More

    ಅದೇ ಜಾಗ ಬೇಕೆಂಬ ಹಠ ನಿಮಗ್ಯಾಕೆ ಸಿಎಂ? ಮನನೊಂದು ಫೇಸ್​ಬುಕ್​ಲ್ಲಿ ಪೋಸ್ಟ್ ಮಾಡಿದ ಚಕ್ರವರ್ತಿ ಸೂಲಿಬೆಲೆ!

    ತೇರದಾಳ(ಬಾಗಲಕೋಟೆ): ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮತ್ತು ಸಿದ್ದು ಸವದಿಯವರಿಗೆ ಅಭಿನಂದನೆಗಳು. ಆರು ವರ್ಷಗಳ ಹಿಂದೆ ಹಳಿಂಗಳಿ ಬೆಟ್ಟದ ಮೇಲೆ 30 ಸಾವಿರ ಗಿಡಗಳನ್ನು ಯುವ ಬ್ರಿಗೇಡ್ ಕುಲರತ್ನಭೂಷಣ ಮಹಾರಾಜರ ಸಹಕಾರದಿಂದ ನೆಟ್ಟಿತ್ತು. ಅದು ಸೊಂಪಾಗಿ ಬೆಳೆದು ಹೆಚ್ಚು-ಕಡಿಮೆ ಕಾಡಾಗಿ ನಿರ್ಮಾಣಗೊಂಡಿತ್ತು. ಮಹಾರಾಜರು ಬಂದ ಭಕ್ತರಿಗೆಲ್ಲ ಗಿಡಗಳಿಗೆ ನೀರು ಹಾಕುವುದೇ ನಿಮ್ಮ ದೊಡ್ಡ ಸೇವೆ ಎಂದು ಹೇಳಿ ಬಿರುಬೇಸಿಗೆಯಲ್ಲೂ ಅವುಗಳನ್ನು ಕಾಪಾಡಿಕೊಂಡು ಬಂದಿದ್ದರು. ನಿನ್ನೆಯಿಂದ ನಿರಾಶ್ರಿತರಿಗೆ ಜಾಗ ಕಲ್ಪಿಸಿಕೊಡುವ ನೆಪದಲ್ಲಿ ಮುಗಿಲೆತ್ತರಕ್ಕೆ ಚಿಮ್ಮಿದ್ದ ಗಿಡವನ್ನು ಜೆಸಿಬಿಯಿಂದ ಉರುಳಿಸುತ್ತಿದ್ದಾರೆ. ಯಾಕೋ ಚಿತ್ರ ನೋಡಿ ಸಂಕಟವೆನಿಸಿತು. ನಿರಾಶ್ರಿತರಿಗೆ ಬೇರೆ ಜಾಗವೇ ಇಲ್ಲವೆಂದಿದ್ದರೆ ಮಾತನಾಡುವ ಸ್ಥಿತಿಯಲ್ಲಿ ನಾವು ಇರುತ್ತಿರಲಿಲ್ಲ. ಕಾಡಾಗಿ ಬೆಳೆದಿದ್ದ ಆ ಪ್ರದೇಶವನ್ನು ಸಪಾಟಾಗಿಸಿ ಅಲ್ಲಿಯೇ ಜಾಗ ಕೊಡಬೇಕೆಂಬ ಹಠ ಏಕೆಂದು ಗೊತ್ತಿಲ್ಲ. ಬಲು ದುರದೃಷ್ಟಕರ. ಮುಖ್ಯಮಂತ್ರಿಗಳ ಕಾರ್ಯದ ಅಧಿಕೃತ ಆರಂಭವೇ ಸಸ್ಯಗಳ ಕಗ್ಗೊಲೆಯಿಂದ ಶುರುವಾಗಿರುವುದು ದುರದೃಷ್ಟಕರ…’

    ಇದು ವಿಜಯವಾಣಿ ಅಂಕಣಕಾರ, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರು ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿರುವ ಬರಹ. ಬೆಟ್ಟದಲ್ಲಿನ ಬಹಳಷ್ಟು ಗಿಡ-ಮರಗಳನ್ನು ಕಡಿದು, ಸ್ವಚ್ಛಗೊಳಿಸುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಗುರುವಾರ ವೈರಲ್ ಆಗಿದೆ. ಪರಿಸರ ನಾಶಕ್ಕೆ ತುಂಬಾ ಮನನೊಂದ ಚಕ್ರವರ್ತಿ ಸೂಲಿಬೆಲೆ, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ತೇರದಾಳ ಶಾಸಕ ಸಿದ್ದು ಸವದಿ ಅವರನ್ನು ಪ್ರಶ್ನೆ ಮಾಡಿದ್ದಾರೆ.

    ಅದೇ ಜಾಗ ಬೇಕೆಂಬ ಹಠ ನಿಮಗ್ಯಾಕೆ ಸಿಎಂ? ಮನನೊಂದು ಫೇಸ್​ಬುಕ್​ಲ್ಲಿ ಪೋಸ್ಟ್ ಮಾಡಿದ ಚಕ್ರವರ್ತಿ ಸೂಲಿಬೆಲೆ!

    ಹಳಿಂಗಳಿ ಗ್ರಾಮದ ಭದ್ರಗಿರಿ ಬೆಟ್ಟದ ಸರ್ವೇ ನಂ.142ರಲ್ಲಿ ತಮದಡ್ಡಿ ಪುನರ್ವಸತಿ ಕೇಂದ್ರ ನಿರ್ಮಾಣಕ್ಕಾಗಿ ಗಿಡ-ಮರಗಳ ಮಾರಣಹೋಮ ಮಾಡುತ್ತಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಯುವ ಬ್ರಿಗೇಡ್​ನ ಬನಹಟ್ಟಿಯ ನಂದು ಗಾಯಕವಾಡ ಮತ್ತು ತಂಡದವರು ಗುರುವಾರ ಭದ್ರಗಿರಿ ಬೆಟ್ಟಕ್ಕೆ ಭೇಟಿ ನೀಡಿ ವೀಕ್ಷಿಸಿದರು.

    ಹುಟ್ಟುಹಬ್ಬದ ದಿನವೇ ರಾಜಕೀಯಕ್ಕೆ ವಿದಾಯ ಘೋಷಿಸಿದ ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್​

    ಬಿಜೆಪಿಗೆ ಬಂದ ಶಾಸಕ ಮಹೇಶ್​ಗೆ ವೇದಿಕೆಯಲ್ಲೇ ಸಿಹಿ ಸುದ್ದಿ ಕೊಟ್ಟ ಬಿಎಸ್​ವೈ!

    ಕಣ್ಣು ಕುಕ್ಕುವಂತಿದೆ ಶಾಸಕ ಜಮೀರ್‌ ಬಂಗಲೆ! ಅರೇಬಿಯನ್‌ ಶೈಲಿಯ ಅರಮನೆಗೆ ಚಿನ್ನದ ಲೇಪನ…

    ಒಂದೇ ಮನೆಯಲ್ಲಿದ್ದರು ಪತ್ನಿ-ಪತಿ-ಸ್ನೇಹಿತ! ಪೊಲೀಸರ ಮುಂದೆ ಬಯಲಾಯ್ತು ಚೆಂದುಳ್ಳಿ ಚೆಲುವೆಯ ಅಸಲಿ ಮುಖ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts