More

    ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳಿಗೂ ತಟ್ಟಿದ ಭಾರತ್​ ಬಂದ್​ ಬಿಸಿ: ಟಂಟಂನಲ್ಲಿ ವಿದ್ಯಾರ್ಥಿಗಳನ್ನು ಕಳುಹಿಸಿದ ರೈತರು

    ಬಾಗಲಕೋಟೆ: ಕೇಂದ್ರದ ಕೃಷಿ ಕಾನೂನು ವಿರೋಧಿಸಿ ರೈತರು ಇಂದು ದೇಶಾದ್ಯಂತ ನಡೆಸುತ್ತಿರುವ ಭಾರತ್​ ಬಂದ್​ ಬಿಸಿ ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳಿಗೂ ತಟ್ಟಿದೆ.

    ಕೇಂದ್ರದ 3 ಕೃಷಿ ಕಾಯ್ದೆ ವಿರೋಧಿಸಿ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯ, ಅಡುಗೆ ಅನಿಲ-ಇಂಧನ-ರಸಗೊಬ್ಬರ ಬೆಲೆ ಏರಿಕೆ ಖಂಡಿಸಿ ರಾಷ್ಟ್ರೀಯ ಸಂಯುಕ್ತ ಕಿಸಾನ್​ ಮೋರ್ಚಾವು ಭಾರತ್​ ಬಂದ್​ಗೆ ಕರೆ ನೀಡಿದ್ದು, ಇದನ್ನ ಬೆಂಬಲಿಸಿ ರಾಜ್ಯದಲ್ಲೂ ರೈತ ಸಂಘಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ. ಇದೇ ದಿನ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯೂ ನಡೆಯುತ್ತಿದ್ದು, ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ಬಂದ್​ ಬಿಸಿ ತಾಗಿದೆ. ಬಾಗಲಕೋಟೆ ‌ಜಿಲ್ಲೆ ಮುಧೋಳ ತಾಲೂಕಿನ ಶಿರೋಳ ಗ್ರಾಮದ ಬಳಿ ರೈತರು ರಸ್ತೆ ತಡೆ ನಡೆಸಿದರು. ಈ ವೇಳೆ ಬಸ್​ ಗೆ ಅಡ್ಡವಾಗಿ ಕುಳಿತು ಪ್ರತಿಭಟನೆ ನಡೆಸಿದ್ದರಿಂದ ಎಸ್ಸೆಎಸ್ಸೆಲ್ಸಿ ಮತ್ತು ರಾಣಿ ಚನ್ನಮ್ಮ ವಿವಿಯ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಬಸ್​ನಿಂದ ಕೆಳಗಿಳಿದು ಇವತ್ತು ಪರೀಕ್ಷೆ ಇದೆ ಎಂದರು.

    ಕೊನೆಗೆ ಪ್ರತಿಭಟನಾನಿರತರೇ ಟಂಟಂ ವ್ಯವಸ್ಥೆ ಮಾಡಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿದರು. ಬಳಿಕ ಪ್ರತಿಭಟನೆ ಮುಂದುವರಿಸಿದರು.

    ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳಿಗೂ ತಟ್ಟಿದ ಭಾರತ್​ ಬಂದ್​ ಬಿಸಿ: ಟಂಟಂನಲ್ಲಿ ವಿದ್ಯಾರ್ಥಿಗಳನ್ನು ಕಳುಹಿಸಿದ ರೈತರು

    ಬಾಗಲಕೋಟೆ ಜಿಲ್ಲೆಯಲ್ಲಿ 2,732 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 18 ಪರೀಕ್ಷಾ ಕೇಂದ್ರಗಳನ್ನ ತೆರೆಯಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ತಲುಪಿಸಲು ಯಾವುದೇ ತೊಂದರೆ ಆಗಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಭಾರತ ಬಂದ್‌: ಜನರಲ್ಲಿ ನಿರಾಸಕ್ತಿ- ಮನವಿಗೆ ಜಗ್ಗದ ವ್ಯಾಪಾರಸ್ಥರು, ಗದರಿಸಿ ಬಂದ್‌ ಮಾಡಿಸ್ತೀರೋ ಪ್ರತಿಭಟನಾಕಾರರರು

    ಪ್ರಿಯಕರನ ಕೊಲ್ಲಲು ಮತ್ತೊಬ್ಬನೊಂದಿಗೆ ವಿವಾಹಿತೆಯ ಕಾಮದಾಟ: ಬೆಚ್ಚಿಬೀಳಿಸುತ್ತೆ ಇವಳ ಅಸಲಿ ಮುಖ!

    ಮಕ್ಕಳೊಂದಿಗೆ ಪತ್ನಿ ನಾಪತ್ತೆ: ಆಕೆ ಸಿಗುತ್ತಿದ್ದಂತೆ ಪೊಲೀಸರಿಗೆ ಕಾದಿತ್ತು ಶಾಕ್​! ಗಂಡ-ಹೆಂಡ್ತಿಯಲ್ಲ, ಆದ್ರೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts