More

    ಕೋರ್ಟ್​ ಮೆಟ್ಟಿಲೇರಿದ ‘ಸೋಜುಗಾದ ಸೂಜು ಮಲ್ಲಿಗೆ’ ವಿವಾದ: ಜಿಜಿವಿವಿ ಚಿತ್ರತಂಡಕ್ಕೆ ಎದುರಾಯ್ತು ಸಂಕಷ್ಟ

    ಚಾಮರಾಜನಗರ: ‘ಗರುಡ ಗಮನ ವೃಷಭ ವಾಹನ’ ಸಿನಿಮಾ ತಂಡಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮಲೆಮಹದೇಶ್ವರಸ್ವಾಮಿ ಕುರಿತ ‘ಸೋಜುಗಾದ ಸೂಜು ಮಲ್ಲಿಗೆ…’ ಹಾಡನ್ನು “ಗರುಡ ಗಮನ ವೃಷಭ ವಾಹನ” ಸಿನಿಮಾದಲ್ಲಿ ಕ್ರೌರ್ಯದ ದೃಶ್ಯಕ್ಕೆ ಬಳಸಿಕೊಂಡಿದ್ದರ ವಿರುದ್ಧ ಮಾದಪ್ಪನ ಭಕ್ತರಿಂದ ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ, ಚಿತ್ರತಂಡದ ವಿರುದ್ಧ ಕರುನಾಡ ವಿಜಯ ಸೇನೆ ಸಂಘಟನೆ ನ್ಯಾಯಾಲಯದ ಮೆಟ್ಟಿಲೇರಿದೆ.

    ಸಂಘಟನೆಯ ಬೆಂಗಳೂರು ನಗರಾಧ್ಯಕ್ಷ ವಿಜಯಕುಮಾರ್​ ಅವರು ಬೆಂಗಳೂರಿನ ಸಿವಿಲ್​ ಕೋರ್ಟ್​ಗೆ ಈ ಕುರಿತು ಸೋಮವಾರ ಅರ್ಜಿ ಸಲ್ಲಿಸಿದ್ದಾರೆ. ಚಿತ್ರದ ನಿರ್ದೇಶಕ ರಾಜ್​ ಬಿ.ಶೆಟ್ಟಿ, ನಟ ರಿಷಬ್​ ಶೆಟ್ಟಿ, ನಿರ್ಮಾಪಕರಾದ ಬಿ.ವಿ.ರವಿ ರೈ, ವಚನಶೆಟ್ಟಿ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ.

    ಕೊಲೆ ಮಾಡಿ ವಿಕೃತಿ ಮೆರೆಯುವ ದೃಶ್ಯಕ್ಕೆ ಮಾದಪ್ಪನ ಭಕ್ತೀಗಿತೆಯನ್ನು ಹಿನ್ನೆಲೆಯಾಗಿ ಬಳಕೆ ಮಾಡಿಕೊಂಡಿರುವುದು ಲಕ್ಷಾಂತರ ಭಕ್ತರ ಭಾವನೆಗೆ ಧಕ್ಕೆ ತಂದಿದೆ. ಆದ್ದರಿಂದ ಸಿನಿಮಾದಲ್ಲಿ ಈ ಹಾಡನ್ನು ತೆಗೆಯಬೇಕೆಂದು ಕೋರಿದ್ದಾರೆ. ಈ ಕುರಿತು ಮಂಗಳವಾರ ವಿಚಾರಣೆ ನಡೆಯಲಿದೆ ಎಂದು ಸೇನೆಯ ಅಧ್ಯಕ್ಷ ಬಿ.ಮೋಹನ್​ಕುಮಾರ್​ “ವಿಜಯವಾಣಿ”ಗೆ ತಿಳಿಸಿದ್ದಾರೆ.

    ವಿವಾದದ ಸುಳಿಯಲ್ಲಿ ‘ಗರುಡ ಗಮನ ವೃಷಭ ವಾಹನ’ ಸಿನಿಮಾ: ಮಾದಪ್ಪ ಭಕ್ತರಿಂದ ಆಕ್ರೋಶ

    ಎಸ್​ಐ ಹರೀಶ್​ನ ಕರ್ಮಕಾಂಡ ಬಿಚ್ಚಿಟ್ಟ ಮುಖ್ಯಪೇದೆ: ಅಬಾರ್ಷನ್ ಕಿಟ್, ಪ್ರೆಗ್ನೆನ್ಸಿ ಕಿಟ್ ತರಿಸಿಕೊಳ್ಳುತ್ತಿದ್ದ ಸಬ್​ಇನ್​ಸ್ಪೆಕ್ಟರ್​

    ನಾನು ದೆಹಲಿಗೆ ಹೋದಾಗ ನನಗ್ಯಾರೂ ಒಂದು ಗ್ಲಾಸ್ ಕಾಫಿ ಕೊಡಲಿಲ್ಲ: ದೇವೇಗೌಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts