More

    ಬಸವನಗುಡಿ ಕಡಲೆ‌ಕಾಯಿ ಪರಿಷೆಗೆ ಚಾಲನೆ: ಕರೊನಾ, ಒಮಿಕ್ರಾನ್​ ಸೋಂಕಿನ ಭೀತಿ ನಡುವೆಯೂ ಕಳೆಗಟ್ಟಿದ ಜಾತ್ರೆ

    ಬೆಂಗಳೂರು: ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆ ಆರಂಭವಾಗಿದ್ದು, ಸೋಮವಾರ ಬೆಳಗ್ಗೆ ಶಾಸಕರಾದ ರವಿಸುಬ್ರಮಣ್ಯ, ಉದಯ್ ಬಿ. ಗರುಡಾಚಾರ್ ಚಾಲನೆ ನೀಡಿದರು.

    ಮುಜರಾಯಿ ಇಲಾಖೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಯೋಗದೊಂದಿಗೆ 3 ದಿನಗಳವರೆಗೆ (ಡಿ.1ರವರೆಗೆ) ಬಸವನಗುಡಿ ಕಡಲೆಕಾಯಿ ಪರಿಷೆ ನಡೆಯಲಿದೆ. ಪರಿಷೆಗೆ ಚಾಲನೆ ಸಿಗುವ ಮುನ್ನಾದಿನ ಭಾನುವಾರದಿಂದಲೇ ಜಾತ್ರೆಯ ವಾತಾವರಣ ನಿರ್ಮಾಣಗೊಂಡಿದೆ.

    ದೊಡ್ಡ ಗಣಪತಿ ದೇವಸ್ಥಾನದಿಂದ ರಾಮಕೃಷ್ಣ ಆಶ್ರಮ ವೃತ್ತದವರೆಗೂ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಪರಿಷೆಯಲ್ಲಿ ವಿವಿಧ ತಳಿಯ ಕಡಲೆಕಾಯಿಯ ವ್ಯಾಪಾರ ವಹಿವಾಟು ನಡೆಯುತ್ತಿದ್ದು, ಕರೊನಾ ಮತ್ತು ರೂಪಾಂತರಿ ಒಮಿಕ್ರಾನ್​ ಸೋಂಕಿನ ಭೀತಿ ನಡುವೆಯೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದಾರೆ.

    ಬಸವನಗುಡಿ ಕಡಲೆ‌ಕಾಯಿ ಪರಿಷೆಗೆ ಚಾಲನೆ: ಕರೊನಾ, ಒಮಿಕ್ರಾನ್​ ಸೋಂಕಿನ ಭೀತಿ ನಡುವೆಯೂ ಕಳೆಗಟ್ಟಿದ ಜಾತ್ರೆ

    ಪರಿಷೆಗೆ ಬರುವ ಪ್ರತಿಯೊಬ್ಬರೂ ಮಾಸ್ಕ್​ ಧರಿಸುವುದು, ಸ್ಯಾನಿಟೈಸರ್​ ಬಳಕೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಿಕೆಯನ್ನ ಮರೆಯುವಂತಿಲ್ಲ. ಪರಿಷೆಯ ಗುಂಗಿನಲ್ಲಿ ಮಾಸ್ಕ್​ ಮರೆತು ಬಂದವರಿಗೆ ಮಾರ್ಷಲ್​ಗಳು ದಂಡದ ಬಿಸಿ ಮುಟ್ಟಿಸುತ್ತಿದ್ದಾರೆ.

    ಬಸವನಗುಡಿ ಕಡಲೆ‌ಕಾಯಿ ಪರಿಷೆಗೆ ಚಾಲನೆ: ಕರೊನಾ, ಒಮಿಕ್ರಾನ್​ ಸೋಂಕಿನ ಭೀತಿ ನಡುವೆಯೂ ಕಳೆಗಟ್ಟಿದ ಜಾತ್ರೆ

    ಕಡಲೆಕಾಯಿ ಪರಿಷೆಗೆ ಚಾಲನೆ ನೀಡುವ ವೇಳೆ ಬಿಬಿಎಂಪಿ ಅಧಿಕಾರಿಗಳಾದ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಗೌರವ್ ಗುಪ್ತ, ವಲಯ ಆಯುಕ್ತ ತುಳಸಿ ಮದ್ದಿನೇನಿ, ವಲಯ ಜಂಟಿ ಆಯುಕ್ತ ಜಗದೀಶ್ ನಾಯಕ್ ಉಪಸ್ಥಿತರಿದ್ದರು.

    ಕೈವಾರದಲ್ಲಿ ನಡೆದ ಮದ್ವೆ ಫೋಟೋ ವೈರಲ್​: ಅಪರೂಪದ ಜೋಡಿಗೆ ಶುಭಾಶಯಗಳ ಮಹಾಪೂರವೇ ಬರ್ತಿದೆ…

    ಹಾಗೆಲ್ಲ ಮಾಡಿದ್ರೆ ಅಪ್ಪುಗೆ ದ್ರೋಹ ಮಾಡಿದಂತೆ, ಆ ವಿಷ್ಯ ಅವನೊಂದಿಗೆ ಮಣ್ಣಾಗ್ಬೇಕು ಅನ್ಕೊಂಡಿದ್ದ: ರಾಘಣ್ಣ

    ಮೈಸೂರಲ್ಲಿ ಆಸ್ತಿಗಾಗಿ ಶವದ ಹೆಬ್ಬೆಟ್ಟು ಒತ್ತಿಸಿಕೊಂಡ್ರು: ಗಂಡ ಬದುಕಿಲ್ಲ, ಮಕ್ಕಳೂ ಇಲ್ಲ… ಅಸಲಿ ಕತೆ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts