More

    ಪುಣೆಯಲ್ಲಿ ಅಪರೂಪದ ವಿವಾಹ; ಎಲ್ಲರ ಗಮನಸೆಳೆದ ನವಜೋಡಿ

    ಪುಣೆ: ಡೌನ್ ಸಿಂಡ್ರೋಮ್ ಕಾಯಿಲೆಯಿಂದ ಬಳಲುತ್ತಿರುವ ಯುವಕ-ಯುವತಿ ಅದ್ಧೂರಿಯಾಗಿ ವಿವಾಹವಾದ ಅಪರೂಪದ ಘಟನೆ ಇತ್ತೀಚೆಗೆ ನಡೆದಿದೆ. ಇವರ ವಿವಾಹವು ತಮಿಳು ಮತ್ತು ಮಹಾರಾಷ್ಟ್ರ ಶೈಲಿಯಲ್ಲಿ ವಿಭಿನ್ನವಾಗಿ ನಡೆಯಿತು. ಮದುವೆಯಾದ ಜೋಡಿ ಹೆಸರು ವಿಘ್ನೇಶ್ ಕೃಷ್ಣಸ್ವಾಮಿ ಮತ್ತು ಅನನ್ಯಾ ಸಾವಂತ್. ವಿಘ್ನೇಶ್​​ಗೆ 27 ವರ್ಷ, ದುಬೈನಲ್ಲಿ ಆತಿಥ್ಯ ಉದ್ಯಮದಲ್ಲಿ ಉದ್ಯೋಗಿಯಾಗಿದ್ದಾರೆ. 22 ವರ್ಷ ವಯಸ್ಸಿನ ಅನನ್ಯಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ವಿವಾಹವಾದ ನಂತರ ಅನನ್ಯಾ ಕೂಡ ದುಬೈಗೆ ಸ್ಥಳಾಂತರಗೊಳ್ಳಲು ಯೋಜಿಸಿದ್ದಾರೆ.

    ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಓದುತ್ತಿರುವ ವಿಘ್ನೇಶ್ ಅವರ ಸಹೋದರಿ ಜನನಿ ವಿಶ್ವನಾಥನ್, ವಿಘ್ನೇಶ್ ಮತ್ತು ಅನನ್ಯಾ ವಿವಾಹವಾಗಲು ಬಹಳ ಮುಖ್ಯ ಪಾತ್ರವಹಿಸಿದ್ದಾರೆ. ಆಕೆಯ ಜೊತೆಗೆ ಚೆನ್ನೈನ ಖಾಸಗಿ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಧುವಿನ ಸಹೋದರಿ ಅಶ್ನಿ ಸಾವಂತ್ ಕೂಡ ಈ ಜೋಡಿಯನ್ನು ಒಟ್ಟಿಗೆ ಸೇರಿಸುವಲ್ಲಿ ಪಾತ್ರವಹಿಸಿದ್ದಾರೆ.

    ಇವರ ವಿವಾಹ ಮಹೋತ್ಸವವು ಮೂರು ದಿನಗಳ ಕಾಲ ನಡೆಯಿತು. ಸ್ನೇಹಿತರು ಮತ್ತು ಕುಟುಂಬ ಸದಸ್ಯರು ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. ಮೆಹಂದಿ ಸಮಾರಂಭ, ಸಂಗೀತ, ಆಕರ್ಷಕ ನೃತ್ಯ ಪ್ರದರ್ಶನ, ಔತಣದೊಂದಿಗೆ ವಿವಾಹ ಭರ್ಜರಿಯಾಗಿ ನೆರವೇರಿತು. ಈ ಜೋಡಿಯ ಮದುವೆಯ ಫೋಟೋಗಳು ಸದ್ಯ ವೈರಲ್ ಆಗಿದ್ದು, ಜನರು ಆನ್‌ಲೈನ್‌ನಲ್ಲಿ ಅವರಿಗೆ ಪ್ರೀತಿಯಿಂದ ಆಶೀರ್ವಾದ ಮಾಡುತ್ತಿದ್ದಾರೆ.

    ಕುಟುಂಬದವರ ವಿರೋಧದ ನಡುವೆಯೂ ಕೃಷಿ ಕೆಲಸಕ್ಕೆ ಕೈ ಹಾಕಿದ ಪದವೀಧರ ಯುವಕ ; ಆಮೇಲೇನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts