More

    ಕದಿರೇಶ್​ನನ್ನು ಪತ್ನಿ ರೇಖಾಳೇ ಕೊಲ್ಲಿಸಿದ್ದಾ? ರೇಖಾ ಹಂತಕ ಪೀಟರ್ ಬಾಯ್ಬಿಟ್ಟ ಸ್ಫೋಟಕ ರಹಸ್ಯ ಇಲ್ಲಿದೆ

    ಬೆಂಗಳೂರು: ಬಡ ಜನರಿಗೆ ಊಟ ವಿತರಿಸುತ್ತಿರುವಾಗಲೇ ಜೂ.24ರಂದು ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್​ನನ್ನು ಅವರ ಕಚೇರಿ ಬಳಿಯೇ ಅಟ್ಟಾಡಿಸಿ ಕೊಂದ ಪೀಟರ್ ಪೊಲೀಸರ ಮುಂದೆ ಸ್ಫೋಟಕ ಹೇಳಿಕೆ ನೀಡಿದ್ದಾನೆ.

    ರೇಖಾಳ ಗಂಡ ಕದಿರೇಶ್ ಜತೆ ನಾವು ಕೆಲಸ ಮಾಡುತ್ತಿದ್ದೆವು. ನಮ್ಮನ್ನು ಮಕ್ಕಳಂತೆ ಕದಿರೇಶ್​ ನೋಡಿಕೊಂಡಿದ್ದರು. ಆದರೆ, ಗಂಡನ ಹತ್ಯೆಗೆ ಪತ್ನಿ ರೇಖಾ ದೊಡ್ಡ ಗ್ಯಾಂಗ್​ನೊಂದಿಗೆ ಕೈಜೋಡಿಸಿದ್ದಳು. 2018ರ ಫೆಬ್ರವರಿ 8ರಂದು ಅವರ ಮನೆ ಬಳಿಯೇ ಕದಿರೇಶ್​ರನ್ನು ಆ ಗ್ಯಾಂಗ್​ ಹತ್ಯೆ ಮಾಡಿತ್ತು. ಕದಿರೇಶ್ ಕೊಲೆಗೆ ಸೇಡು ತೀರಿಸಿಕೊಳ್ಳಲು ರೇಖಾಳನ್ನ ಹತ್ಯೆ ಮಾಡಿದ್ದಾಗಿ ಆರೋಪಿ ಪೀಟರ್​ ಪೊಲೀಸರ ಮುಂದೆ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿರಿ ಸಿಗಂದೂರು ಲಾಂಚ್​ನಿಂದ ನದಿಗೆ ಹಾರಿದ ಮಹಿಳೆ! ಸಾಯಲೆಂದೇ ಬಂದವಳ ಜೀವ ಉಳಿದಿದ್ದೇಗೆ?

    ಆರೋಪಿ ಪೀಟರ್​ನ ಹೇಳಿಕೆ ನೋಡಿದ್ರೆ ಕದಿರೇಶ್​ನನ್ನು ಪತ್ನಿ ರೇಖಾಳೇ ಕೊಲ್ಲಿಸಿದ್ದಾ? ಎಂಬ ಅನುಮಾನ ಮೂಡುತ್ತಾದರೂ ಅಸಲಿ ಬೇರೆಯೇ ಇದೆ.

    2018ರಲ್ಲಿ ಕದಿರೇಶ್ ಹತ್ಯೆ ಮಾಡಿದ್ದ ಶೋಭನ್ ಗ್ಯಾಂಗ್​ಗೆ ರೇಖಾ ನೆರವು ನೀಡಿದ್ದಳು. ಇದೇ ವಿಚಾರಕ್ಕೆ ಆಕೆಯನ್ನು ಹತ್ಯೆ ಮಾಡಿದ್ದಾಗಿ ಪ್ರಮುಖ ಆರೋಪಿ ಪೀಟರ್ ವಿಚಾರಣೆಯಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂದು ಹೇಳಲಾಗುತ್ತಿದೆ. ಕದಿರೇಶ್ ಜತೆ ಓಡಾಡಿಕೊಂಡಿದ್ದ ಪೀಟರ್​ಗೆ ಯಾವುದಕ್ಕೂ ಕೊರತೆ ಇರಲಿಲ್ಲ. ಕದಿರೇಶ್ ಹತ್ಯೆಯಾದ ಬೆನ್ನಲ್ಲೇ ರೇಖಾ ಯಾವುದೇ ನೆರವನ್ನು ನೀಡದೆ ಪೀಟರ್​ನನ್ನು ದೂರ ಇಟ್ಟಿದ್ದಳು. ಜೀವನ ನಿರ್ವಹಣೆಗೂ ಕಷ್ಟವಾದಾಗ ರೇಖಾ ಮೇಲೆ ಆಕ್ರೋಶಗೊಂಡಿದ್ದ. ಅದನ್ನು ಅರಿತಿದ್ದ ಕದಿರೇಶ್ ಅಕ್ಕ ಮಾಲಾ ಹಾಗೂ ಇತರರು ಪೀಟರ್​ನನ್ನು ದಾಳವಾಗಿ ಬಳಸಿಕೊಂಡು ತಮ್ಮ ದಾರಿಗೆ ಅಡ್ಡವಾಗಿದ್ದ ರೇಖಾಳನ್ನು ಮುಗಿಸಲು ಆತನಿಗೆ ಆಮಿಷವೊಡ್ಡುತ್ತಿದ್ದರು.

    ಕದಿರೇಶ್​ನನ್ನು ಪತ್ನಿ ರೇಖಾಳೇ ಕೊಲ್ಲಿಸಿದ್ದಾ? ರೇಖಾ ಹಂತಕ ಪೀಟರ್ ಬಾಯ್ಬಿಟ್ಟ ಸ್ಫೋಟಕ ರಹಸ್ಯ ಇಲ್ಲಿದೆ

    ಮುಂಬರುವ ಬಿಬಿಎಂಪಿ ಚುನಾವಣೆಗೆ ನಿಲ್ಲಲು ರೇಖಾ ಕದಿರೇಶ್ ಸಿದ್ಧವಾಗಿದ್ದರು. ಈ ಬಾರಿಯೂ ಬಿಜೆಪಿಯಿಂದಲೇ ರೇಖಾಗೆ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿತ್ತು. ಇತ್ತ ಮಾಲಾ ಬಿಎಸ್​ಪಿಯಿಂದ ಚುನಾವಣೆ ಸ್ಪರ್ಧಿಸಲು ಚಿಂತಿಸಿದ್ದಳು. ತನಗೆ ಆಗದಿದ್ದರೆ ಮಗಳು ಕಸ್ತೂರಿ ಅಥವಾ ಅರುಳ್ ಪತ್ನಿ ಪೂರ್ಣಿಮಾಳನ್ನು ನಿಲ್ಲಿಸಲು ತಯಾರಿ ಮಾಡಿದ್ದಳು. ರೇಖಾ ಗಳಿಸಿದ್ದ ವರ್ಚಸ್ಸು ಇದಕ್ಕೆಲ್ಲ ಅಡ್ಡಿಯಾಗಿತ್ತು. ಇದೇ ಸಮಯಕ್ಕೆ ರೇಖಾ ಜತೆಗೆ ಟೆಂಡರ್ ಹಣದ ವಿಚಾರವಾಗಿ ಪೀಟರ್ ಜಗಳ ಮಾಡಿಕೊಂಡಿದ್ದ. ಪೀಟರ್​ನನ್ನು ತಮ್ಮ ಬುಟ್ಟಿಗೆ ಹಾಕಿಕೊಂಡ ಮಾಲಾ ಮತ್ತು ಇತರರು ಕದಿರೇಶ್​ನ ಕೊಲ್ಲಿಸಿದ್ದು ರೇಖಾ ಅಂತಾ ನಂಬಿಸಿದ್ದರು ಎನ್ನಲಾಗಿದೆ. ರೇಖಾ ಕೊಲೆಗೆ ಕಳೆದ 4 ತಿಂಗಳಿಂದಲೇ ಪಾತಕಿಗಳು ಸಿದ್ಧತೆ ನಡೆಸಿರುವ ಸಂಗತಿ ಮೇಲ್ನೋಟಕ್ಕೆ ಕಂಡು ಬಂದಿದೆ.

    ಬಿಬಿಎಂಪಿ ಕಾರ್ಪೆರೇಟರ್ ಚುನಾವಣೆ ಸ್ಪರ್ಧೆಗೆ ಸಂಬಂಧಿಸಿದಂತೆ ಕದಿರೇಶ್ ಕುಟುಂಬದಲ್ಲಿ ಒಳ ಜಗಳ ಇರುವ ಬಗ್ಗೆ ಸುಳಿವು ಸಿಕ್ಕಿದ ಬೆನ್ನಲ್ಲೇ ಪೊಲೀಸರು 30 ಮಂದಿ ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕಿದ್ದರು. ಆಗ ಕದಿರೇಶ್ ಅಕ್ಕ ಮಾಲಾ ಹಾಗೂ ರೇಖಾ ಕದಿರೇಶ್ ನಡುವೆ ವೈಮನಸ್ಸಿದ್ದ ಸಂಗತಿ ಗೊತ್ತಾಗಿದೆ. ಕದಿರೇಶ್ ಕುಟುಂಬದ ನಾಲ್ವರಿಂದ ಚುನಾವಣೆಗೆ ಪೈಪೋಟಿ ಇತ್ತು. ತನ್ನ ಆಪ್ತ ಸಂಬಂಧಿಕರು ಯಾರಾದರೂ ಚುನಾವಣೆಗೆ ಸ್ಪರ್ಧಿಸಲಿ ಎಂದು ಮಾಲಾ ಚರ್ಚೆ ನಡೆಸಿದ್ದಳು. ಈ ರೇಸ್​ನಲ್ಲಿದ್ದವರ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಸೊಸೆ ಇಲ್ಲವೇ ಮಗಳು ಚುನಾವಣೆಗೆ ಸ್ಪರ್ಧಿಸಲಿರುವ ಬಗ್ಗೆ ಮಾಲಾ ಕುಟುಂಬಸ್ಥರ ಜತೆ ಮಾತುಕತೆ ನಡೆಸಿದ್ದಳು. ಕದಿರೇಶ್ ಹತ್ಯೆ ಬಳಿಕ ರೇಖಾ, ಕುಟುಂಬಸ್ಥರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದರು. ಯಾರಿಗೂ ಹಣ ಕೊಡದೇ ದೂರ ಇಟ್ಟುಕೊಂಡಿದ್ದರು. ಇದೇ ವಿಚಾರಕ್ಕೆ ರೇಖಾ ಜತೆ ಖದಿರೇಶ್ ಕುಟುಂಬ ಜಿದ್ದಿಗೆ ಬಿದ್ದಿತ್ತು ಎನ್ನಲಾಗಿದೆ.

    ಪ್ರಕರಣದಲ್ಲಿ ಅರುಳ್ ಪಾತ್ರವಿರುವ ಬಗ್ಗೆ ಪೊಲೀಸರಿಗೆ ಕೆಲ ಸಾಕ್ಷ್ಯಗಳೂ ಸಿಕ್ಕಿವೆ. ಹಂತಕರಿಗೆ ಹಣಕಾಸಿನ ನೆರವು ಮತ್ತು ನ್ಯಾಯಾಲಯದಲ್ಲಿ ಜಾಮೀನು ಒದಗಿಸುವ ಭರವಸೆಯನ್ನು ಇವರು ನೀಡಿದ್ದರು. ಪ್ರಮುಖ ಆರೋಪಿ ಪೀಟರ್ ಹಾಗೂ ಸೂರ್ಯನ ಜತೆ ಸೇರಿ ರೇಖಾ ಕೊಲೆಗೆ ಒಳಸಂಚು ರೂಪಿಸಿದ್ದರು. ಹತ್ಯೆಯಲ್ಲಿ ಮಾಲಾ ಹಾಗೂ ಈಕೆಯ ಪುತ್ರ ಅರುಳ್ ಭಾಗಿಯಾಗಿರುವುದು ತನಿಖೆಯಲಿ ದೃಢಪಟ್ಟಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

    ದೇವರಿಗೆ ಹುಣ್ಣಿಮೆ ಪೂಜೆ ಸಲ್ಲಿಸಲು ಹೋದ ತಾಯಿ ಜತೆ ಮಕ್ಕಳನ್ನೂ ಹೊತ್ತೊಯ್ದ ಜವರಾಯ!

    ಗಂಡಂದಿರ ಕಿರುಕುಳ: ತಂಗಿ ಸತ್ತ 17 ದಿನಕ್ಕೆ ಅಕ್ಕನೂ ಸಾವು! ಇವರಿಬ್ಬರ ದುರಂತ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ

    ಮನೆ ಮುಂದಿನ ವಾಟರ್ ಟ್ಯಾಂಕಿನಲ್ಲಿ ಮಕ್ಕಳಿಬ್ಬರ ಉಸಿರು ನಿಲ್ಲಿಸಿ ತಾಯಿಯೂ ಆತ್ಮಹತ್ಯೆ!

    ಮಂಡ್ಯದಲ್ಲಿ ಕಾಚಳ್ಳಿ ಹಣ್ಣು ತಿಂದ 6 ಮಕ್ಕಳು ಸೇರಿ 12 ಮಂದಿಗೆ ರಕ್ತ ವಾಂತಿ-ಭೇದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts