More

    ಆಸ್ಪತ್ರೆ ಬಾಗಿಲಲ್ಲಿ ಕೂತರೂ ಚಿಕಿತ್ಸೆ ಸಿಗಲಿಲ್ಲ, ಹೆಂಡತಿ-ಮಗನ ಕಣ್ಣೆದುರಲ್ಲೇ ನರಳಾಡಿ ಪ್ರಾಣಬಿಟ್ಟ ಕರೊನಾ ಸೋಂಕಿತ!

    ವಿಜಯಪುರ: ಮಹಾಮಾರಿ ಕರೊನಾ ಸೋಂಕಿನ ಅಟ್ಟಹಾಸಕ್ಕೆ ಸಿಲುಕಿದ ವೃದ್ಧನೊಬ್ಬ ಆಸ್ಪತ್ರೆ ಬಾಗಿಲಲ್ಲಿ ಹೆಂಡತಿ-ಮಗನ ಕಣ್ಣೆದುರಲ್ಲೇ ನರಳಾಡುತ್ತಲೇ ಪ್ರಾಣ ಬಿಟ್ಟಿದ್ದಾರೆ.

    ವಿಜಯಪುರ ಜಿಲ್ಲಾಸ್ಪತ್ರೆಯ ಕೋವಿಡ್ ತಪಾಸಣಾ ಕೇಂದ್ರದ ಎದುರೇ ಕರೊನಾ ರೋಗಿ ಸುರೇಶ ಬಾಪುರಾವ್ ದೇಶಪಾಂಡೆ (60) ಮೃತಪಟ್ಟಿದ್ದಾರೆ. ಚಿಕಿತ್ಸೆ ಬೇಕು ಅಂತಾ ಬಂದ ಎರಡು ತಾಸು ಕಾದರೂ ಚಿಕಿತ್ಸೆ ಸಿಗಲಿಲ್ಲ.

    ವಿಜಯಪುರ ನಗರದ ಐದಾರು ಆಸ್ಪತ್ರೆಗಳಿಗೆ ಅಲೆದಾಡಿದರೂ ಸುರೇಶಗೆ ಎಲ್ಲಿಯೂ ಚಿಕಿತ್ಸೆ ಸಿಗಲಿಲ್ಲ. ಬೆಡ್, ಆಕ್ಸಿಜನ್ ಇಲ್ಲ ಎಂದು ಸಬೂಬು ಹೇಳಿದ ಆಸ್ಪತ್ರೆಗಳು ಅಡ್ಮಿಟ್ ಮಾಡಿಕೊಂಡಿಲ್ಲ. ಕೊನೆಗೆ ಜಿಲ್ಲಾಸ್ಪತ್ರೆ ಬಳಿಗೆ ಸುರೇಶ ದೇಶಪಾಂಡೆಯನ್ನು ಕುಟುಂಬಸ್ಥರು ಕರೆತಂದಿದ್ದರು. ಅಲ್ಲಿಯೂ ಬೆಡ್ ಇಲ್ಲ, ಆಕ್ಸಿಜನ್ ಇಲ್ಲ ಎಂದಿದ್ದಾರೆ,
    2 ಗಂಟೆಗೂ ಅಧಿಕ ಕಾಲ ಆಸ್ಪತ್ರೆ ಹೊರಗೆ ನರಳಾಡಿದ ವೃದ್ಧ ಕೊನೆಗೆ ಅಲ್ಲಿಯೇ ಕೊನೆಯುಸಿರೆಳೆದರು.

    ಸತ್ತರೂ ಹೆಣ ಎತ್ತಲು 2 ಗಂಟೆವರೆಗೂ ಆಸ್ಪತ್ರೆಯ ಯಾರೊಬ್ಬರೂ ಬಂದಿಲ್ಲ. ಗಂಡನ ಶವವನ್ನ ತೊಡೆ ಮೇಲೆ ಮಲಗಿಸಿಕೊಂಡೇ ಪತ್ನಿ ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲಕುವಂತಿತ್ತು. 2 ತಾಸಿನ ಬಳಿಕ ಆಸ್ಪತ್ರೆ ಸಿಬ್ಬಂದಿ ಶವ ತೆಗೆದುಕೊಂಡು ಹೋದರು.

    ಕರೊನಾಗೆ ಸಂಸದ ಶ್ರೀನಿವಾಸಪ್ರಸಾದ್​ರ ಆಪ್ತ ಸಹಾಯಕ ಶಂಕರ್ ಸಾವು

    ರಾಹುಲ್​ ಗಾಂಧಿಗೆ ಕರೊನಾ ಪಾಸಿಟಿವ್​

    ರೌಡಿಶೀಟರ್ ಪತ್ನಿ ಜತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಿಯಕರ! ಮುಂದೆ ಆಗಿದ್ದೆಲ್ಲವೂ ಅವಾಂತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts