More

    ಉಗ್ರಪ್ಪ ಎಲ್ಲಿ? ಚಪ್ಪಲಿ ತಗೊಂಡು ಹೊಡೀಬೇಕು… ಕೆಪಿಸಿಸಿ ಕಚೇರಿಯಲ್ಲಿ ಮಹಿಳಾ ಕಾರ್ಯಕರ್ತೆ ಆಕ್ರೋಶ

    ಬೆಂಗಳೂರು: ಉಗ್ರಪ್ಪ ಎಲ್ಲಿ…? ಚಪ್ಪಲಿ ತಗೊಂಡು ಹೊಡೆಯಬೇಕು… ಎಂದು ಕೂಗಾಡುತ್ತಾ ಕೆಪಿಸಿಸಿ ಕಚೇರಿಯಲ್ಲಿ ಮಹಿಳಾ ಕಾರ್ಯಕರ್ತೆಯೊಬ್ಬರು ಸಂಸದ ಉಗ್ರಪ್ಪರಿಗಾಗಿ ಹುಡುಕಾಡಿದ ಪ್ರಸಂಗ ಬುಧವಾರ ಮಧ್ಯಾಹ್ನ ನಡೆಯಿತು.

    ಕೆಪಿಸಿಸಿ ಕಚೇರಿಯಲ್ಲಿ ವಿ.ಎಸ್​. ಉಗ್ರಪ್ಪ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಅವರ ಮೇಲೆ ದಾಳಿ ಮಾಡಲು ಕಾಂಗ್ರೆಸ್​ ಕಾರ್ಯಕರ್ತರು ಯತ್ನಿದರು. ‘ನಿಮ್ಮನ್ನು ಸಂಸದರನ್ನಾಗಿ ಮಾಡಿದ್ದು ಡಿಕೆಶಿ. ಮತ್ಯಾರೂ ಅಲ್ಲ’ ಎಂದು ತರಾಟೆಗೆ ತೆಗೆದುಕೊಂಡರು. ‘ನಾನೇನು ಮಾಡಿಲ್ಲ’ ಎಂದು ಉಗ್ರಪ್ಪ ಸಮಜಾಯಿಷಿ ಕೊಡಲು ಯತ್ನಿಸಿದ್ದರಾದರೂ ಕಾಂಗ್ರೆಸ್​ ಕಾರ್ಯಕರ್ತರು ಕೋಪ ತಣ್ಣಗಾಗಲೇ ಇಲ್ಲ. ಸಲೀಂ ಮತ್ತು ಉಗ್ರಪ್ಪ ವಿರುದ್ಧ ಕಿಡಿಕಾರಿದ ಮಹಿಳಾ ಕಾರ್ಯಕರ್ತೆ ಮಂಜುಳಾ ನಾಗರಾಜ್​, ಇವರನ್ನೆಲ್ಲ ಬೆಂಕಿಗೆ ಎಸೆಯಬೇಕು. ಕಾಂಗ್ರೆಸ್​ನಲ್ಲಿ ಇರೋಕೆ ಇವರು ನಾಲಾಯಕ್​. ಬಿಜೆಪಿ ಏಜೆಂಟ್​ಗಳು ಇವ್ರು. ಕೋಪ ಬರ್ತಿದೆ… ಎನ್ನುತ್ತಲೇ ಹಲ್ಲುಕಚ್ಚಿ ಆಕ್ರೋಶ ಹೊರಹಾಕಿದರು. ಅಲ್ಲೇ ಇದ್ದ ಉಗ್ರಪ್ಪ ತೀವ್ರ ಮುಜುಗರ ಅನುಭವಿಸಬೇಕಾಗಿ ಬಂತು.

    ಏನಿದು ರಾದ್ಧಾಂತ?: ಡಿ.ಕೆ. ಶಿವಕುಮಾರ್​ ಕಲೆಕ್ಷನ್​ ಗಿರಾಕಿ, ಪಟ್ಟು ಹಿಡಿದು ಡಿಕೆಶಿ ಅವರನ್ನು ಅಧ್ಯಕ್ಷನ್ನಾಗಿ ಮಾಡಿದ್ದು ನಾವು, ಆದರೂ ತಕ್ಕಡಿ ಮೇಲೇಳುತ್ತಿಲ್ಲ… ಎಂದು ಕಾಂಗ್ರೆಸ್​ ನಾಯಕರಾದ ಸಲೀಂ ಮತ್ತು ಉಗ್ರಪ್ಪ ಇಬ್ಬರೂ ಮಂಗಳವಾರ ಕೆಪಿಸಿಸಿ ಕಚೇರಿಯಲ್ಲೇ ಸಂಭಾಷಣೆ ನಡೆಸಿದ್ದರು. ಇದು ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದ್ದು, ಸ್ವಪಕ್ಷೀಯರಿಂದಲೇ ತಮ್ಮ ವಿರುದ್ಧ ಮಾತನಾಡಿರುವುದು ಡಿಕೆಶಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಜುಗರ ತಂದೊಡ್ಡಿದೆ. ಅತ್ತ ಇದನ್ನೇ ಬಂಡವಾಳ ಮಾಡಿಕೊಂಡ ಬಿಜೆಪಿ, ಸಾಮಾಜಿಕ ಜಾಲತಾಣದಲ್ಲಿ ಡಿಕೆಶಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಸಂಸದ ಉಗ್ರಪ್ಪ ಸುದ್ದಿಗೋಷ್ಠಿ ನಡೆಸಿ ಡ್ಯಾಮೇಜ್​ ಕಂಟ್ರೋಲ್​ಗೆ ಯತ್ನಿಸಿದ್ದರಾದರೂ ಪ್ರಯೋಜನವಾಗಿಲ್ಲ. ಈ ನಡುವೆ ಉಗ್ರಪ್ಪಗೆ ನೋಟಿಸ್​ ಜಾರಿ ಮಾಡಿದ್ದು, ಕೆಪಿಸಿಸಿ ಮಾಧ್ಯಮ ವಿಭಾಗದ ಕೋ ಆರ್ಡಿನೇಟರ್ ಸ್ಥಾನದಿಂದ ಸಲೀಂ ಅವರನ್ನ ಅಮಾನತು ಮಾಡಲಾಗಿದೆ.

    ಇಷ್ಟೆಲ್ಲ ಬೆಳವಣಿಗೆ ಬಳಿಕ ಬುಧವಾರ ಮಧ್ಯಾಹ್ನ ಕೆಪಿಸಿಸಿ ಕಚೇರಿಯಲ್ಲಿ ಡಿಕೆಶಿ ಸುದ್ದಿಗೋಷ್ಠಿ ನಡೆಸಿ, ರಾಜಕೀಯದಲ್ಲಿ ಕಲ್ಲು-ಮೊಟ್ಟೆ-ಚಪ್ಪಲಿ ಎಸೆಯೋರು ಇರ್ತಾರೆ. ಹಾಗೇ ಜೈಕಾರ ಹಾಕೋರು ಇರ್ತಾರೆ ಎಂದು ಸಲೀಂ ಮತ್ತು ಉಗ್ರಪ್ಪ ವಿರುದ್ಧ ಗರಂ ಆದರು. ಇದೇ ವೇಳೆ ಕೆಪಿಸಿಸಿ ಕಚೇರಿ ಬಳಿ ಜಮಾಯಿಸಿದ ಕಾಂಗ್ರೆಸ್​ ಕಾರ್ಯಕರ್ತರು ಉಗ್ರಪ್ಪ ವಿರುದ್ಧ ಆಕ್ರೋಶ ಹೊರಹಾಕಿ ರಂಪಾಟ ಮಾಡಿದರು.

    ‘ಡಿಕೆಶಿ ಅವರೇ ನೀವು ಕುಡುಕರೇ? ಕಾಂಗ್ರೆಸ್ ಕಚೇರಿಯಲ್ಲೇ ಎದ್ದಿರುವ ಅನುಮಾನ ಬಗೆಹರಿಸಿ…’

    ಗೆಳೆಯನನ್ನು ಮನೆಗೆ ಆಹ್ವಾನಿಸಿದ ವಿವಾಹಿತೆ, ಆತ ಮಲಗಿದ್ದ ವೇಳೆ ಮಾಡಬಾರದ್ದು ಮಾಡಿ ದುರಂತ ಅಂತ್ಯಕಂಡಳು

    ಕಂದಾಯ ನಿರೀಕ್ಷಕಿ ಆತ್ಮಹತ್ಯೆ! ಮಹತ್ತರ ಕನಸು ಕಂಡಿದ್ದವಳ ಬಾಳಲ್ಲಿ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts