More

    ಆಂಬುಲೆನ್ಸ್​ ಸಿಕ್ತಿಲ್ವಾ? ಡೋಂಟ್​ ವರಿ, ಇಲ್ಲಿದೆ ಆಟೋ ಆಂಬುಲೆನ್ಸ್​! ಹಣ ಪಡೆಯದೆ ಆಸ್ಪತ್ರೆಗೆ ಕರೆದೊಯ್ಯುತ್ತಾನೆ…

    ಭೋಪಾಲ್​: ಕರೊನಾ ಸಂಕಷ್ಟ ಕಾಲದಲ್ಲಿ ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್​, ಆಸ್ಪತ್ರೆಯಲ್ಲಿ ಬೆಡ್​, ಆಕ್ಸಿಜನ್​ ಸಿಗದೆ ಸಾವಿರಾರು ಮಂದಿ ಸಾಯುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಆಂಬುಲೆನ್ಸ್​ ಚಾಲಕರು, ಆಸ್ಪತ್ರೆಗಳು ಹೆಚ್ಚುವರಿ ಹಣ ವಸೂಲಿ ಮಾಡುವ ದಂಧೆಗಿಳಿದಿದ್ದಾರೆ ಎಂಬ ಗಂಭೀರ ಆರೋಪ ದಟ್ಟವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯುವಕನೊಬ್ಬ ತನ್ನ ಆಟೋವನೇ ಆಂಬುಲೆನ್ಸ್ ಆಗಿ ಪರಿವರ್ತಿಸಿ ಜನರ ಪ್ರಾಣ ಉಳಿಸುವ ಮಹತ್ತರ ಕಾಯಕದಲ್ಲಿ ತೊಡಗಿದ್ದು, ಇತರರಿಗೆ ಮಾದರಿಯಾಗಿದೆ.

    ಈ ಆಟೋದಲ್ಲಿ ಆಕ್ಸಿಜನ್​ ಸೌಲಭ್ಯವಿದ್ದು, ಕರೊನಾ ಸೋಂಕಿತ ರೋಗಿಗಳು ಸೇರಿದಂತೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಉಚಿತವಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾನೆ ಚಾಲಕ ಮೊಹಮ್ಮದ್​ ಜಾವೇದ್​. ಈತ ಮಧ್ಯಪ್ರದೇಶದ ಭೋಪಾಲ್​ ಮೂಲದವ.

    ಆಟೋ ಆಂಬುಲೆನ್ಸ್​ ಸೇವೆ ಕುರಿತು ಮಾತನಾಡಿರುವ ಮೊಹಮ್ಮದ್ ಜಾವೇದ್, ಆಂಬುಲೆನ್ಸ್ ಕೊರತೆಯಿಂದಾಗಿ ರೋಗಿಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲು ಅವರ ಕುಟುಂಬಸ್ಥರು ಪರದಾಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣ ಮತ್ತು ಸುದ್ದಿ ವಾಹಿನಿಗಳಲ್ಲಿ ನೋಡಿದ್ದೇನೆ. ನಾನೇಕೆ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಬಾರದು? ಎಂದು ಚಿಂತಿಸಿ ನನ್ನ ಆಟೋವನ್ನೇ ಆಂಬುಲೆನ್ಸ್​ ಮಾಡಿಕೊಂಡಿದ್ದೇನೆ. ಇದಕ್ಕೆ ಅಗತ್ಯ ಹಣ ಹೊಂದಿಸಲು ನನ್ನ ಪತ್ನಿಯ ಚಿನ್ನಾಭರಣ ಮಾರಿದೆ ಎಂದು ಹೇಳಿಕೊಂಡಿದ್ದಾರೆ.

    ಆಂಬುಲೆನ್ಸ್​ ಸಿಕ್ತಿಲ್ವಾ? ಡೋಂಟ್​ ವರಿ, ಇಲ್ಲಿದೆ ಆಟೋ ಆಂಬುಲೆನ್ಸ್​! ಹಣ ಪಡೆಯದೆ ಆಸ್ಪತ್ರೆಗೆ ಕರೆದೊಯ್ಯುತ್ತಾನೆ...ತುರ್ತಾಗಿ ಆಂಬುಲೆನ್ಸ್​ ಬೇಕಿದ್ದವರು ನನ್ನನ್ನು ಸಂಪರ್ಕಿಸುವಂತೆ ಜಾಲತಾಣದಲ್ಲಿ ನನ್ನ ಮೊಬೈಲ್​ ನಂಬರ್​ ಅನ್ನು ಹಾಕಿದ್ದೇನೆ. ಉತ್ತಮ ಸ್ಪಂದನೆ ಸಿಕ್ಕಿದೆ. ಸುಮಾರು 20 ದಿನಗಳಿಂದ ಆಟೋ ಆಂಬುಲೆನ್ಸ್​ ಕಾರ್ಯ ನಿರ್ವಹಿಸುತ್ತಿದ್ದು, ಗಂಭೀರ ಸ್ಥಿತಿಯಲ್ಲಿದ್ದ 9 ಜನರನ್ನು ಆಸ್ಪತ್ರೆಗೆ ಕರೆದೊಯ್ದಿದ್ದೇನೆ. ಹಣ ಮಾಡುವ ಉದ್ದೇಶ ನನ್ನದಲ್ಲ, ಸಮಾಜಕ್ಕಾಗಿ ಅಳಿಲು ಸೇವೆ ಮಾಡುತ್ತಿರುವೆ ಎಂದು ಜಾವೇದ್​ ಹೇಳಿಕೊಂಡಿದ್ದಾರೆ.

    ಬೆಳಗ್ಗೆ ಮಗ, ಸಂಜೆ ತಂದೆ, ಮರುದಿನ ಮಗಳು, ನಂತರ ಮತ್ತೊಬ್ಬ ಮಗಳ ಸಾವು… ಇನ್ನಿಬ್ಬರ ಸ್ಥಿತಿ ಚಿಂತಾಜನಕ

    ಬೆಳಗ್ಗೆ ಮಗ, ಸಂಜೆ ತಂದೆ, ಮರುದಿನ ಮಗಳು, ನಂತರ ಮತ್ತೊಬ್ಬ ಮಗಳ ಸಾವು… ಇನ್ನಿಬ್ಬರ ಸ್ಥಿತಿ ಚಿಂತಾಜನಕ

    ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಮೃತಪಟ್ಟದ್ದು ಕರೊನಾದಿಂದಲ್ಲ! ಸಾವಿಗೆ ಬೇರೆ ಕಾರಣ ಇದೆ

    ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 22 ವರ್ಷದ ಯುವತಿಗೆ ಗೆಲುವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts