More

    ಬೆಂಗಳೂರಿನ ದುರಂತ ಮಾಸುವ ಮುನ್ನವೇ ದಾವಣಗೆರೆಯಲ್ಲಿ ಮತ್ತೊಂದು ಕುಟುಂಬ ಆತ್ಮಹತ್ಯೆ!

    ದಾವಣಗೆರೆ: ಬೆಂಗಳೂರಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮಾಸುವ ಮುನ್ನವೇ ಇಂತಹದ್ದೇ ಮತ್ತೊಂದು ದುರಂತ ದಾವಣಗೆರೆಯಲ್ಲಿ ಸಂಭವಿಸಿದೆ.

    ದಾವಣಗೆರೆಯ ಭಾರತ್ ಕಾಲನಿ ನಿವಾಸಿಗಳಾದ ಕೃಷ್ಣ ನಾಯಕ(35), ಇವರ ಪತ್ನಿ ಸುಮಾ(30), ಮಗು ಧ್ರುವ(6) ಮೃತ ದುರ್ದೈವಿಗಳು. ಈ ದುರ್ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ.

    ಕೃಷ್ಣ ನಾಯಕ ಲಾರಿ ಚಾಲಕನಾಗಿದ್ದ. ಇವರ ಪತ್ನಿ ಸುಮಾಗೆ ಹಲವು ದಿನಗಳಿಂದ ಅನಾರೋಗ್ಯ ಕಾಡುತ್ತಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ನಿರಂತರ ಅಲೆದಾಡುತ್ತಿದ್ದ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಕೆಲ ತಿಂಗಳ ಹಿಂದೆ ಕೃಷ್ಣನಾಯ್ಕ ಕೆಲಸವನ್ನೂ ಕಳೆದುಕೊಂಡು ಜೀವನ ನಿರ್ವಹಣೆ ಕಷ್ಟವಾಗಿತ್ತು. ಆಸ್ಪತ್ರೆಯ ಖರ್ಚು-ವೆಚ್ಚಕ್ಕೆ ಹೆದರಿದ ಕುಟುಂಬ, ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಧ್ರುವ ಎರಡನೇ ತರಗತಿಯಲ್ಲಿ ಓದುತ್ತಿದ್ದ. ನಗರದ ನಿಟ್ಟುವಳ್ಳಿಯಲ್ಲಿರುವ ಸಂಬಂಧಿಕರ ಮನೆಯಲ್ಲಿದ್ದ ಆತನನ್ನು ಭಾನುವಾರ ಸಂಜೆ ಮನೆಗೆ ಕರೆದುಕೊಂಡು ಬಂದಿದ್ದರು ಎಂದು ತಿಳಿದು ಬಂದಿದೆ.

    ಪತ್ನಿ ಮತ್ತು ಮಗುವಿಗೆ ವಿಷ ಕುಡಿಸಿ ಬಳಿಕ ಕೃಷ್ಣನಾಯಕ್​ ನೇಣು ಹಾಕಿಕೊಂಡಿದ್ದಾನೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ದಾವಣಗೆರೆ ಆರ್​ಎಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ನಮ್ಮದು ಚಿತ್ರದುರ್ಗ ಜಿಲ್ಲೆ ಭರಮಸಾಗರ ಬಳಿಯ ಹಳ್ಳಿ. ಕಳೆದ 11 ದಿನಗಳಿಂದ ಅಕ್ಕನ ಮನೆಯಲ್ಲೇ ಇದ್ದು, ಭಾನುವಾರವಷ್ಟೆ ಊರಿಗೆ ವಾಪಸ್ ಹೋಗಿದ್ದೆ. ನಾನು ಇಲ್ಲೇ ಇದ್ದಿದ್ದರೆ ಬಹುಶಃ ಅವರು ಬದುಕಿರುತ್ತಿದ್ದರೇನೊ.
    |ನೇತ್ರಾ ಮೃತ ಸುಮಾಳ ತಂಗಿ

    ಕೃಷ್ಣನಾಯ್ಕ 3 ತಿಂಗಳ ಹಿಂದೆ ನನ್ನ ಬಳಿ ಬಂದು ಕಂಪನಿಯವರು ತನ್ನನ್ನು ಕೆಲಸದಿಂದ ತೆಗೆದಿದ್ದಾರೆ, ಯಾವುದೇ ನೆರವನ್ನೂ ನೀಡಿಲ್ಲ ಎಂದು ನೋವು ತೋಡಿಕೊಂಡಿದ್ದ. ನಾನು ಆ ಕಂಪನಿಯವರೊಂದಿಗೆ ಮಾತನಾಡಿ ಆತನಿಗೆ ಆರ್ಥಿಕ ಸಹಾಯ ಮಾಡುವಂತೆ ಕೇಳಿಕೊಂಡಿದ್ದೆ. ವಾರದ ಹಿಂದಷ್ಟೆ 20 ಸಾವಿರ ರೂ.ಗಳನ್ನು ನೀಡಿದ್ದರಂತೆ.
    | ಶಿವಪ್ರಕಾಶ್ ಪಾಲಿಕೆ ಸದಸ್ಯ

    ಪತ್ನಿ, ಮೂವರು ಮಕ್ಕಳು, ಮೊಮ್ಮಗುವಿನ ಸಾವಿಗೆ ಕಾರಣವಾದ್ರಾ ಈ ಸಂಪಾದಕ? ಡೆತ್‌ನೋಟ್‌ನಲ್ಲಿ ಸಿಕ್ಕಿವೆ ಮಹತ್ವದ ಸುಳಿವು!

    ಮಗುವಿಗೆ ಜನ್ಮ ನೀಡಿ ಅವಿವಾಹಿತೆ ಸಾವು: ಆ ಇಬ್ಬರಲ್ಲಿ ಮಗುವಿನ ತಂದೆ ಯಾರು? ಶಿವಮೊಗ್ಗದಲ್ಲೊಂದು ವಿಚಿತ್ರ ಲವ್ ಕೇಸ್​

    ಕೈಯಲ್ಲಿ ಮಚ್ಚು ಹಿಡಿದು, ಗ್ರಾಪಂ ಸದಸ್ಯೆಯನ್ನ ಹೊತ್ತೊಯ್ದ ಚಿಕ್ಕಪ್ಪ! ಕತ್ತಲಲ್ಲಿ ನಡೆಯಿತು ಘೋರ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts