More

    ಜೂ.21ರಿಂದ ಬಿಎಂಟಿಸಿ ಬಸ್​ ಸಂಚಾರ! ಬಸ್ ಹತ್ತೋಕು ಮುನ್ನ ಈ ಷರತ್ತುಗಳ ಪಟ್ಟಿ ಓದಿ

    ಬೆಂಗಳೂರು: ಕರೊನಾ ಲಾಕ್​ಡೌನ್​ ಹಿನ್ನೆಲೆ ರಾಜ್ಯ ರಾಜಧಾನಿಯಲ್ಲಿ ಸ್ಥಗಿತಗೊಂಡಿದ್ದ ಬಸ್​ ಸಂಚಾರ ಆರಂಭಕ್ಕೆ ದಿನಗಣನೆ ಶುರುವಾಗಿದೆ.

    ಮೊದಲ ಹಂತದ ಲಾಕ್​ಡೌನ್ ಸಡಿಲಿಕೆ ವೇಳೆ ಸಾರ್ವಜನಿಕ ಸಾರಿಗೆಗೆ ವಿನಾಯಿತಿ ಬೇಡ. ಬಸ್​ ಸಂಚಾರ ಆರಂಬವಾದರೆ ಕರೊನಾ ಸೋಂಕು ಹೆಚ್ಚಳವಾಗಲಿದೆ. ಹೀಗಾಗಿ ಸದ್ಯಕ್ಕೆ ಬಸ್​ ಸಂಚಾರಕ್ಕೆ ಅನುಮತಿ ಬೇಡ ಎಂದು ಸರ್ಕಾರಕ್ಕೆ ಬಿಬಿಎಂಪಿ ಮನವಿ ಮಾಡಿತ್ತು. ಇದೀಗ ನಗರದಲ್ಲಿ ಬಿಎಂಟಿಸಿ ಬಸ್​ಗಳನ್ನ ರಸ್ತೆಗಿಳಿಸುವಂತೆ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರಿಂದ ಒತ್ತಡ ಬಂದಿದೆ. ಇದಕ್ಕೆ ಮಣಿದ ಬಿಬಿಎಂಪಿ ಜೂ.21ರಿಂದ ನಗರದಲ್ಲಿ ಬಸ್​ ಸಂಚಾರಕ್ಕೆ ಅನುಮತಿ ನೀಡಲು ನಿರ್ಧರಿಸಿದೆ. ಆದರೆ ಕೆಲ ಷರತ್ತುಗಳನ್ನೂ ವಿಧಿಸಿದೆ.

    ಷರತ್ತುಬದ್ಧ ಅನುಮತಿ ನೀಡಲು ಬಿಬಿಎಂಪಿ ಒಪ್ಪಿಗೆ ಸೂಚಿಸಿದ್ದು, ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​ ಗುಪ್ತ ಅವರು ಬಿಎಂಟಿಸಿ ಎಂಡಿ, ನಗರ ಪೊಲೀಸ್​ ಕಮಿಷನರ್​, ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿದ್ದಾರೆ.

    • ಶೇ. 50 ಬಸ್​ಗಳನ್ನು ಮಾತ್ರ ರಸ್ತೆಗಿಳಿಸಲು ಅನುಮತಿ
    • ಬಸ್​ಗಳಲ್ಲಿ ಶೇ.50 ಪ್ರಯಾಣಿಕರ ಸಂಚಾರಕ್ಕೆ ಅನುಮತಿ
    • ಮಾಸ್ಕ್ ಧರಿಸುವಿಕೆ,‌ ಸಾಮಾಜಿಕ ಅಂತರ ಕಡ್ಡಾಯ
    • ಬಸ್​ಗಳಲ್ಲಿ ಒಂದು ಆಸನ ಬಿಟ್ಟು ಒಂದು ಆಸನದಲ್ಲಿ ಕುಳಿತು ಪ್ರಯಾಣಿಸಲು ಅವಕಾಶ
    • ನಿಂತು ಪ್ರಯಾಣಿಸಲು ಅವಕಾಶ ಇಲ್ಲ
    • ಬಸ್​​ ನಿಲ್ದಾಣಗಳಲ್ಲಿ ಜನಸಂದಣಿ ಆಗದಂತೆ ನೋಡಿಕೊಳ್ಳುವ ಜವಬ್ದಾರಿ ಪೊಲೀಸ್​ ಇಲಾಖೆ ಮತ್ತು ಬಿಎಂಟಿಸಿ ಅಧಿಕಾರಿಗಳದ್ದು
    • ಮೆಜೆಸ್ಟಿಕ್, ಟರ್ಮಿನಲ್ಸ್, ಪ್ರಮುಖ ಬಸ್​ ನಿಲ್ದಾಣಗಳಲ್ಲಿ ಕೋವಿಡ್​ ಟೆಸ್ಟ್​ ಕಡ್ಡಾಯ
    • ನೈಟ್ ಕರ್ಫ್ಯೂ ಆರಂಭಕ್ಕೂ ಮುನ್ನ 7 ಗಂಟೆ ಒಳಗೆ ಬಸ್​ ಸಂಚಾರ ನಿಲ್ಲಿಸಬೇಕು

    ಸತ್ತು ಮಲಗಿದ್ದವ ಕರುಳ ಕೂಗಿಗೆ ಓಗೊಟ್ಟು ಮತ್ತೆ ಬದುಕಿದ! ಅಂತ್ಯಸಂಸ್ಕಾರ ವೇಳೆ ನಡೆದ ಪವಾಡ ಕೇಳಿದ್ರೆ ಶಾಕ್​ ಆಗ್ತೀರಿ

    ಯೋಗೇಶ್ವರ್​ ಹೇಳಿದ್ದು ಸತ್ಯ, ವಿಜಯೇಂದ್ರ ಹಸ್ತಕ್ಷೇಪ ಇದೆ, ನಾಯಕತ್ವ ಬದಲಾವಣೆ ಆಗ್ಲೇಬೇಕು…

    ಗ್ರಾಮ ಪಂಚಾಯಿತಿ ಸದಸ್ಯನಿಂದಲೇ ಯುವತಿ ಮೇಲೆ ಅತ್ಯಾಚಾರ! ಬೆಚ್ಚಿಬೀಳಿಸುತ್ತೆ ಇವನ ಕಾಮಪುರಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts