More

    ಅಮೆರಿಕಕ್ಕಿಂತಲೂ ದುಬಾರಿ ಚೀನಿ ಕರೊನಾ ಲಸಿಕೆ; ಡಿಸೆಂಬರ್​ನಲ್ಲಿ ಮಾರುಕಟ್ಟೆಗೆ

    ನವದೆಹಲಿ: ಕರೊನಾ ಲಸಿಕೆ ವಿಚಾರ ಬಂದಾಗ ರಷ್ಯಾ, ಅಮೆರಿಕ, ಬ್ರಿಟನ್​ ಮೊದಲಾದ ರಾಷ್ಟ್ರಗಳ ಹೆಸರಷ್ಟೇ ಮುಂಚೂಣಿಯಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿವೆ. ಆದರೆ, ಚೀನಾ ಈ ಎಲ್ಲ ರಾಷ್ಟ್ರಗಳಿಗೂ ಪೈಪೋಟಿ ನೀಡುತ್ತಿದೆ.

    ಆಯಾ ದೇಶಗಳಲ್ಲಿ ಒಂದೆರಡು ಲಸಿಕೆಗಳು ಮಾತ್ರ ಸಿದ್ಧಗೊಳ್ಳುತ್ತಿದ್ದರೆ, ಚೀನಾವೊಂದರಲ್ಲಿಯೇ ಆರು ಲಸಿಕೆಗಳು ಮಾನವರ ಮೇಲೆ ಪ್ರಯೋಗದ ಅಂತಿಮ ಹಂತದಲ್ಲಿವೆ. ಈಗಾಗಲೇ ಒಂದು ಲಸಿಕೆ ಸೇನೆಯವರ ಬಳಕೆಗೆಂದೇ ನೋಂದಣಿಯೂ ಆಗಿದೆ.

    ಇದನ್ನೂ ಓದಿ; ಭಾರತೀಯರಿಗೆ ವರ್ಷಾಂತ್ಯಕ್ಕೆ ದೊರೆಯಲಿದೆ ಮೊದಲ ಕರೊನಾ ಲಸಿಕೆ; ಆದರೆ, ಭಾರತದ್ದಲ್ಲ….! 

    ಇದೀಗ ಚೀನಾದ ಸರ್ಕಾರಿ ಒಡೆತನದ ಸಿನೋಫಾರ್ಮ ಕಂಪನಿ ಅಭಿವೃದ್ಧಿಪಡಿಸಿರುವ ಲಸಿಕೆ ಡಿಸೆಂಬರ್​ ವೇಳೆಗೆ ಮಾರುಕಟ್ಟೆಗೆ ಬರಲಿದ್ದು, ಸಾರ್ವತ್ರಿಕ ಬಳಕೆಗೆ ದೊರೆಯಲಿದೆ. ಈ ಮಾಹಿತಿಯನ್ನು ಕಂಪನಿಯೇ ಬಿಡುಗಡೆ ಮಾಡಿದೆ.

    ಚೀನಾದ ಮುಖವಾಣಿ ಗ್ಲೋಬಲ್​ ಟೈಮ್ಸ್​ ಪ್ರಕಾರ ಇದೇ ವರ್ಷದ ಡಿಸೆಂಬರ್​ಗೆ ಲಸಿಕೆ ದೊರೆಯಲಿದೆ. ಲಸಿಕೆಯ ಎರಡು ಡೋಸ್​ಗಳಿಗೆ ಒಂದು ಸಾವಿರ್​ ಯುವಾನ್​ಗೂ ಕಡಿಮೆ ಬೆಲೆ ನಿಗದಿಪಡಿಸಲಾಗುತ್ತದೆ ಎಂದು ಹೇಳಲಾಗಿದೆ. ರೂಪಾಯಿಗಳಲ್ಲಿ ಹೇಳುವುದಾದರೆ ಅಂದಾಜು 10,000 ರೂ.ಗೂ ಅಧಿಕ ಬೆಲೆ ಇರಲಿದೆ.

    ಇದನ್ನೂ ಓದಿ; ಚೀನಾದಲ್ಲಿ ಮಸೀದಿಗಳು ಧ್ವಂಸ; ಅದೇ ಜಾಗದಲ್ಲಿ ಪ್ರವಾಸಿಗರಿಗಾಗಿ ಶೌಚಗೃಹ, ಮದ್ಯದಂಗಡಿ ನಿರ್ಮಾಣ

    ಸದ್ಯ ಅಮೆರಿಕದ ಲಸಿಕೆಗೆ ಅಂದಾಜು 2,400 ರೂ.ಗಳಿಂದ 2,800 ರೂ. ವರೆಗೆ ದರ ನಿಗದಿಪಡಿಸಲಾಗಿದೆ. ಚೀನಿ ಲಸಿಕೆ ಅದಕ್ಕಿಂತಲೂ ದುಬಾರಿಯಾಗಿದೆ. ಆದರೆ, ಆಕ್ಸ್​ಫರ್ಡ್​ ವಿವಿ ಲಸಿಕೆ ಭಾರತದಲ್ಲಿ 225 ರೂ.ಗೆ ದೊರೆಯಲಿದೆ. ಸದ್ಯ ಸಿನೋಫಾರ್ಮಾದ ಲಸಿಕೆಯನ್ನು ಯುನೈಟೆಡ್​ ಅರಬ್​ ಎಮಿರೇಟ್ಸ್​ನಲ್ಲಿ ಮಾನವರ ಮೇಲೆ ಅಂತಿಮ ಹಂತದ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದಾಗುತ್ತಿದ್ದಂತೆ ಬೃಹತ್​ ಪ್ರಮಾಣದಲ್ಲಿ ಉತ್ಪಾದನೆ ಆರಂಭೀಸುವ ಉದ್ದೇಶ ಹೊಂದಲಾಗಿದೆ.

    ಲಸಿಕೆಗಳ ಮೇಲಿನ ಭರವಸೆಯನ್ನೇ ಬುಡಮೇಲು ಮಾಡಲಿದೆ ಕರೊನಾ ವೈರಸ್​ನ ರೂಪಾಂತರ; ಭಾರತದಲ್ಲೂ ಇದೆ ಕುರುಹು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts