More

    ದೇಶದ ಪ್ರಗತಿಗೆ ಗಣತಂತ್ರ ವ್ಯವಸ್ಥೆ ಪೂರಕ

    ತರೀಕೆರೆ: ಗಣತಂತ್ರ ವ್ಯವಸ್ಥೆ ದೇಶದ ಪ್ರಗತಿಗೆ ಪೂರಕವಾಗಿದೆ ಎಂದು ತಹಸೀಲ್ದಾರ್ ವಿ.ಎಸ್.ರಾಜೀವ್ ಹೇಳಿದರು.
    ಬಯಲು ರಂಗ ಮಂದಿರ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ದೇಶದ ಸಂವಿಧಾನ ವಿಶ್ವ ಶ್ರೇಷ್ಟವಾಗಿದೆ. ನಾವು ಸಂವಿಧಾನದ ಆಶಯಕ್ಕೆ ಧಕ್ಕೆ ಬಾರದ ರೀತಿ ನಡೆದುಕೊಳ್ಳಬೇಕು. ಅದರಲ್ಲಿ ಅಡಕವಾಗಿರುವ ನೀತಿ, ನಿಯಮವನ್ನು ಶ್ರದ್ಧೆಯಿಂದ ಪಾಲಿಸಬೇಕು ಎಂದರು.
    ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ವ್ಯವಸ್ಥೆ ಸಂವಿಧಾನದಡಿ ಕಾರ್ಯ ನಿರ್ವಹಿಸುತ್ತಿದ್ದು, ದೇಶದ ಸಮಗ್ರತೆಗೆ ಅದರ ನೀತಿ ನಿಯಮ ಪೂರಕವಾಗಿದೆ ಎಂದು ತಿಳಿಸಿದರು. ಪುರಸಭೆ ಅಧ್ಯಕ್ಷ ಪರಮೇಶ ಮಾತನಾಡಿ, ಸಾಮರಸ್ಯ, ಸಹೋದರತೆ ಭಾವನೆ, ಐಕ್ಯತೆಯನ್ನು ಸಂವಿಧಾನ ಸಾರಿದ್ದು, ದೇಶದ ಜನತೆಗೆ ಸಮಾನ ಶಿಕ್ಷಣ, ಮೂಲಭೂತ ಹಕ್ಕುಗಳು ಸಂವಿಧಾನದಿಂದ ಲಭಿಸಿದೆ ಎಂದರು.
    ಪೊಲೀಸರು, ಗೃಹ ರಕ್ಷಕ ದಳ, ಪೌರ ಕಾರ್ಮಿಕರು ಹಾಗೂ ವಿವಿಧ ಶಾಲೆ ವಿದ್ಯಾರ್ಥಿಗಳು ನಡೆಸಿದ ಪಥ ಸಂಚಲನ ನಡೆಸಿದರು. ಶಾಲಾ ಮಕ್ಕಳಿಂದ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts