More

    ಕರೊನಾಗೆ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳ ಹೆಸರಲ್ಲಿ 10 ಲಕ್ಷ ರೂ. ಡೆಪಾಸಿಟ್​! ಸಂಕಷ್ಟಕ್ಕೆ ಮಿಡಿದ ಆಂಧ್ರ ಸರ್ಕಾರ

    ಅಮರಾವತಿ: ಮಹಾಮಾರಿ ಕರೊನಾ ಎಲ್ಲೆಡೆ ಮರಣಮೃದಂಗ ಭಾರಿಸುತ್ತಿದ್ದು, ಲೆಕ್ಕವಿಲ್ಲದಷ್ಟು ಜೀವಗಳು ತಗರಲೆಯಂತೆ ಉದುರಿಗೆ ಸೋಂಕಿಗೆ ಬಲಿಯಾಗುತ್ತಿವೆ. ಕರೊನಾ ಸೋಂಕಿಗೆ ಇಡೀ ಕುಟುಂಬ ಬಲಿಯಾದ ಪ್ರಕರಣಗಳು ಸಾಕಷ್ಟಿವೆ. ಇನ್ನು ಅಪ್ಪ-ಅಮ್ಮ, ಅಜ್ಜಿ-ತಾತನನ್ನೂ ಕಳೆದುಕೊಂಡು ಪುಟ್ಟ ಮಕ್ಕಳು ತಬ್ಬಲಿಯಾಗುತ್ತಿರುವ ಕರುಣಾಜನಕ ಕಥೆಯ ಸರಣಿ ಶರವೇಗದಲ್ಲಿ ನಡೆಯುತ್ತಿದೆ. ಎಲ್ಲರನ್ನೂ ಕಳೆದುಕೊಂಡು ಕಂಗಾಲಾಗಿರುವ ಮಕ್ಕಳ ಹೆಸರಲ್ಲಿ 10 ಲಕ್ಷ ರೂಪಾಯಿ ಎಫ್​ಡಿ(ಫಿಕ್ಸೆಡ್‌ ಡೆಪಾಸಿಟ್‌) ಇಡುವ ಮಹತ್ವದ ನಿರ್ಧಾರ ಕೈಗೊಂಡಿದೆ ಆಂಧ್ರ ಸರ್ಕಾರ!

    ಕರೊನಾ ಸೋಂಕಿನಿಂದ ತಂದೆ-ತಾಯಿಯನ್ನು ಕಳೆದುಕೊಂಡಿರುವ ಪ್ರತಿ ಮಗುವಿನ ಹೆಸರಿನಲ್ಲಿ 10 ಲಕ್ಷ ರೂ. ಹಣವನ್ನು ಬ್ಯಾಂಕಿನಲ್ಲಿ (ಎಫ್​ಡಿ) ಇಡಲು ಆಂಧ್ರ ಮುಖ್ಯಮಂತ್ರಿ ವೈ.ಎಸ್. ಜಗನ್​ಮೋಹನ್ ರೆಡ್ಡಿ ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೋಮವಾರ ಆಂಧ್ರ ಸರ್ಕಾರ ಆದೇಶ ಹೊರಡಿಸಿದೆ.

    ಮಧ್ಯಪ್ರದೇಶ ಮತ್ತು ದೆಹಲಿ ಸರ್ಕಾರಗಳ ಹೆಜ್ಜೆಗಳನ್ನು ಅನುಸರಿಸಿರುವ ಆಂಧ್ರ ಸಿಎಂ ಜಗನ್​ಮೋಹನ್ ರೆಡ್ಡಿ, ತನ್ನ ರಾಜ್ಯದ ಜನರ ಸಂಕಷ್ಟಕ್ಕೆ ಮಿಡಿದಿದ್ದಾರೆ. ಕೋವಿಡ್​ನಿಂದ ಪಾಲಕರನ್ನು ಕಳೆ ದುಕೊಂಡ ಮಕ್ಕಳ ಹೆಸರಿಗೆ ಬ್ಯಾಂಕಿನಲ್ಲಿ 10 ಲಕ್ಷ ಹಣ ಇಡಲಿದ್ದು, ಮಕ್ಕಳಿಗೆ 25 ವರ್ಷ ತುಂಬುವವರೆಗೂ 10 ಲಕ್ಷ ಹಣ ಹಾಗೆ ಇರುತ್ತೆ. ಆದರೆ ಪ್ರತಿ ತಿಂಗಳು ಬಡ್ಡಿ ಹಣವನ್ನ ಪಡೆಯಬಹುದು. ಕರೊನಾ ಸಂಕಷ್ಟಕ್ಕೆ ನಲುಗಿರುವ ಅದೆಷ್ಟೋ ಮಕ್ಕಳ ಬದುಕಿಗೆ ಈ ಯೋಜನೆ ದಾರಿದೀಪವಾಗಿದ್ದು, ಜನರಪರ ಕಾಳಜಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

    ಇನ್ನು ಆಂಧ್ರದಲ್ಲಿ ಕರೊನಾ ಎರಡನೇ ಅಲೆಯನ್ನ ನಿಯಂತ್ರಿಸುವ ನಿಟ್ಟಿನಲ್ಲಿ ಮೇ ಕೊನೆಯವರೆಗೂ ರಾಜ್ಯದಲ್ಲಿ ಕಟ್ಟುನಿಟ್ಟಿನ ಲಾಕ್​ಡೌನ್​ ಜಾರಿಯಲ್ಲಿದೆ.

    ತಾಯಿ ಗರ್ಭದಿಂದ ಮಗುವಿನ ಕಾಲು ಹೊರ ಬಂದಿದೆ.. ಯಾರಾದರೂ ಹೆರಿಗೆ ಮಾಡಿ… ಆಸ್ಪತ್ರೆ ಬಾಗಿಲಲ್ಲಿ ಕುಟುಂಬಸ್ಥರ ಆಕ್ರಂದನ

    ವಿವಾಹಿತೆ ಜತೆ ಪರಪುರುಷನ ಕಾಮದಾಟ! 5 ವರ್ಷದ ಅಕ್ರಮ ಸಂಬಂಧಕ್ಕೆ ಬಿತ್ತು ಮೂವರ ಹೆಣ

    ಬೆಳ್ಳಂಬೆಳಗ್ಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಭಯಾನಕ ಘಟನೆ! ಕಕ್ಕಾಬಿಕ್ಕಿಯಾಗಿ ಓಡಿದ ಕರೊನಾ ಸೋಂಕಿತರು, ಬೆಚ್ಚಿಬೀಳಿಸುತ್ತೆ ಆ ದೃಶ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts