blank

ಸ್ಕೂಟಿ ನಂಬರ್​ ಪ್ಲೇಟ್​ ಮೇಲೆ ‘SEX’, ಮುಜುಗರಕ್ಕೀಡಾದ ಯುವತಿ ಇದರ ಸಹವಾಸವೇ ಬೇಡ ಅಂತ ಮೂಲೆಗಿಟ್ಟಳು

blank

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿದ್ಯಾರ್ಥಿನಿಯೊಬ್ಬಳ ಸ್ಕೂಟಿಗೆ ಆರ್‌ಟಿಒ ನೀಡಿರುವ ನಂಬರ್‌ ಪ್ಲೇಟ್‌ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಷ್ಟೇ ಅಲ್ಲ, ಆ ನಂಬರ್​ ಪ್ಲೇಟ್​ ಮೇಲಿರುವ SEX ಅಕ್ಷರದಿಂದಾಗಿ ಆಕೆ ತೀವ್ರ ಮುಜುಗರಕ್ಕೀಡಾಗಿ, ಆ ಸ್ಕೂಟಿಯ ಸಹವಾಸವೇ ಬೇಡ ಎಂದು ಮೂಲೆಯೊಂದರಲ್ಲಿ ನಿಲ್ಲಿಸಿಬಿಟ್ಟಿದ್ದಾಳೆ.

ಪಶ್ಚಿಮ ದೆಹಲಿಯಲ್ಲಿ ವಾಸಿಸುತ್ತಿರುವ ದಂಪತಿಯೊಬ್ಬರು ತನ್ನ ಮಗಳು ಮಾನಸಿಗೆ ಸ್ಕೂಟಿಯನ್ನು ಉಡುಗೊರೆಯಾಗಿ ನೀಡಿದ್ದರು. ಅಪ್ಪ-ಅಮ್ಮ ಕೊಟ್ಟ ಗಿಫ್ಟ್​ನಿಂದ ಫುಲ್​ ಖುಷಿಯಾಗಿದ್ದ ಮಗಳು, ಕಾಲೇಜಿಗೆ ಸ್ಕೂಟಿಯನ್ನು ಓಡಿಸಿಕೊಂಡು ಹೋಗಿದ್ದಳು. ಅಲ್ಲಿಂದ ಶುರುವಾಯ್ತು ನೋಡಿ ಆಕೆಗೆ ಮುಜುಗರ. ಆ ಸ್ಕೂಟಿಯನ್ನ ನೋಡಿದಾಕ್ಷಣ ಪರಿಯಚಸ್ಥರು, ಸ್ನೇಹಿತರೆಲ್ಲ ಆಕೆಯನ್ನ ಗೇಲಿ ಮಾಡುತ್ತಾ ಕಾಲೆಳೆದಿದ್ದಾರೆ. ಇದಕ್ಕೆ ಕಾರಣ ಸ್ಕೂಟಿಯ ನಂಬರ್​ ಪ್ಲೇಟಿನಲ್ಲಿ DL3SEX**** ಎಂಬ ಬರಹ ಇರುವುದು.

ಈ ಸ್ಕೂಟಿಗೆ ಆರ್‌ಟಿಒ ನೀಡಿರುವ ನಂಬರ್​ DL3SEX****. ಸ್ಕೂಟಿ ಸಂಖ್ಯೆಯಲ್ಲಿ ಡಿಎಲ್‌ ಎಂಬ ಎರಡು ಇಂಗ್ಲಿಷ್‌ ಅಕ್ಷರಗಳ ಬಳಿಕ ಮುಂದಿನ ವರ್ಣಮಾಲೆಯಲ್ಲಿ SEX ಎಂದು ಬಂದಿದೆ. ಈ ಪದ ನೋಡಿ ಗಾಡಿ ಮೇಲ್ಯಾಕೆ ಸೆಕ್ಸ್‌ ಎಂದಿದೆ ಎಂದು ಹಲವರು ಗೇಲಿ ಮಾಡುತ್ತಿದ್ದಾರಂತೆ. ಹೀಗಾಗಿ ಸ್ಕೂಟಿಯ ಸಹವಾಹಸವೇ ಬೇಡ ಎಂದು ವಿದ್ಯಾರ್ಥಿನಿ ನಿರ್ಧರಿಸಿದ್ದಾಳೆ.

ಈ ವಿಚಾರ ಗೊತ್ತಾಗಿ ತುಂಬಾ ನೊಂದುಕೊಂಡ ಆಕೆಯ ತಂದೆ, ನಂಬರ್ ಪ್ಲೇಟ್‌ ಬದಲಾಯಿಸಲು ಯತ್ನಿಸಿದ್ದಾರೆ. ಆದರೂ ಪ್ರಯೋಜನವಾಗಲಿಲ್ಲ. ನಂಬರ್​ ಬದಲಾವಣೆ ಸಾಧ್ಯವಿಲ್ಲ ಎಂದು ಸಾರಿಗೆ ಇಲಾಖೆ ಅಧಿಕಾರಿಗಳೇ ಹೇಳಿದ್ದಾರಂತೆ.

ವಿವಾದದ ಸುಳಿಯಲ್ಲಿ ‘ಗರುಡ ಗಮನ ವೃಷಭ ವಾಹನ’ ಸಿನಿಮಾ: ಮಾದಪ್ಪ ಭಕ್ತರಿಂದ ಆಕ್ರೋಶ

ಹಾಗೆಲ್ಲ ಮಾಡಿದ್ರೆ ಅಪ್ಪುಗೆ ದ್ರೋಹ ಮಾಡಿದಂತೆ, ಆ ವಿಷ್ಯ ಅವನೊಂದಿಗೆ ಮಣ್ಣಾಗ್ಬೇಕು ಅನ್ಕೊಂಡಿದ್ದ: ರಾಘಣ್ಣ

‘ಹೇಗೆ ಮರಿಯಾಲಿ ಪುನೀತರಾಜು ನಿನ್ನ.. ಹೇಗೆ ಬಂತಪ್ಪ ನಿನಗೆ ಸಾವು?’ ಕಣ್ಣೀರು ತರಿಸುತ್ತೆ ತಾಯಂದಿರ ಸೋಬಾನೆ ಪದ

Share This Article

ಚಳಿಗಾಲದಲ್ಲಿ ಈ ಒಂದು ಹಣ್ಣನ್ನು ತಿಂದರೆ ಸಾಕು.. ರೋಗಗಳೇ ಬರುವುದಿಲ್ಲ..fruits

fruits : ಚಳಿಗಾಲ ಬಂದಿದೆ ಎಂದರೆ ಕೆಮ್ಮು, ನೆಗಡಿ, ಜ್ವರ, ಗಂಟಲು ನೋವು, ಕೀಲು ನೋವು…

ಮಕರ ರಾಶಿಗೆ ಬುಧ ಪ್ರವೇಶ: ಈ 5 ರಾಶಿಯವರಿಗೆ ರಾಜಯೋಗ, ಖುಲಾಯಿಸಲಿದೆ ಅದೃಷ್ಟ! Zodiac Sign

Zodiac Sign : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…

ಪೇನ್​ ಕಿಲ್ಲರ್ ಮಾತ್ರೆ​ vs ಜೆಲ್​… ಎರಡರಲ್ಲಿ ಯಾವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ… Painkiller Tablet vs Gel

Painkiller Tablet vs Gel : ದೇಹವು ಗಾಯಗೊಂಡಾಗ ಅಥವಾ ಉಳುಕಿದಾಗ ನೋವು ಅನುಭವಿಸುವುದು ಸಹಜ.…