More

    ಕುಟುಂಬದವರ ವಿರೋಧದ ನಡುವೆಯೂ ಕೃಷಿ ಕೆಲಸಕ್ಕೆ ಕೈ ಹಾಕಿದ ಪದವೀಧರ ಯುವಕ ; ಆಮೇಲೇನಾಯ್ತು?

    ಬೆಂಗಳೂರು: ಕೃಷಿ ಎಂದರೆ ಮೂಗು ಮುರಿಯುವ ಯುವ ಜನರೇ ಹೆಚ್ಚಾಗಿರುವಾಗ ಯುವಕನೊಬ್ಬ ಕೃಷಿಯಲ್ಲೇ ಯಶಸ್ಸು ಸಾಧಿಸಿ, ಅನೇಕರಿಗೆ ಮಾದರಿಯಾಗಿದ್ದಾರೆ. ಹೌದು ಆ ಯುವಕನ ಹೆಸರು ರೋಹಿತ್. ಬಿಹಾರದವರು. ಸೈನಿಕ ಶಾಲೆಯಲ್ಲಿ ಪದವಿ ಪಡೆದಿದ್ದಾರೆ. ರೋಹಿತ್ ಸೇನಾಧಿಕಾರಿಯಾಗಬೇಕೆಂದು ಅವರ ತಂದೆಯ ಬಯಕೆಯಾಗಿತ್ತು. ಆದರೆ ರೋಹಿತ್ ಮಾತ್ರ ವಿಭಿನ್ನವಾಗಿ ಯೋಚಿಸುತ್ತಿದ್ದರು. ರೋಹಿತ್ ಆದಾಗಲೇ ತಾನು ಕೃಷಿಕನಾಗಬೇಕೆಂದು ಪ್ಲಾನ್ ಮಾಡಿದ್ದರು.

    “ನಾವು ಕೆಲಸ ಹುಡುಕುವ ಬದಲು ಜನರಿಗೆ ಕೆಲಸ ಕೊಡಿಸಬೇಕು” ಎಂಬುದು ರೋಹಿತ್ ಅವರ ಯೋಜನೆಯಾಗಿತ್ತು. ಇದೇ ಕಾರಣಕ್ಕೆ ಪದವಿ ಪಡೆದ ನಂತರ ತನ್ನ ಹಳ್ಳಿಗೆ ಹಿಂದಿರುಗಿದ ರೋಹಿತ್ , ದೊಡ್ಡ ಪ್ರಮಾಣದಲ್ಲಿ ಕೃಷಿ ಕೈಗೊಂಡರು. ಕೃಷಿ ಲಾಭದಾಯಕವಲ್ಲ ಎಂದು ಹೇಳುವವರ ಗ್ರಹಿಕೆ ಬದಲಾಯಿಸಲು ನಿರ್ಧರಿಸಿದರು.

    ರೋಹಿತ್ ಸಂದರ್ಶನವೊಂದರಲ್ಲಿ ಹೇಳಿರುವ ಪ್ರಕಾರ, “ನಾನು 2015ರಂದು ಕೃಷಿ ಮಾಡುವ ಸಲುವಾಗಿ ಹಳ್ಳಿಗೆ ಮರಳಿದೆ. ಇದು ನಮ್ಮ ಮನೆಯವರಿಗೆ ಇಷ್ಟವಿರಲಿಲ್ಲ. ಸಾಕಷ್ಟು ವಿರೋಧ ವ್ಯಕ್ತಪಡಿಸಿದರು. ಕೃಷಿಯು ಕೇವಲ ಜೀವನೋಪಾಯದ ಮೂಲವಲ್ಲ, ಇದು ಕೂಡ ವ್ಯವಹಾರದ ಮಾದರಿ ಎಂದು ನಿರ್ಧರಿಸಿದೆ. ನಮಗೆ ಸಾಕಷ್ಟು ಭೂಮಿಯಿದ್ದು, ಕೃಷಿ ಹಿನ್ನೆಲೆಯೂ ಇತ್ತು. ತಂದೆ ಮಾತ್ರ ಕೃಷಿ ಮಾಡುತ್ತಿದ್ದರು. ಆಗ ನಾನು ಸಾಂಪ್ರದಾಯಿಕ ಕೃಷಿಗೆ ಬದಲಾಗಿ ಹೊಸ ತಂತ್ರಜ್ಞಾನದೊಂದಿಗೆ ವಾಣಿಜ್ಯ ಕೃಷಿ ಮಾಡಲು ನಿರ್ಧರಿಸಿದೆ” ಎಂದು ರೋಹಿತ್ ತಿಳಿಸಿದ್ದಾರೆ.

    ಮೊದಮೊದಲು ರೋಹಿತ್, ಹನಿ ನೀರಾವರಿ ಮೂಲಕ ಕಲ್ಲಂಗಡಿ, ಬಾಳೆ, ಕಿತ್ತಳೆ, ದಾಳಿಂಬೆ, ತರಕಾರಿಗಳ ಕೃಷಿ ಆರಂಭಿಸಿದರು. ಈಗ ರೋಹಿತ್ 100 ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಅವರು ತಮ್ಮ ಉತ್ಪನ್ನಗಳನ್ನು ಬಾಂಗ್ಲಾದೇಶಕ್ಕೂ ಕಳುಹಿಸಲು ಪ್ರಾರಂಭಿಸಿದ್ದಾರೆ. ಜೊತೆಗೆ 200ಕ್ಕೂ ಹೆಚ್ಚು ರೈತರು ಇವರೊಂದಿಗೆ ಕೆಲಸ ಮಾಡುತ್ತಾರೆ. ರೋಹಿತ್ ಆಗಾಗ್ಗೆ ತರಬೇತಿ ಶಿಬಿರಗಳನ್ನೂ ಆಯೋಜಿಸುತ್ತಾ ಜನರಿಗೆ ತರಬೇತಿ ನೀಡುತ್ತಾರೆ.
    ರೋಹಿತ್ ಆಗ್ರೋ ಕ್ಲಿನಿಕ್ ಸಹ ಆರಂಭಿಸಲಿದ್ದು, ಇದರಲ್ಲಿ ರೈತರಿಗೆ ಕೃಷಿ ತರಬೇತಿ ಹಾಗೂ ಬೆಳೆಗಳ ಆರೈಕೆ ಮತ್ತು ನಿರ್ವಹಣೆ ಬಗ್ಗೆ ಮಾಹಿತಿ ನೀಡಲಿದ್ದಾರೆ. ಇದಕ್ಕಾಗಿ ಅವರು ತಜ್ಞರನ್ನೂ ನೇಮಿಸಿಕೊಳ್ಳಲಿದ್ದಾರಂತೆ. ಅಂದಹಾಗೆ ರೋಹಿತ್ ಜಮೀನಿನಲ್ಲಿ ಹನಿ ನೀರಾವರಿ ಅಳವಡಿಸಿಕೊಂಡಿದ್ದಾರಂತೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts