More

    ನಿಷೇಧದ ನಡುವೆಯೂ ಬಿಜೆಪಿ ಮುಖಂಡನ ವಿವಾಹ ವಾರ್ಷಿಕೋತ್ಸವ: ಮಾಸ್ಕ್ ಧರಿಸಿಲ್ಲ, ಸಾಮಾಜಿಕ ಅಂತರವೂ ಮಾಯ!

    ಹುಬ್ಬಳ್ಳಿ: ಬಿಜೆಪಿ ಮುಖಂಡ ಮತ್ತು ಜಗದೀಶ್ ಶೆಟ್ಟರ್ ಅವರ ಬಲಗೈ ಬಂಟನಿಂದ ಕೋವಿಡ್ ನಿಯಮ ಉಲ್ಲಂಘನೆಯಾಗಿದ್ದು, ಸಾಮಾನ್ಯ ಜನರಿಗೊಂದು ನ್ಯಾಯ, ಜನಪ್ರತಿನಿಧಿಗಳಿಗೆ ಇನ್ನೊಂದು ನ್ಯಾಯವೇ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

    ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಸಾವಕಾರ್ ದಂಪತಿ ಮದುವೆ 25ನೇ ವಾರ್ಷಿಕೋತ್ಸವವನ್ನ ಆಚರಿಸಿಕೊಂಡಿದೆ. ಈ ವೇಳೆ ಮಾಸ್ಕ್ ಕೂಡ ಧರಿಸಿಲ್ಲ, ಸಾಮಾಜಿಕ ಅಂತರವನ್ನೂ ಕಾಪಾಡಿಕೊಂಡಿಲ್ಲ. ಇನ್ನೊಂದೆಡೆ ಮೇ 18 ರಿಂದ 24ರವರೆಗೂ ಜಿಲ್ಲೆಯಲ್ಲಿ ಯಾವುದೇ ಸಭೆ-ಸಮಾರಂಭಗಳನ್ನು ಮಾಡದಂತೆ ಧಾರವಾಡ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಅಲ್ಲದೆ ಮದುವೆ ಕಾರ್ಯಕ್ರಮಕ್ಕೂ ನಿಷೇಧ ವಿಧಿಸಿದೆ.

    ನಿಷೇಧದ ನಡುವೆಯೂ ಬಿಜೆಪಿ ಮುಖಂಡನ ವಿವಾಹ ವಾರ್ಷಿಕೋತ್ಸವ: ಮಾಸ್ಕ್ ಧರಿಸಿಲ್ಲ, ಸಾಮಾಜಿಕ ಅಂತರವೂ ಮಾಯ!

    ಆದರೆ ಇದೆಲ್ಲವನ್ನೂ ಗಾಳಿಗೆ ತೂರಿದ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಸಾವಕಾರ್ ತನ್ನ ವಿವಾಹವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇವರೂ ಮಾಸ್ಕ್ ಹಾಕಿಕೊಂಡಿರಲಿಲ್ಲ. ಈ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಿಗೆ ತಿಳಿಹೇಳಬೇಕಿದ್ದ ಜನಪ್ರತಿನಿಧಿಗಳೇ ನಿಯ ಉಲ್ಲಂಘಿಸಿದ್ರೆ ಹೇಗೆ? ಕೋವಿಡ್ ತಡೆಗಟ್ಟುವವರು ಯಾರು? ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

    ಇನ್ನೆರಡು ತಿಂಗಳಲ್ಲಿ ಮಗುವಿಗೆ ಜನ್ಮ ನೀಡಬೇಕಿದ್ದ 24 ವರ್ಷದ ಪಿಎಸ್​ಐ ಕರೊನಾಗೆ ಬಲಿ!

    ಬೆಳ್ಳಂಬೆಳಗ್ಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಭಯಾನಕ ಘಟನೆ! ಕಕ್ಕಾಬಿಕ್ಕಿಯಾಗಿ ಓಡಿದ ಕರೊನಾ ಸೋಂಕಿತರು, ಬೆಚ್ಚಿಬೀಳಿಸುತ್ತೆ ಆ ದೃಶ್ಯ

    ತಾಯಿ ಗರ್ಭದಿಂದ ಮಗುವಿನ ಕಾಲು ಹೊರ ಬಂದಿದೆ.. ಯಾರಾದರೂ ಹೆರಿಗೆ ಮಾಡಿ… ಆಸ್ಪತ್ರೆ ಬಾಗಿಲಲ್ಲಿ ಕುಟುಂಬಸ್ಥರ ಆಕ್ರಂದನ

    ವಿವಾಹಿತೆ ಜತೆ ಪರಪುರುಷನ ಕಾಮದಾಟ! 5 ವರ್ಷದ ಅಕ್ರಮ ಸಂಬಂಧಕ್ಕೆ ಬಿತ್ತು ಮೂವರ ಹೆಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts