More

    ಕೂಗುಮಾರಿಗಳು ವರ್ಸಸ್ ಜೀವಪರತೆಗಳ ನಡುವೆ ಚುನಾವಣೆ

    ಶಿವಮೊಗ್ಗ: ಶಿವಮೊಗ್ಗದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯು ಕೂಗುಮಾರಿಗಳು ಮತ್ತು ಜೀವಪರತೆಗಳ ನಡುವೆ ನಡೆಯುತ್ತಿದೆ ಎಂದು ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.

    ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಿದ್ದ ವಾರ್ಡ್ ಮತ್ತು ಬೂತ್‌ಮಟ್ಟದ ಅಧ್ಯಕ್ಷರ ಕಾರ್ಯಾಗಾರ ಉದ್ಘಾಟಸಿ ಮಾತನಾಡಿ, ಎಲ್ಲ ಧರ್ಮದವರಿಗೆ ಗೌರವ ಕೊಡುವ ಸಂಸ್ಕೃತಿ ಕಾಂಗ್ರೆಸ್‌ನದ್ದಾದರೆ ಜನರ ತಲೆಯೊಳಗೆ ದ್ವೇಷ ಭಾವನೆ ಬಿತ್ತುವುದು, ಬೆಂಕಿ ಹಚ್ಚುವುದು ಬಿಜೆಪಿಯದ್ದಾಗಿದೆ. ಒಂದೇ ಪಕ್ಷದ ಕೂಗುಮಾರಿಗಳೇ ಪ್ರತಿ ಸ್ಪರ್ಧಿಗಳಾಗಿರುವುದು ವಿಶೇಷ ಎಂದು ತಿಳಿಸಿದರು.
    ಬೂತ್ ಮತ್ತು ವಾರ್ಡ್ ಅಧ್ಯಕ್ಷರು ಪಕ್ಷದ ಸೇನಾನಿ ಮತ್ತು ಕಟ್ಟಾಳುಗಳು. ಅವರ ಸಹಕಾರ ಇಲ್ಲದಿದ್ದರೆ ಒಂದು ಗ್ರಾಪಂ ಸೀಟು ಕೂಡ ಗೆಲ್ಲುವುದಕ್ಕೂ ಆಗುವುದಿಲ್ಲ. ಆ ನಿಟ್ಟಿನಲ್ಲಿ ಶಿವಮೊಗ್ಗದಲ್ಲಿ ಈ ಬಾರಿ ಪ್ರತಿಯೊಬ್ಬ ಕಾರ್ಯಕರ್ತರೂ ಒಬ್ಬೊಬ್ಬ ಗೀತಾ ಶಿವರಾಜ್ ಕುಮಾರ್ ಆಗಬೇಕಿದೆ. ಒಂದು ಮನೆಗೆ ಕನಿಷ್ಠ ಐದು ಬಾರಿಯಾದರೂ ತೆರಳಿ ಬಿಜೆಪಿಯನ್ನು ಸೋಲಿಸಿ ಭಾರತವನ್ನು ಉಳಿಸುವ ಸಂಕಲ್ಪ ಮಾಡಬೇಕಿದೆ ಎಂದರು.
    ವಿಧಾನಸಭೆ ಚುನಾವಣೆ ಪೂರ್ವ ಘೋಷಣೆ ಮಾಡಿದ ಗ್ಯಾರಂಟಿಗಳನ್ನು ಕಾಂಗ್ರೆಸ್ ಈಡೇರಿಸುವ ಮೂಲಕ ನುಡಿದಂತೆ ನಡೆದಿದೆ. ಆ ಮೂಲಕ ಜೀವಪರತೆಯನ್ನು ಸಾಬೀತುಪಡಿಸಿದೆ. ಹಾಗಾಗಿ ಬಿಜೆಪಿ ಬೂತ್ ಅಧ್ಯಕ್ಷರ ಮನೆಗೂ ಹೋಗಿ ಮತ ಕೇಳುವ ಧೈರ್ಯ ಕಾಂಗ್ರೆಸ್ ಕಾರ್ಯಕರ್ತರಿಗೆ ಬಂದಿದೆ. ಚುನಾವಣೆಯನ್ನು ಗೆಲ್ಲಲೇಬೇಕೆಂದರೆ ಕಾರ್ಯಕರ್ತರು ದೊಡ್ಡ ಮಟ್ಟದಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts