More

    ಅವಾಂತರ ಸೃಷ್ಟಿಸಿದ ಮಳೆರಾಯ

    ಚಾಮರಾಜನಗರ: ಸತತವಾಗಿ ಮಳೆ ಸುರಿಯುತ್ತಿವ ಪರಿಣಾಮವಾಗಿ ನಗರದ ಮೂಡ್ಲುಪುರ ಬಡಾವಣೆಯ ಮನೆಯೊಂದಕ್ಕೆ ನೀರು ನುಗ್ಗಿ ಆವಾಂತರ ಸೃಷ್ಟಿಸಿದೆ.

    ನಗರದ ಮೂಡ್ಲುಪುರ ಬಡಾವಣೆಯ ನಿವಾಸಿ ಅಲ್ಲಮಪ್ರಭು ಎಂಬುವವರು ಮನೆಯ ಸಮೀಪದಲ್ಲೇ ಪುಟ್ಟದಾದ ಕಟ್ಟೆಯೊಂದು ಇದ್ದು, ಸತತವಾಗಿ ಸುರಿಯುತ್ತಿರುವ ಮಳೆಗೆ ಕಟ್ಟೆ ಭರ್ತಿಯಾಗಿ ಅವರ ಮನೆಗೆ ಮಳೆ ನೀರು ನುಗ್ಗಿ ಆವಾಂತರ ಸೃಷ್ಟಿಸಿದೆ. ಕರಿವರದರಾಜನ ಬೆಟ್ಟ ಪ್ರದೇಶದಲ್ಲಿ ಬೀಳುವ ಮಳೆ ಈ ಭಾಗದಲ್ಲಿ ಹರಿದು ಹೋಗುತ್ತದೆ. ಆಗಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಮನೆಗೆ ನುಗ್ಗಿ ಸಮಸ್ಯೆ ಅನುಭವಿಸುವಂತಾಗಿದೆ.

    ಸಾಕಷ್ಟು ವರ್ಷಗಳಿಂದಲೂ ನಿವಾಸಿ ಅಲ್ಲಮಪ್ರಭು ಅವರು ಈ ಸಮಸ್ಯೆ ಅನುಭವಿಸುತ್ತಿದ್ದು, ನಗರಸಭೆ ಹಾಗೂ ಕಂದಾಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ರೀತಿಯ ಉಪಯೋಗವಾಗಿಲ್ಲ. ಮಂಗಳವಾರ ಸುರಿದ ಭಾರಿ ಮಳೆಯಿಂದಾಗಿ ಮನೆಯ ಹತ್ತಿರದ ಕಟ್ಟೆ ತುಂಬಿ ಅಲ್ಲಮಪ್ರಭು ಅವರ ಮನೆಗೆ ನೀರು ನುಗ್ಗಿ ಕೆಲಕಾಲ ಆವಾಂತರ ಸೃಷ್ಟಿಮಾಡಿತ್ತು. ಆಗಾಗಿ ಸಂಬಂಧಪಟ್ಟ ಅಧಿಕಾರಿಗಳು ಮನೆಯ ಸಮೀಪದಲ್ಲಿ ಇರುವ ಸಣ್ಣದಾದ ಕಟ್ಟೆಯನ್ನು ಮುಚ್ಚಿ, ಈ ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ಅಲ್ಲಮಪ್ರಭು ಅವರು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts