More

    ರಾಜಕೀಯ ಸಭೆ-ಸಮಾರಂಭಕ್ಕೆ ಕಡಿವಾಣ: ಕರೊನಾ ತಡೆಗೆ ಸಿಎಂ ಬೊಮ್ಮಾಯಿ ಮಹತ್ವದ ನಿರ್ಧಾರ

    ಬೆಂಗಳೂರು: ರಾಜಕೀಯ ಸಭೆ, ಸಮಾರಂಭಗಳಿಗೆ ಇರದ ನಿರ್ಬಂಧ ಗಣೇಶ ಹಬ್ಬಕ್ಕೆ ಏಕೆ? ಗಣೇಶೋತ್ಸವ ಆಚರಿಸಿದ್ರೆ ಮಾತ್ರ ಕರೊನಾ ಹರಡುತ್ತಾ? ರಾಜ್ಯದಲ್ಲಿ ಪಾಲಿಕೆ ಚುನಾವಣೆ ನಡೆಯುತ್ತಿದ್ದು, ಸಾವಿರಾರು ಜನ ಮೆರವಣಿಗೆ ಮಾಡಿದ್ದಾರೆ. ಇದಕ್ಕಿಲ್ಲದ ನಿರ್ಬಂಧ ಗಣೇಶೋತ್ಸವದ ಮೇಲ್ಯಾಕೆ ಎಂಬ ಆಕ್ರೋಶ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಅವರು ರಾಜಕೀಯ ಸಭೆ- ಸಮಾರಂಭಗಳಿಗೆ ಕಡಿವಾಣ ಹಾಕುವ ಕುರಿತು ಮಹತ್ವದ ಸುಳಿವು ಕೊಟ್ಟಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕರೊನಾ ನಡುವೆಯೂ ರಾಜಕೀಯ ಸಭೆ, ಸಮಾರಂಭ, ರ್ಯಾಲಿಗಳು ನಿರಂತರವಾಗಿ ನಡೆಯುತ್ತಲೇ ಇವೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ನಿರ್ಬಂಧ ಹೇರಲು ಕಠಿಣ ನಿಯಮಗಳನ್ನು ಜಾರಿ ಮಾಡಲಾಗುವುದು. ಕೋವಿಡ್ ಸೋಂಕು ಹರಡುವ ಭೀತಿ ದಟ್ಟವಾಗಿದ್ದರೂ ಲೆಕ್ಕಿಸದೆ ಸಭೆ-ಸಮಾರಂಭಗಳು ನಡೆದಿವೆ. ಇದಕ್ಕೆಲ್ಲ ಶೀಘ್ರವೇ ಬ್ರೇಕ್​ ಹಾಕುತ್ತೇವೆ. ರಾಜಕೀಯ ಸಭೆ, ಸಮಾರಂಭಗಳಿಗೆ ಮಾರ್ಗಸೂಚಿ ಹೊರಡಿಸುತ್ತೇವೆ ಎಂದರು.

    ಮೈಸೂರಲ್ಲಿ ಗ್ಯಾಂಗ್​ ರೇಪ್​: ಆರೋಪಿಗಳಲ್ಲೊಬ್ಬ ಭಗ್ನಪ್ರೇಮಿ! ಲವ್​ ಫೇಲ್ಯೂರ್​ಗೆ ಲೈಂಗಿಕ ಚಟ ಅಂಟಿಸಿಕೊಂಡಿದ್ದ…

    ಮಗಳ ಪ್ರಿಯಕರನ ಕೊಂದು ಜೈಲು ಸೇರಿದ ಅಪ್ಪ-ಅಮ್ಮ! ಎಲ್ಲವನ್ನೂ ಕಳೆದುಕೊಂಡಾಕೆ ಕೊನೆಗೂ ಬದುಕಲಿಲ್ಲ

    ಬೆಂಗಳೂರಿನ ಮಹಿಳಾ ಟೆಕ್ಕಿ ಮೇಲೆ ಅತ್ಯಾಚಾರ: ಮೂವರೂ ಮದ್ಯ ಕುಡಿದೆವು, ಪ್ರಜ್ಞೆ ಬಂದಾಗ ಆತ ಬೆತ್ತಲಾಗಿದ್ದ…

    ಮೈಸೂರು ಗ್ಯಾಂಗ್​ ರೇಪ್​: ಆ ತಡರಾತ್ರಿ ಪೊಲೀಸರನ್ನೇ ಚಾಕುವಿನಿಂದ ಇರಿಯಲು ಮನ್ನುಗ್ಗಿದ್ದ ಆರೋಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts