More

    ಜಾಗ ಬಿಟ್ಟು ಕದಲುವ ಬೋಯ್ (ತೇಲುವ ಗೂಡು)

    ಕಾರವಾರ: ಮೀನುಗಾರರಿಗೆ ಹವಾಮಾನ ಮಾಹಿತಿ ನೀಡುವ ತೇಲುವ ಬೋಯ್ ಅನ್ನು ಭಾರತೀಯ ನೌಕಾಸೇನೆಯ ವ್ಯಾಪ್ತಿಯಲ್ಲಿ ಅಳವಡಿಸಲು ಇಲ್ಲಿನ ಕವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಾಗರ ಜೀವಶಾಸ ವಿಭಾಗ ಪ್ರಯತ್ನ ನಡೆಸಿದೆ.


    ಸಮುದ್ರದ ನಡುವೆ ಅಳವಡಿಸಿರುವ ತೇಲುವ ಗೂಡು (ಬೋಯ್) ಪದೇ ಪದೆ ತನ್ನ ವ್ಯಾಪ್ತಿಯನ್ನು ಬಿಟ್ಟು ತೇಲಿ ಹೋಗುತ್ತಿದ್ದು, ಇದರಿಂದ ಹವಾಮಾನ ಮಾಹಿತಿ ನೀಡಲು ಹಿನ್ನಡೆಯಾಗುತ್ತಿದೆ. ಇದರಿಂದ ಮೀನುಗಾರಿಕೆ ನಿರ್ಬಂಧಿತ ಪ್ರದೇಶವಾಗಿರುವ ನೌಕಾನೆಲೆಯ ಸಮುದ್ರ ವ್ಯಾಪ್ತಿಯಲ್ಲಿ ಅಳವಡಿಕೆಗೆ ನೌಕಾಸೇನೆಗೆ ಪ್ರಸ್ತಾವನೆ ಕಳಿಸಲಾಗಿದೆ ಎಂದು ಸಾಗರ ಜೀವಶಾಸ ವಿಭಾಗದ ಮುಖ್ಯಸ್ಥ ಡಾ.ಜಗನ್ನಾಥ ರಾಠೋಡ ತಿಳಿಸಿದ್ದಾರೆ.


    ಮಿನಿಷ್ಟ್ರಿ ಆ್ ಅರ್ಥ್ ಸೈನ್ಸ್ ನಿಂದ ಪ್ರಾರಂಭವಾಗಿರುವ ಈ ವ್ಯವಸ್ಥೆಯನ್ನು ಕವಿವಿ 2013ರಿಂದ ನಿರ್ವಹಿಸುತ್ತಿದೆ. ಆಳ ಸಮುದ್ರದಲ್ಲಿ ತೇಲುವ ಗೂಡೊಂದನ್ನು ಅಳವಡಿಸಲಾಗಿದ್ದು, ಅದು ಉಪಗ್ರಹದ ಸಂವಹನ ಆಧಾರದ ಮೇಲೆ ಗಾಳಿಯ ವೇಗ, ಯಾವ ದಿಕ್ಕಿನಲ್ಲಿ ಬೀಸಲಿದೆ. ಸಮುದ್ರದ ಅಲೆಗಳ ದಿಕ್ಕು, ಸಮುದ್ರದಾಳದ ವಾತಾವರಣದ ಬದಲಾವಣೆ ಮುಂತಾದ ಮಾಹಿತಿಯನ್ನು ಸಂಗ್ರಹಿಸಿ 24 ಗಂಟೆ ರವಾನಿಸಲಿದೆ.


    ಹೈದರಾಬಾದ್‌ನ ಇಂಡಿಯನ್ ನ್ಯಾಷನಲ್ ಸೆಂಟರ್ ಾರ್ ಒಶನ್ ಇನ್ಫಾರ್ಮೆಶನ್ ಸರ್ವೀಸ್ ಎಂಬ ಸಂಸ್ಥೆ ಹಾಗೂ ಗೋವಾದ ಪಣಜಿಯಲ್ಲಿರುವ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆ್ ಒಶನಾಗ್ರಫಿ ಎಂಬ ಎರಡು ಸಂಸ್ಥೆಗಳಿಗೆ ರವಾನಿಸಲಿದೆ. ಅಲ್ಲಿಂದ ಪ್ರತಿ ದಿನ ಸಾಯಂಕಾಲ ಮೀನುಗಾರರಿಗೆ ಮಾಹಿತಿ ರವಾನೆಯಾಗಲಿದೆ. ಮರುದಿನ ಮೀನುಗಾರಿಕೆಗೆ ತೆರಳಬೇಕೇ ಬೇಡವೇ, ಎಲ್ಲಿ ಮೀನುಗಾರಿಕೆ ನಡೆಸಬೇಕು? ಎಂದು ನಿರ್ಧರಿಸಲು ಈ ಸಾಗರ ಹವಾಮಾನ ಮಾಹಿತಿ ಅನುಕೂಲವಾಗಲಿದೆ. ಕಾರವಾರದಿಂದ ಭಟ್ಕಳದ ಸುಮಾರು 5 ಸಾವಿರಕ್ಕೂ ಅಧಿಕ ಮೀನುಗಾರರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.

    ಮತ್ತೆ ಹಾನಿ

    ಆ್ಯಂಕರ್‌ಗಳ ಮೂಲಕ ಅಳವಡಿಸಲಾದ ಈ ಬೋಯ್ ಅಳವಡಿಕೆಯ 50 ಮೀಟರ್ ವ್ಯಾಪ್ತಿಯಲ್ಲಿದ್ದಲ್ಲಿ ಸಮರ್ಪಕವಾಗಿ ಸಂವಹನ ಒದಗಿಸಲಿದೆ. ಆದರೆ, ಕೆಲವು ಮೀನುಗಾರರು ಇದರ ಮಹತ್ವ ಅರಿಯದೇ ಅದನ್ನು ತನ್ನ ಸ್ಥಳದಿಂದ ಕದಲಿಸುತ್ತಿದ್ದಾರೆ. ಅಲ್ಲದೆ, ಅದಕ್ಕೆ ಅಳವಡಿಸಿದ ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿಗಳಿಗೆ ಹಾನಿ ಮಾಡುತ್ತಿದ್ದಾರೆ.

    ಸಮುದ್ರದಲ್ಲಿ ತೂಾನ್ ಮುಂತಾದ ಹವಾಮಾನ ವೈಪರೀತ್ಯದಿಂದ ಈ ಬೋಯ್ ತನ್ನ ಸ್ಥಾನ ಬಿಟ್ಟು 30 ಕಿಮೀ ದೂರ ತೇಲಿ ಹೋದ ಸಂದರ್ಭವೂ ನಡೆದಿದೆ. ಜಿಪಿಎಸ್ ಸಹಕಾರದಿಂದ ಅದನ್ನು ಪತ್ತೆ ಮಾಡಿ ಮತ್ತೆ ಸ್ವಸ್ಥಾನಕ್ಕೆ ಅಳವಡಿಸಲಾಗಿದೆ. ಆದರೆ, ಮತ್ತೆ ಅಂಥ ಘಟನೆಗಳು ನಡೆಯುತ್ತಿವೆ. 1 ಕೋಟಿ ರೂ. ಮೌಲ್ಯದ ಈ ಮಾಹಿತಿ ಯಂತ್ರಕ್ಕೆ ಹಾನಿಯಾಗುತ್ತಿದ್ದು, ಇನ್ನೂ 2025ರವರೆಗೂ ಅಧ್ಯಯನ ಕೇಂದ್ರದ ಜವಾಬ್ದಾರಿ ಇದೆ. ಇದರಿಂದ ನಾವು ನೌಕಾಸೇನೆಯ ಅಧಿಕಾರಿಗಳಿಗೆ ಅಧಿಕೃತವಾಗಿ ವಿನಂತಿ ಪತ್ರ ನೀಡಿದ್ದೇವೆ. ಅವರಿಂದ ಅದಕ್ಕೆ ಇನ್ನು ಪ್ರತಿಕ್ರಿಯೆ ಬರಬೇಕಿದೆ ಎಂದು ಕವಿವಿ ಅಧ್ಯಯನ ಕೇಂದ್ರ ಜಗನ್ನಾಥ ರಾಠೋಡ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts