More

    ಅ.2ರಂದು ಚುಟುಕು ಸಾಹಿತ್ಯ ಸಮ್ಮೇಳನೋತ್ತರ ಸಂಭ್ರಮ, 300ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸನ್ಮಾನ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ 9ನೇ ಚುಟುಕು ಸಾಹಿತ್ಯ ಸಮ್ಮೇಳನೋತ್ತರ ಸಂಭ್ರಮ ಹಾಗೂ ಬೃಹತ್ ವಿದ್ಯಾರ್ಥಿ ಸನ್ಮಾನ ಸಮಾರಂಭ ಅ.2ರಂದು ತುಳುಭವನದ ಸಿರಿ ಚಾವಡಿಯಲ್ಲಿ ನಡೆಯಲಿದೆ.

    ಕರಾವಳಿ ಕಾಲೇಜು ಸಮೂಹ ಸ್ಥಾಪಕಾಧ್ಯಕ್ಷ ಎಸ್.ಗಣೇಶ್ ರಾವ್ ಉದ್ಘಾಟಿಸುವರು. ಶ್ರೀಕೃಷ್ಣಯ್ಯ ಅನಂತಪುರ ಅಧ್ಯಕ್ಷತೆ ವಹಿಸುವರು. ನಾಟಕಕಾರ ಗಂಗಾಧರ ಕಿದಿಯೂರು ಅವರ 14 ತುಳು ನಾಟಕಗಳ ಸಂಪುಟ ‘ಮೆನ್ಕುನ ಸಿರಿ ಸಿಂಗಾರ’ವನ್ನು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್‌ಸಾರ್ ಬಿಡುಗಡೆ ಮಾಡುವರು. ಉಡುಪಿ ಜಿಲ್ಲಾ ಚುಸಾಪ ಗೌರವಾಧ್ಯಕ್ಷೆ ತಾರಾ ಆಚಾರ್ಯ ಕೃತಿ ಪರಿಚಯ ಮಾಡುವರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ ಚುಟುಕು ಸಾಹಿತ್ಯ ಸಪ್ತಾಹದ ವಿಜೇತರನ್ನು ಸನ್ಮಾನಿಸುವರು. ಕಸಾಪ ಮಾಜಿ ಅಧ್ಯಕ್ಷ ಡಾ.ಹರಿಕೃಷ್ಣ ಪುನರೂರು, ಉದ್ಯಮಿ ಶ್ರೀಪತಿ ಭಟ್, ಧಾರ್ಮಿಕ ಪರಿಷತ್ ಸದಸ್ಯ ಕೊಡೆತ್ತೂರು ಭುವನಾಭಿರಾಮ ಉಡುಪ, ದ.ಕ. ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ನಾಟಕಕಾರ ಶಶಿರಾಜ್ ಕಾವೂರು, ಮಂಗಳೂರು, ದ.ಕ. ಚುಸಾಪ ಅಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು, ಗೌರವಾಧ್ಯಕ್ಷ ಇರಾ ನೇಮು ಪೂಜಾರಿ, ಮಂಗಳೂರು ತಾಲೂಕು, ಉಡುಪಿ ಜಿಲ್ಲಾ ಚುಸಾಪ ಅಧ್ಯಕ್ಷ ಕಾ.ವೀ.ಕೃಷ್ಣದಾಸ್, ಪಕ್ಷಿಕೆರೆ ವಿನಾಯಕ ಮಿತ್ರ ಮಂಡಳಿ ಅಧ್ಯಕ್ಷ ಚಂದ್ರಹಾಸ್ ಭಾಗವಹಿಸುವರು.

    ಪತ್ರಕರ್ತ ಗುರುವಪ್ಪ ಎನ್.ಟಿ ಬಾಳೆಪುಣಿ, ಸಿಎ ಎಸ್.ಎಸ್ ನಾಯಕ್, ನಟ ಗೋಪಿನಾಥ್ ಭಟ್, ಸಂಘಟಕ ಶಿವರಾಮ ಕಾಸರಗೋಡು, ಪೊಲೀಸ್ ನಿರೀಕ್ಷಕಿ ಭಾರತಿ, ವಕೀಲ ದಯಾನಂದ ರೈ, ನರೇಂದ್ರ ಕೆರೆಕಾಡು, ಉಪನ್ಯಾಸಕ ಪ್ರಕಾಶ್ ಮೇಲಾಂಟ, ಪುರೋಹಿತ ಬಾಲಕೃಷ್ಣ ಕಾರಂತ್ ಅವರನ್ನು ಸನ್ಮಾನಿಸಲಾಗುವುದು.


    ಸತ್ಯವತಿ ಭಟ್ ಕೊಳಚಪ್ಪು ಮತ್ತು ಸೌಮ್ಯಾ ಗೋಪಾಲ್ ಅಧ್ಯಕ್ಷತೆಯಲ್ಲಿ ಚುಟುಕು ಕವಿಗೋಷ್ಠಿ ನಡೆಯಲಿದೆ. ಲಾಲಿತ್ಯಾ ಬೇಲೂರು, ನಿರೀಕ್ಷಾ ಶೆಟ್ಟಿ, ಸುದೀಷ್ಣ ಶೆಟ್ಟಿ, ಪ್ರಾಪ್ತಿ ಶೆಟ್ಟಿ, ಅಪೂರ್ವ ಸೋಮೇಶ್ವರ ಇವರಿಂದ ನೃತ್ಯ ಪ್ರದರ್ಶನ ನಡೆಯಲಿವೆ. 300ಕ್ಕೂ ಅಧಿಕ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts