More

    ಸಾರ್ವಜನಿಕರ ಮೈಜುಮ್ಮೆನಿಸಿದ ಬೈಕ್ ರೇಸ್


    ಮಂಡ್ಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಬಿಜಿಎಸ್ ಡರ್ಟ್‌ ಟ್ರ್ಯಾಕ್ ಬೈಕ್ ರೇಸ್‌ಗೆ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಶನಿವಾರ ಚಾಲನೆ ನೀಡಿದರು.


    ಜಾತ್ರಾ ಮಹೋತ್ಸವದ ಅಂಗವಾಗಿ ಕಳೆದ ಆರು ದಿನಗಳಿಂದ ವಿವಿಧ ಬಗೆಯ ಪೂಜಾ ಮಹೋತ್ಸವ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ಅದರ ಭಾಗವಾಗಿ ಡರ್ಟ್‌ ಟ್ರಾೃಕ್ ಬೈಕ್ ರೇಸ್ ನಡೆಯಿತು.


    ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಕ್ರಿಕೆಟ್, ವಾಲಿಬಾಲ್, ಕಬ್ಬಡಿ ಸೇರಿದಂತೆ ಹಲವು ಕ್ರೀಡೆಗಳು ಮನಸ್ಸಿನಲ್ಲಿ ಉತ್ಸಾಹ ಮೂಡಿಸುವ ಜತೆಗೆ ಸ್ಪರ್ಧಿಗಳ ದೈಹಿಕ ಬೆಳವಣಿಗೆ ಹೆಚ್ಚಿಸುತ್ತವೆ. ಆದರೆ, ಬೈಕ್ ರೇಸ್‌ನಂತಹ ರೋಮಾಂಚನಕಾರಿ ಸ್ಪರ್ಧೆಗಳು ಅಪಾಯಕಾರಿಯಾಗಿದ್ದು, ಇಂತಹ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಯುವಕರು ಎಚ್ಚರಿಕೆ ವಹಿಸಿ ಬೈಕ್ ಚಲಾಯಿಸಬೇಕು ಎಂದು ಸಲಹೆ ನೀಡಿದರು.


    ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಬೈಕ್ ರೈಡರ್‌ಗಳು ರೇಸ್‌ನಲ್ಲಿ ಭಾಗವಹಿಸಿದ್ದರು. ಬೈಕ್ ರೇಸ್ ನೋಡಲು ಜನರು ಮುಗಿಬಿದ್ದರು. ಜನರನ್ನು ಹತೋಟಿಗೆ ತರಲು ಮಠದ ಸಿಬ್ಬಂದಿ ಹಾಗೂ ಪೋಲಿಸರು ಹರಸಾಹಸ ಪಟ್ಟರು. ಆರಂಭಿಕ ರೇಸ್ ವೀಕ್ಷಣೆ ಮೂಲಕ ನಿರ್ಮಲಾನಂದನಾಥ ಶ್ರೀಗಳು ಕ್ರೀಡಾಳುಗಳಿಗೆ ಸ್ಫೂರ್ತಿ ನುಡಿಗಳಾಡಿದರು.

    ಆದಿಚುಂಚನಗಿರಿ ಮಠದ ಪ್ರಧಾನಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಚೈತನ್ಯನಾಥಸ್ವಾಮೀಜಿ, ಚಲನಚಿತ್ರ ನಟ ವಸಿಷ್ಟ ಸಿಂಹ ಸೇರಿದಂತೆ ವಿವಿಧ ಶಾಖಾ ಮಠಗಳ ಸ್ವಾಮೀಜಿಗಳು ಮತ್ತು ಸಹಸ್ರಾರು ಮಂದಿ ಕ್ರೀಡಾಸಕ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts