More

    ಸದನದಲ್ಲಿ ದುರ್ನಡತೆ: ರಾಜ್ಯಸಭೆ ಕಲಾಪದಿಂದ 1 ವಾರದವರೆಗೆ 19 ಸದಸ್ಯರ ಅಮಾನತು

    ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ನಡೆಯುತ್ತಿದ್ದು, ಸದನದಲ್ಲಿ ನಾಮಫಲಕ ತೋರಿ ಪ್ರತಿಭಟಿಸಿ, ಕಲಾಪಕ್ಕೆ ಅಡ್ಡಿಪಡಿಸಿದ್ದ 19 ಸದಸ್ಯರನ್ನು ಒಂದು ವಾರ ರಾಜ್ಯಸಭಾ ಕಲಾಪದಿಂದ ಅಮಾನತು ಮಾಡಲಾಗಿದೆ.

    ನಾಲ್ವರು ಕಾಂಗ್ರೆಸ್​ ಸಂಸದರೂ ಸೇರಿ 19 ಸಂಸದರನ್ನು ಸ್ಪೀಕರ್​ ಓಂ ಬಿರ್ಲಾ ಅವರು ಅಮಾನತುಗೊಳಿಸಿದ್ದು, ಈ ಎಲ್ಲಾ ಸದಸ್ಯರು ಅಧಿವೇಶನದ ವೇಳೆ ಸಭಾಪತಿ ಪೀಠದ ಎದುರು ನಾಮಫಲಕ ಪ್ರದರ್ಶಿಸಿ ಸದನಕ್ಕೆ ಅಡ್ಡಿಪಡಿಸಿದ್ದರು. ಹಣದುಬ್ಬರ,ಜಿಎಸ್​ಟಿ ಬೆಲೆ ಏರಿಕೆ ಮತ್ತು ಕಾಂಗ್ರೆಸ್​ ಸಂಸದರ ಅಮಾನತು ಸೇರಿದಂತೆ ಇತರೆ ವಿಷಯಗಳ ಕುರಿತು ಸದಸ್ಯರು ಪ್ಲೇ ಕಾರ್ಟ್​ ಹಿಡಿದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರು.

    ಟಿಎಂಸಿ ಸಂಸದರಾದ ಸುಶ್ವಿತಾ ದೇವ್​, ಡಾ.ಸಂತಾನು ಸೇನ್ ಮತ್ತು ಡೋಲಾ ಸೇನ್​ ಇನ್ನುಳಿದ ಶಂತನು ಸೇನ್​,ಮೌಸಂ ನೂರ್​, ನದಿಮುಲ್​ ಹಖ್​, ಅಬೀರ್ ರಂಜನ್​ ಬಿಸ್ವಾಸ್​, ಡಿಎಂಕೆಯ ಕನಿಮೋಳಿ, ಎಂ. ಮೊಹಮ್ಮದ್​ ಅಬ್ದುಲ್ಲ, ಸಿಪಿಐ (ಎಂ)ನ ಎಎ ರಹೀಂ ಅವರನ್ನು ಅಮಾನತು ಮಾಡಲಾಗಿದೆ.

    ಸೋಮವಾರ ಅಧಿವೇಶನಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ನಾಲ್ವರು ಕಾಂಗ್ರೆಸ್ ಸಂಸದರಾದ ಮಾಣಿಕ್ಯಂ ಟ್ಯಾಗೋರ್​, ಟಿಎನ್​ ಪ್ರತಾಪನ್​, ಜೋತಿಮಣಿ ಮತ್ತು ರಮ್ಯಾ ಹರಿದಾಸ್​ ಅವರನ್ನು ಲೋಕಸಭೆಯ ಉಳಿದ ಅವಧಿಗೆ ಅಮಾನತುಗೊಳಿಸಲಾಗಿತ್ತು. (ಏಜೆನ್ಸೀಸ್​)

    ಸಿನಿಮಾಗಳು ನಷ್ಟವಾಗುವುದು ನನಗೆ ಇಷ್ಟವಿಲ್ಲ, ದಕ್ಷಿಣದ ಸಿನಿಮಾಗಳೇ ಬೆಸ್ಟ್​ ಎಂದ ಸಲ್ಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts