More

    ದೊಡ್ಡಪ್ಪ ಸತ್ತ ಒಂದೇ ವಾರಕ್ಕೆ ಮಗಳ ಸಾವು: ರಾತ್ರೋರಾತ್ರಿ ಆಸ್ಪತ್ರೆಗೆ ಕರೆ ತಂದರೂ ಬದುಕಲಿಲ್ಲ

    ತುಮಕೂರು: ಜಿಲ್ಲೆಯಲ್ಲಿ ಕರೊನಾ ಮರಣ ಮೃದಂಗ ಬಾರಿಸುತ್ತಿದೆ. ಯುವಕರೇ ಹೆಚ್ಚಾಗಿ ಸಾಯುತ್ತಿದ್ದು, ಜಿಲ್ಲೆಯ ಜನರಿಗೆ ಮತ್ತಷ್ಟು ಭೀತಿ ತರಿಸಿದೆ. ಇದೀಗ 21 ವರ್ಷದ ಯುವತಿಯೊಬ್ಬಳು ಕರೊನಾಗೆ ಬಲಿಯಾಗಿದ್ದಾಳೆ.

    ತುಮಕೂರು ತಾಲೂಕಿನ ಕುಚ್ಚಂಗಿ ಗ್ರಾಮದ ರೇಖಾ ಗುರುವಾರ ಮಧ್ಯರಾತ್ರಿ ಮೃತಪಟ್ಟಿದ್ದಾಳೆ. ಪದವಿ ಮುಗಿಸಿದ್ದ ರೇಖಾ ಇವೆಂಟ್ಸ್ ಮ್ಯಾನೇಜ್​ಮೆಂಟ್​ ನೋಡಿಕೊಳ್ಳುತ್ತಿದ್ದರು. ಸದಾ ಲವಲವಿಕೆಯಿಂದ ಇರುವತ್ತಿದ್ದ ರೇಖಾ, ಕುಟುಂಬಕ್ಕೆ ನೆಚ್ಚಿನ ಮಗಳಾಗಿದ್ದಳು.

    ವಾರದ ಹಿಂದೆ ರೇಖಾಳ ದೊಡ್ಡಪ್ಪ ಹೃದಯಾಘಾತದಿಂದ ಮೃತಪಟ್ಟಿದ್ದರು. ಇವರ ಸಾವಿಂದ ರೇಖಾ ಮಾನಸಿಕವಾಗಿ ಜರ್ಜರಿತಳಾಗಿದ್ದಳು. ಇದೇ ವೇಳೆ ಕರೊನಾ ಸೋಂಕು ತಗುಲಿತ್ತು. ನಿನ್ನೆ ರಾತ್ರಿ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ರೇಖಾಗೆ ಸಿಟಿ ಸ್ಕ್ಯಾನ್ ಮಾಡಿಸಿದ್ದು, ಶ್ವಾಸಕೋಶ ಸಮಸ್ಯೆ ಇರುವುದು ಗೊತ್ತಾಗಿದೆ. ಇನ್ನೇನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಬೇಕು ಎನ್ನುವಷ್ಟರಲ್ಲಿ ರೇಖಾ ಅಸುನೀಗಿದ್ದಾಳೆ. ದೊಡ್ಡಪ್ಪನ ಸಾವಿಂದ ದುಃಖದ ಮಡುವಿನಲ್ಲಿದ್ದ ಕುಟುಂಬಕ್ಕೆ ರೇಖಾಳ ಸಾವು ಮತ್ತಷ್ಟು ಆಘಾತ ನೀಡಿದೆ.

    ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಮೃತಪಟ್ಟದ್ದು ಕರೊನಾದಿಂದಲ್ಲ! ಸಾವಿಗೆ ಬೇರೆ ಕಾರಣ ಇದೆ

    ಬೆಳಗ್ಗೆ ಮಗ, ಸಂಜೆ ತಂದೆ, ಮರುದಿನ ಮಗಳು, ನಂತರ ಮತ್ತೊಬ್ಬ ಮಗಳ ಸಾವು… ಇನ್ನಿಬ್ಬರ ಸ್ಥಿತಿ ಚಿಂತಾಜನಕ

    ಕರೊನಾ ಹಿನ್ನೆಲೆ ದೇವರ ಉತ್ಸವ ಮಾಡಲ್ಲ ಎಂದ ಅರ್ಚಕನ ಕುಟುಂಬದ ಮೇಲೆ ಹಲ್ಲೆ, ಕುಡಿವ ನೀರು ಬಂದ್​

    ಕಾರಿನಲ್ಲೇ ಟಿವಿ ಸೀರಿಯಲ್​ ನಟಿಯ ಬೆತ್ತಲೆ ದೃಶ್ಯ ಸೆರೆ! ಮುಂದೆ ಆಗಿದ್ದೆಲ್ಲವೂ ಅವಾಂತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts