More

    ಜಾಲಪ್ಪ ಸ್ಥಾಪಿಸಿದ್ದ ಟ್ರಸ್ಟ್​ನಲ್ಲಿ ಬಿರುಕು: ಅಪ್ಪನ ಬಳಿಕ ನಾನೇ ಅಧಿಪತಿ ಎಂದ ಹಿರಿಯ ಪುತ್ರ! ತನಿಖೆಗೆ ಆಗ್ರಹಿಸುತ್ತಲೇ ಸಿಡಿದೆದ್ದ ಮೊಮ್ಮಗ

    ಕೋಲಾರ: ಕೇಂದ್ರ ಮಾಜಿ ಸಚಿವ, ಹಿರಿಯ ರಾಜಕಾರಣಿ ಆರ್​.ಎಲ್​.ಜಾಲಪ್ಪ ನಿಧನರಾದ ಮೇಲೆ ಅವರು ಸ್ಥಾಪಿಸಿದ್ದ ಶ್ರೀ ದೇವರಾಜ ಅರಸು ಟ್ರಸ್ಟ್​ನಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಅಧಿಕಾರಕ್ಕಾಗಿ ಕಲಹ ಶುರುವಾಗಿದೆ.

    ಜಾಲಪ್ಪ ಸ್ಥಾನಕ್ಕೆ ಹಿರಿಯ ಪುತ್ರ ನರಸಿಂಹಸ್ವಾಮಿ ಬದಲಿಗೆ ಕಾರ್ಯದರ್ಶಿ ಜಿ.ಎಚ್​.ನಾಗರಾಜು ಆಯ್ಕೆ ವಿರೋಧಿಸಿ ಬಂಡಾಯದ ಕಹಳೆ ಮೊಳಗಿಸಿರುವ ಮಕ್ಕಳು ಮತ್ತು ಮೊಮ್ಮಕ್ಕಳು ಹಾಗೂ ಬೆಂಬಲಿಗರು ಸೋಮವಾರ ಬೃಹತ್​ ಪ್ರತಿಭಟನೆ ಮೂಲಕ ಸೆಡ್ಡು ಹೊಡೆದಿದ್ದಾರೆ.

    ಜಾಲಪ್ಪ ಅವರು ಅನಾರೋಗ್ಯದಿಂದಾಗಿ 5 ವರ್ಷಗಳಿಂದ ಟ್ರಸ್ಟ್​ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಆಗಿರಲಿಲ್ಲ. 2021ರ ಡಿ.17ರಂದು ಮೃತರಾದ ಮೇಲೆ ಕಾರ್ಯದರ್ಶಿ ನಾಗರಾಜ್​ ಅವರನ್ನು ಒಂದು ಗುಂಪು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತ್ತು. ತಮಗೆ ಸಿಕ್ಕ ಅಧಿಕಾರ ಬಳಸಿಕೊಂಡು ನಾಗರಾಜ್​ ಅವರು ಟ್ರಸ್ಟ್​ ಉಪಾಧ್ಯಕ್ಷರನ್ನಾಗಿ ಜಾಲಪ್ಪ ಅವರ ಕಿರಿಯ ಮಗ ರಾಜೇಂದ್ರ ಅವರನ್ನು ನೇಮಿಸಿಕೊಂಡು, ಈ ಹಿಂದೆ ಉಪಾಧ್ಯಕ್ಷರಾಗಿದ್ದ ರಾಜೇಶ್​ ಎನ್​.ಜಗದಾಳೆ ಹಾಗೂ ರಾಜೇಂದ್ರ ಅವರಿಗೆ ಮಾತ್ರ ಮತದಾನದ ಹಕ್ಕು ನೀಡಿ, ನರಸಿಂಹಸ್ವಾಮಿ ಅವರಿಗೆ ಯಾವುದೇ ಸ್ಥಾನ ನೀಡಿರಲಿಲ್ಲ. ಜತೆಗೆ ಮೊಮ್ಮಗ ಆನಂದ್​ ಹಾಗೂ 4 ಹೆಣ್ಣು ಮಕ್ಕಳನ್ನು ಟ್ರಸ್ಟಿಗಳನ್ನಾಗಿ ನೇಮಿಸಿ ಮತದಾನದ ಹಕ್ಕು ನೀಡಿಲ್ಲ. ಇದರಿಂದ ಕುಪಿತರಾದ ಮಕ್ಕಳು, ಸಂಬಂಧಿಕರು, ಬೆಂಗಲಿಗರು ಪ್ರತಿಭಟನೆ ನಡೆಸಿದರು. ದೊಡ್ಡಬಳ್ಳಾಪುರ ಇನ್ನಿತರ ಕಡೆಯಿಂದ ನೂರಾರು ಸಂಖ್ಯೆಯಲ್ಲಿ ಬಂದಿದ್ದ ಅಭಿಮಾನಿಗಳು ಜಿ.ಎಚ್​.ನಾಗರಾಜ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಟ್ರಸ್ಟ್​ನ ಅಧ್ಯಕ್ಷರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದರಿಂದ ಪೊಲೀಸರು ಗುಂಪು ಚದುರಿಸಲು ಲಾಠಿ ಪ್ರಹಾರ ಮಾಡಿದರು.

    ಜಾಲಪ್ಪ ಸ್ಥಾಪಿಸಿದ್ದ ಟ್ರಸ್ಟ್​ನಲ್ಲಿ ಬಿರುಕು: ಅಪ್ಪನ ಬಳಿಕ ನಾನೇ ಅಧಿಪತಿ ಎಂದ ಹಿರಿಯ ಪುತ್ರ! ತನಿಖೆಗೆ ಆಗ್ರಹಿಸುತ್ತಲೇ ಸಿಡಿದೆದ್ದ ಮೊಮ್ಮಗ

    ಪೊಲೀಸರ ವಿರುದ್ಧ ಕ್ರಮಕ್ಕೆ ಪಟ್ಟು: ಪ್ರತಿಭಟನಾಕಾರರು ಸ್ಥಳಕ್ಕೆ ಗೃಹಸಚಿವರು ಬಂದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಟ್ಟು ಹಿಡಿದು ಧರಣಿ ಕುಳಿತಿದ್ದರಿಂದ ಜನರನ್ನು ಸಮಾಧಾನಪಡಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಈ ಮಧ್ಯೆ ಜಾಲಪ್ಪ ಅವರ ಹಿರಿಯ ಮಗ ನರಸಿಂಹಸ್ವಾಮಿ ಅವರನ್ನು ಕೆಲವರು ಅಧ್ಯಕ್ಷರ ಕುರ್ಚಿಯಲ್ಲಿ ಕೂರಿಸಿ ಅಭಿನಂದನೆ ಸಲ್ಲಿಸಿದರಲ್ಲದೆ, ನಾಗರಾಜು ಮತ್ತವರ ತಂಡಕ್ಕೆ ಪ್ರವೇಶವಿಲ್ಲವೆಂದು ಘೋಷಣೆ ಮಾಡಿದರು.

    ಅಪ್ಪನ ನಂತರ ನಾನೇ ಅಧಿಪತಿ: ಅಧ್ಯಕ್ಷರ ಕೋಣೆಯಲ್ಲಿ ಕುರ್ಚಿ ಅಲಂಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ನರಸಿಂಹಸ್ವಾಮಿ, ನಮ್ಮ ತಂದೆ ಬಡವರ ಸಲುವಾಗಿ ದೇವರಾಜ ಅರಸು ಟ್ರಸ್ಟ್​ ಸ್ಥಾಪಿಸಿದರು. ಟ್ರಸ್ಟ್​ನಲ್ಲಿ ಕೇವಲ ಜಾಲಪ್ಪನವರ ಕುಟುಂಬಸ್ಥರಿಗೆ ಮಾತ್ರವಲ್ಲದೆ ಹಿಂದುಳಿದ ವರ್ಗಕ್ಕೆ ಸೇರಿದ ಅನೇಕರಿಗೆ ಸ್ಥಾನ ಕಲ್ಪಿಸಿದ್ದರು. ಜಾಲಪ್ಪ ಬರೆದಿರುವ ವಿಲ್​ನಲ್ಲಿ ನನ್ನ ನಂತರ ಹಿರಿಯ ಮಗ ಟ್ರಸ್ಟ್​ ಅಧಿಪತಿಯಾಗಬೇಕೆಂದು ತಿಳಿಸಿದ್ದಾರೆ. ಆದರೆ ಸಂಬಂಧಿ ಎಂದು ಹೇಳಿಕೊಂಡು ಟ್ರಸ್ಟ್​ ಕಾರ್ಯದರ್ಶಿಯಾದ ಜೆ.ಎಚ್​.ನಾಗರಾಜು, ನಮ್ಮ ತಂದೆಯವರು ಅನಾರೋಗ್ಯದಿಂದ ಹಾಸಿಗೆ ಹಿಡಿದ ಬಳಿಕ ಸಂಪೂರ್ಣ ಆಡಳಿತವನ್ನು ಹಿಡಿತಕ್ಕೆ ಪಡೆದು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ನಮ್ಮ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಗಳ ಸುರಿಮಳೆಗೈದರು.

    ನಾಗರಾಜ್​ ಅಧ್ಯಕ್ಷರಾಗುವುದಕ್ಕೆ ಅರ್ಹರಲ್ಲ, ಬೇಕಿದ್ದರೆ ಕಾರ್ಯದರ್ಶಿಯಾಗಿ ಮುಂದುವರಿಯಲಿ. ಟ್ರಸ್ಟ್​ನಲ್ಲಿ ನಮ್ಮ ಕುಟುಂಬದ ಸದಸ್ಯರಿಗೆ ಸೂಕ್ತ ಸ್ಥಾನಮಾನದ ಜತೆಗೆ ಮತದಾನದ ಹಕ್ಕು ನೀಡಬೇಕೆಂದು ಒತ್ತಾಯಿಸಿದರು.

    ಜಾಲಪ್ಪ ಸ್ಥಾಪಿಸಿದ್ದ ಟ್ರಸ್ಟ್​ನಲ್ಲಿ ಬಿರುಕು: ಅಪ್ಪನ ಬಳಿಕ ನಾನೇ ಅಧಿಪತಿ ಎಂದ ಹಿರಿಯ ಪುತ್ರ! ತನಿಖೆಗೆ ಆಗ್ರಹಿಸುತ್ತಲೇ ಸಿಡಿದೆದ್ದ ಮೊಮ್ಮಗ

    ಅಕ್ರಮ ತನಿಖೆಗೆ ಒತ್ತಾಯ: ಜೆ.ಎಚ್​.ನಾಗರಾಜು ನಮ್ಮ ತಾತನವರ ನೆಂಟರೂ ಅಲ್ಲ, ಕುಟುಂಬದ ಸದಸ್ಯರೂ ಅಲ್ಲ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪನೆ ವೇಳೆ ಸಹಕರಿಸಿದ್ದಾರೆಂಬ ಕಾರಣಕ್ಕೆ ಟ್ರಸ್ಟ್​ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಜಾಲಪ್ಪ ಅವರು ಟ್ರಸ್ಟ್​ ಕೆಲಸ ನಿರ್ವಹಿಸಲು ಸಾಧ್ಯವಾಗದಿದ್ದಾಗ ನಾಗರಾಜು ಅವರು ಅವಕಾಶ ದುರುಪಯೋಗ ಪಡಿಸಿಕೊಂಡು ಅನೇಕ ಅಕ್ರಮ ನಡೆಸಿದ್ದು, ಸರ್ಕಾರ ಸಮಗ್ರ ತನಿಖೆ ನಡೆಸಬೇಕೆಂದು ಜಾಲಪ್ಪ ಮೊಮ್ಮಗ ಎನ್​.ಅರವಿಂದ್​ ಆಗ್ರಹಿಸಿದರು.

    ನಾಗರಾಜು ಅವರಿಗೆ ಟ್ರಸ್ಟ್​ ಬಗ್ಗೆ ಮತ್ತು ಜಾಲಪ್ಪನವರ ಬಗ್ಗೆ ಕಿಂಚಿತ್ತಾದರೂ ಅಭಿಮಾನ, ಕೃತಜ್ಞತೆ ಇದ್ದಿದ್ದರೆ ಕೆಲ ವರ್ಷಗಳ ಹಿಂದೆ ಟ್ರಸ್ಟ್​ ಮೇಲೆ ಐಟಿ ದಾಳಿ ನಡೆಸಿದಾಗ ಏಕೆ ದನಿ ಎತ್ತಲಿಲ್ಲ? ರಶೀದ್​ ಕೊಲೆ ಪ್ರಕರಣದಲ್ಲಿ ಜಾಲಪ್ಪ ಅವರ ಮೇಲೆ ಆರೋಪ ಕೇಳಿ ಬಂದಾಗ ಸಹಾಯಕ್ಕೆ ಏಕೆ ನಿಲ್ಲಲಿಲ್ಲ? ಜಾಲಪ್ಪ ನಿಧನರಾಗುವವರೆಗೆ ಸುಮ್ಮನಿದ್ದು, ಈಗ ಅಧ್ಯಕ್ಷರಾಗಿರುವುದಾಗಿ ಘೋಷಣೆ ಮಾಡಿಕೊಂಡಿರುವ ಹಿಂದಿನ ಗುಟ್ಟೇನು? ಎಂದು ಪ್ರಶ್ನಿಸಿದರು.

    ಶಾಲೆಯಲ್ಲೇ ವಿದ್ಯಾರ್ಥಿನಿ ಜತೆ ಮುಖ್ಯಶಿಕ್ಷಕ ರೊಮಾನ್ಸ್​! ತಬ್ಬಿಕೊಂಡು ಮುತ್ತಿಡುತ್ತಿರುವ ವಿಡಿಯೋ ವೈರಲ್​, ಎಚ್​.ಡಿ.ಕೋಟೆಯಲ್ಲಿ ಘಟನೆ

    ಸೇತುವೆ ಮೇಲಿಂದ ಪ್ರಪಾತಕ್ಕೆ ಕಾರು ಪಲ್ಟಿ: ಬಿಜೆಪಿ ಶಾಸಕನ ಪುತ್ರ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳು ದಾರುಣ ಸಾವು

    ಗ್ರಾಪಂ ಕಚೇರಿಯಲ್ಲೇ ಪ್ರೇಮಿಗಳ ಮದುವೆ, ಪೌರೋಹಿತ್ಯ ವಹಿಸಿದ ಪಿಡಿಒ! ನಂಜನಗೂಡಲ್ಲಿ ನವಜೋಡಿ ಪ್ರಕರಣ ಸುಖಾಂತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts