More

    ಮರಣಮೃದಂಗ ಬಾರಿಸುತ್ತಿದೆ ಕಲುಷಿತ ನೀರು ಸರಬರಾಜು ಪ್ರಕರಣ: 7ಕ್ಕೇರಿದ ಸಾವಿನ ಸಂಖ್ಯೆ

    ರಾಯಚೂರು: ನಗರದಲ್ಲಿ ಕಲುಷಿತ ನೀರು ಪ್ರಕರಣ ಮರಣಮೃದಂಗ ಬಾರಿಸುತ್ತಿದೆ. ನಗರಸಭೆ ಸರಬರಾಜು ಮಾಡಿದ್ದ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮತ್ತೊಂದು ಜೀವ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆ.

    14ನೇ ವಾರ್ಡ್​ನ ಮಚ್ಚಿಬಜಾರ್ ನಿವಾಸಿ ಶಮೀಮ್ ಬೇಗಂ(48) ಮೃತ ದುರ್ದೈವಿ. ಕಲುಷಿತ ನೀರು ಸೇವಿಸಿದ ಬಳಿಕ ವಾಂತಿ, ಭೇದಿ, ಕಿಡ್ನಿ ಸಮಸ್ಯೆ ಕಾಣಿಸಿಕೊಂಡು ಅಸ್ವಸ್ಥರಾದ ಶಮೀಮ್​, ಮೇ 29ರಂದು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ರಾಂಪುರ ಜಲಾಶಯದಿಂದ ನಗರದ 14 ವಾರ್ಡ್​ಗಳಿಗೆ ನೀರನ್ನು ಶುದ್ಧೀಕರಿಸದೆ ಪೂರೈಕೆ ಮಾಡಿದ್ದು, ಈ ನೀರು ಕುಡಿದ ಹಲವರ ಆರೋಗ್ಯ ಹದಗೆಟ್ಟಿದೆ. ಈ ನೀರನ್ನು ಕುಡಿದ ನೂರಾರು ಮಂದಿ ಅಸ್ವಸ್ಥಗೊಂಡಿದ್ದಾರೆ ಎಂಬುದು ಮೇ 31ರಂದು ಬಯಲಾಗಿತ್ತು. ಅಂದೇ ಇಂದಿರಾ ನಗರದ ಮಲ್ಲಮ್ಮ(40) ವಾಂತಿಯಿಂದ ಮೃತಪಟ್ಟಿದ್ದಳು. ಮಲ್ಲಮ್ಮ ಮೃತಪಟ್ಟ ಮೂರು ದಿನಕ್ಕೆ 7 ವಾರ್ಡ್​ನ ಅಬ್ದುಲ್ ಗಫೂರ್(37), ಅರಬ್ ಮೊಹಲ್ಲಾದ ಮಹ್ಮದ್​ ನೂರ್(43), ಜೂ.8ರಂದು ಅಂದ್ರೂನ್ ಕಿಲ್ಲಾ ಅಬ್ದುಲ್ ಕರೀಂ ಕೊನೆಯುಸಿರೆಳೆದಿದ್ದರು. ಜೂ.10ರಂದು 13ನೇ ವಾರ್ಡ್​ನ ಯರಗೆರಾ ಕಾಲನಿ ನಿವಾಸಿ ಜನಕರಾಜ್(48) ಮೃತಪಟ್ಟಿದ್ದರು. ಜೂ.14ರಂದು ನಯೀಮುದ್ದೀನ್​ ಕೂಡ ಕಲುಷಿತ ನೀರಿಗೆ ಬಲಿಯಾಗಿದ್ದರು. ಇದೀಗ ಮಲ್ಲಮ್ಮ ಸಾವಿಗೂ ಮುನ್ನವೇ ಶಮೀಮ್​ ಮೃತಪಟ್ಟಿದ್ದರು ಎಂಬುದು ತಡವಾಗಿ ಬೆಳಕಿಗೆ ಬಂದಿದೆ.

    ರಾಜಕೀಯ ಇತಿಹಾಸ ನಿರ್ಮಿಸಿದ ಹೊರಟ್ಟಿ: ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಸತತ 8ನೇ ಬಾರಿಗೆ ಗೆದ್ದು ಬೀಗಿದ ಬಸವರಾಜ ಹೊರಟ್ಟಿ

    ಅಕ್ಕನ ಚಿತೆಗೆ ಹಾರಿ ಪ್ರಾಣಬಿಟ್ಟ ತಮ್ಮ! ನೋವಲ್ಲೇ 430km ದೂರದಿಂದ ಬಂದವ ನೋಡನೋಡುತ್ತಿದ್ದಂತೆ ಸುಟ್ಟು ಕರಕಲಾದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts