More

    ಇನ್ಮುಂದೆ ಸೂರ್ಯಾಸ್ತ ಬಳಿಕವೂ ನಡೆಯಲಿದೆ ಪೋಸ್ಟ್​ಮಾರ್ಟಂ! ನಿನ್ನೆಯಿಂದಲೇ ಹೊಸ ಆದೇಶ ಜಾರಿ

    ನವದೆಹಲಿ: ಸೂರ್ಯಾಸ್ತದ ಬಳಿಕವೂ ಶವ ಪರೀಕ್ಷೆ ಮಾಡಬಹುದು ಎಂದು ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಈ ಹಿಂದೆ ಹಗಲಿನಲ್ಲಿ ಮಾತ್ರವೇ ಪೋಸ್ಟ್​ಮಾರ್ಟಂ ನಡೆಸಲು ಅವಕಾಶವಿತ್ತು. ಸದ್ಯ ಸೂರ್ಯಾಸ್ತದ ನಂತರ ಮರಣೋತ್ತರ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಈ ನಿಯಮ 2021ರ ನವೆಂಬರ್​ 15ರಿಂದ ಜಾರಿಯಲ್ಲಿದೆ.

    ಆಸ್ಪತ್ರೆಗಳಲ್ಲಿ ಸರಿಯಾದ ಮೂಲಸೌಕರ್ಯ ಇದ್ದರೆ ಸೂರ್ಯಾಸ್ತದ ನಂತರವೂ ಪೋಸ್ಟ್​ಮಾರ್ಟಂ ನಡೆಸಬಹುದು. ಅಂಗಾಂಗ ದಾನಕ್ಕೆ ಸಂಬಂಧಿಸಿದ ಪೋಸ್ಟ್​ಮಾರ್ಟಂಗೆ ಹೆಚ್ಚಿನ ಆದ್ಯತೆ ನೀಡಿ ಸರ್ಕಾರ ಈ ಆದೇಶವನ್ನು ಸೋಮವಾರ ಪ್ರಕಟಿಸಿದೆ.

    ನರಹತ್ಯೆ, ಆತ್ಮಹತ್ಯೆ, ಅತ್ಯಾಚಾರ ಮತ್ತು ಇತರೆ ಸಂದೇಹಾಸ್ಪದ ಸಾವಿನ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಪ್ರಕರಣಗಳಿಗೆ ಈ ಆದೇಶ ಅನ್ವಯ ಆಗಲಿದೆ. ಈ ಸಂಬಂಧ ಕೇಂದ್ರ ಆರೋಗ್ಯ ಸಚಿವ ಮನ್​ಸುಖ್​ಮಾಂಡವೀಯ ಟ್ವೀಟ್​ ಮಾಡಿದ್ದು, ಬ್ರಿಟಿಷ್​ ಕಾಲದ ವ್ಯವಸ್ಥೆಯೊಂದು ಇಂದಿಗೆ ಕೊನೆಗೊಂಡಿದ್ದು, ಇನ್ನು 24 ಗಂಟೆ ಪೋಸ್ಟ್​ಮಾರ್ಟಂ ಸೇವೆ ಸಿಗಲಿದೆ ಎಂದಿದ್ದಾರೆ. ಒಟ್ಟಾರೆ ಈ ಹೊಸ ಆದೇಶದಿಂದ ಮೃತರ ಕುಟುಂಬಗಳಿಗೆ ಮೃತದೇಹಗಳನ್ನು ಬಹುಬೇಗನೆ ನೀಡಲು ಹಾಗೂ ಶೀಘ್ರವಾಗಿ ಅಂಗಾಂಗ ದಾನ ಪ್ರಕ್ರಿಯೆ ಮುಗಿಸಲು ಅನುಕೂಲವಾಗಲಿದೆ

    ಅಪಘಾತದಲ್ಲಿ ಅಪ್ಪು ಅಭಿಮಾನಿ ಸಾವು: ಕೊನೇ ಕ್ಷಣದಲ್ಲಿ ಪತ್ನಿಗೆ ಆತ ಹೇಳಿದ ಕೊನೇ ಮಾತು ಕೇಳಿದ್ರೆ ಮನಕಲಕುತ್ತೆ

    ಭಾವಿ ಪತಿಯ ಹಿಂಸೆ ಸಹಿಸಲಾಗದೆ ಯುವತಿ ಆತ್ಮಹತ್ಯೆ: ಪ್ರೀ ವೆಡ್ಡಿಂಗ್​ ಫೋಟೋ ಶೂಟಿಂಗ್​ ವೇಳೆ ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts