More

  ನಂದಿಯಲ್ಲಿ ಮಾ.3ರಂದು ದನಗಳ ಜಾತ್ರೆ: ಉತ್ತಮ ರಾಸುಗಳಿಗೆ ಸಿಗಲಿದೆ ಬಹುಮಾನ

  ಚಿಕ್ಕಬಳ್ಳಾಪುರ: ತಾಲೂಕಿನ ನಂದಿಯಲ್ಲಿ ಭೋಗನಂದೀಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮಾ.3ರಂದು ರಾಸುಗಳ ಜಾತ್ರೆ ನಡೆಯಲಿದೆ.

  ನಂದಿ ಗ್ರಾಮಕ್ಕೆ ಸಮೀಪದ ಖಾಸಗಿ ಜಮೀನಿನಲ್ಲಿ ಸಂತೆಗೆ ವ್ಯವಸ್ಥೆ ಮಾಡಿದ್ದು, ಮೇವು ಮತ್ತು ನೀರು ಸೇರಿ ಅಗತ್ಯ ಸೌಕರ್ಯ ಒದಗಿಸಲಾಗಿದೆ. ಪ್ರತಿ ವರ್ಷ ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ರಾಯಚೂರು, ದಾವಣಗೆರೆ, ತುಮಕೂರು, ಚಿತ್ರದುರ್ಗ ಸೇರಿ ರಾಜ್ಯ ಮಾತ್ರವಲ್ಲದೆ ನೆರೆಯ ಆಂಧ್ರದಿಂದಲೂ ಜಾನುವಾರುಗಳು ಬರುತ್ತವೆ.

  ಮಾ.2ರಂದು ನಡೆಯುವ ಬ್ರಹ್ಮರಥೋತ್ಸವದ ಮಾರನೇಯ ದಿನ ತಾಲೂಕು ಆಡಳಿತ ಮೇವು ಮತ್ತು ನೀರಿನ ವ್ಯವಸ್ಥೆಯನ್ನು ಒದಗಿಸುವುದರ ಜತೆಗೆ ಉತ್ತಮ ರಾಸುಗಳಿಗೆ ಬಹುಮಾನ ನೀಡಲಾಗುವುದು. ಹಿಂದೆ ಹಲವು ಬಾರಿ ಬರ, ಕಾಲುಬಾಯಿ ಜ್ವರ, ಕರೊನಾ ಸೇರಿ ನಾನಾ ಕಾರಣದಿಂದ ದನಗಳ ಸಂತೆ ನಿಷೇಧಿಸಲಾಗಿತ್ತು. ಆದರೆ, ಈಗ ಯಾವುದೇ ರೀತಿಯ ಆತಂಕವಿಲ್ಲ. ಆದ್ದರಿಂದ ವಿವಿಧ ಕಡೆಗಳಿಂದ ರೈತರು ರಾಸುಗಳೊಂದಿಗೆ ನಂದಿಗೆ ಆಗಮಿಸುತ್ತಿದ್ದಾರೆ.

  ಮನೆ ಬಿಟ್ಟು ಪರಾರಿಯಾಗಿದ್ದ ಪ್ರೇಮಿಗಳು ಬಂಗಾರು ತಿರುಪತಿಯಲ್ಲಿ ಮದ್ವೆಯಾದ್ರು! ಪ್ಲೀಸ್​ ನಮ್ಮನ್ನು ರಕ್ಷಿಸಿ…

  ವಿಚ್ಛೇದನಕ್ಕಾಗಿ ನಗ್ನ ಫೋಟೋ ಇಟ್ಟುಕೊಂಡು ಪತ್ನಿಗೆ ಗಂಡ ಕೊಟ್ಟ ಕಾಟ ಅಷ್ಟಿಷ್ಟಲ್ಲ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts