More

    ನಮ್ಮ ಕನ್ನಡ ಮಾಧ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮಿಲನ, ತಡವಲಗಾದಲ್ಲಿ ಮನಸೂರೆಗೊಂಡ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ

    ಇಂಡಿ: ಭವ್ಯ ಭಾರತದ ನಿರ್ಮಾಣಕ್ಕಾಗಿ ಮಕ್ಕಳಲ್ಲಿ ಬಾಲ್ಯದಿಂದಲೇ ಸಾಧನೆಯ ಕನಸು ಬಿತ್ತಬೇಕೆಂದು ಬಿಜೆಪಿ ಮುಖಂಡ ದಯಾಸಾಗರ ಪಾಟೀಲ ಹೇಳಿದರು.
    ತಾಲೂಕಿನ ತಡವಲಗಾ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದ ನಮ್ಮ ಶಿಕ್ಷಣ ಪ್ರೋತ್ಸಾಹಿ ಸಂಘದ ನಮ್ಮ ಕನ್ನಡ ಮಾಧ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮಿಲನದಲ್ಲಿ ಮಾತನಾಡಿದ ಅವರು, ಎಪಿಜೆ ಅಬ್ದುಲ್ ಕಲಾಂರು ಬಾಲ್ಯದಲ್ಲಿಯೇ ಕನಸು ಕಂಡವರು. ಅಂತೆಯೇ ಈ ದೇಶದ ಶ್ರೇಷ್ಠ ವಿಜ್ಞಾನಿ ಎನ್ನಿಸಿಕೊಂಡರು. ಅಂಥ ಕನಸುಗಳನ್ನು ಪಾಲಕರು ಮಕ್ಕಳಲ್ಲಿ ಬಿತ್ತಬೇಕೆಂದರು.
    ಸ್ವಾಮಿ ವಿವೇಕಾನಂದ, ಛತ್ರಪತಿ ಶಿವಾಜಿ ಮಹಾರಾಜರಂತೆ ಬಾಲ್ಯದಿಂದಲೇ ಮಕ್ಕಳಿಗೆ ಸಂಸ್ಕಾರ ದೊರೆತಿದ್ದೇ ಆದಲ್ಲಿ ಸಾಧಕರ ಸಾಲಿನಲ್ಲಿ ತಮ್ಮ ಮಕ್ಕಳೂ ಸೇರ್ಪಡೆಯಾಗುವುದರಲ್ಲಿ ಅಚ್ಚರಿಯಿಲ್ಲ. ಯಾವುದೇ ಕ್ಷೇತ್ರದಲ್ಲಾಗಲಿ ಸಾಧನೆಗೆ ಪ್ರೇರೇಪಿಸಬೇಕು. ಪಾಲಕರು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಬೇಕು. ಶಿಕ್ಷಕರು ಆ ಪ್ರತಿಭೆಗೆ ನೀರೆರೆದು ಪೋಷಿಸಬೇಕು. ಸಮಾಜ ಸೂಕ್ತ ವಾತಾವರಣ ನಿರ್ಮಿಸಬೇಕು. ಅಂದಾಗ ಭವ್ಯ ಭಾರತ ನಿರ್ಮಾಣ ಸಾಧ್ಯ ಎಂದರು.
    ಗ್ರಾಪಂ ಮಾಜಿ ಅಧ್ಯಕ್ಷ ತಮ್ಮಣ್ಣ ಪೂಜಾರಿ ಮಾತನಾಡಿ, ಇತ್ತೀಚೆಗೆ ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಉತ್ತಮ ಶಿಕ್ಷಣ ದಯಪಾಲಿಸುತ್ತಿವೆ. ಹಳ್ಳಿ ಹಳ್ಳಿಗಳಲ್ಲೂ ಶಿಕ್ಷಣ ಸಂಸ್ಥೆಗಳು ತಲೆ ಎತ್ತುತ್ತಿವೆ. ಕೈಗೆಟುಕುವ ದರದಲ್ಲಿ ಉತ್ತಮ ಶೈಕ್ಷಣಿಕ ಸೌಲಭ್ಯ ಒದಗಿಸುತ್ತಿವೆ. ಪಾಲಕರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು.
    ನಿವೃತ್ತ ಪ್ರಾಚಾರ್ಯ ಆರ್.ಬಿ. ಪುರೋಹಿತ, ಸೈನಿಕ ಸುಭಾಷ ಜನವಾಡ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಅರ್ಜುನ ಅ. ತಳವಾರ, ಉಷ್ಮಾಗಣಿ ಕಸಾಬ, ಕಲ್ಯಾಣ ಗಣವಲಗಾ, ಆರ್.ಎಸ್. ಪೂಜಾರಿ, ಧರೆಪ್ಪ ಮೇತ್ರಿ, ಶ್ರೀಮಂತ ಜೇವೂರ ಮತ್ತಿತರರಿದ್ದರು. ಸಂತೋಷ ವಾಲೀಕಾರ ಸ್ನೇಹ ಸಮ್ಮಿಲನದ ಗಾಯನ ಪ್ರಸ್ತುತಪಡಿಸಿದರು. ವಿದ್ಯಾರ್ಥಿನಿ ಸೃಜನಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಸೋಮು ತಳವಾರ ನಿರ್ವಹಿಸಿದರು. ಬಳಿಕ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts