂದ 3.66 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿದ್ದು, ಸರ್ಕಾರಕ್ಕೆ 90 ಕೋಟಿ ಹೊರೆಯಾಗಲಿದೆ.

    ಇಂದಿನಿಂದ ಬೊಮ್ಮಾಯಿ ‘ರಾಜ್ಯ’ಭಾರ! ಸಮಸ್ಯೆಗಳನ್ನೇ ಹೊದ್ದು ಮಲಗಿದೆ ಹಾದಿ…

    ಸಿಎಂ ಬೊಮ್ಮಾಯಿ ಮೊದಲ ಪ್ರತಿಕ್ರಿಯೆ: ಬಡವರು-ರೈತರ ಕಣ್ಣೀರು ಒರೆಸುವೆ… ಸಮಸ್ಯೆಗಳ ಸರಮಾಲೆಯೇ ಇದೆ..

    ಬೊಮ್ಮಾಯಿ ಸಂಪುಟದಲ್ಲಿ ಯಾರಿಗೆ ಕೊಕ್​? ಸಂಭಾವ್ಯ ಸಚಿವರ EXCLUSIVE ಪಟ್ಟಿ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts