More

    ನನಗೇಕೆ ಜನ್ಮ ನೀಡಿದೆ? ನಾನು ಹುಟ್ಟಲೇಬಾರದಿತ್ತು… ಎನ್ನುತ್ತಾ ತಾಯಿಯ ವೈದ್ಯರ ವಿರುದ್ಧ ಕೇಸ್​ ಹಾಕಿ ಗೆದ್ದ ಯುವತಿ!

    ಲಂಡನ್​: ನಾನು ಹುಟ್ಟಲೇಬಾರದಿತ್ತು, ನನಗೇಕೆ ಜನ್ಮ ನೀಡಿದೆ? ಎಂದು ತಾಯಿಯನ್ನು ಪ್ರಶ್ನಿಸುತ್ತಾ, ತನ್ನ ತಾಯಿಯ ವೈದ್ಯೆ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ್ದ 20 ವರ್ಷ ಯುವತಿಗೆ ದೊಡ್ಡ ಮೊತ್ತದ ಪರಿಹಾರ ಸಿಕ್ಕಿದೆ.

    ಇಂತಹ ವಿಲಕ್ಷಣ ಘಟನೆ ಬ್ರಿಟನ್​ನಲ್ಲಿ ಸಂಭವಿಸಿದೆ. ತನ್ನ ತಾಯಿಯ ವೈದ್ಯರ ವಿರುದ್ಧ ದಾವೆ ಹೂಡಿ ಗೆಲುವು ಕಂಡಾಕೆ ಹೆಸರು 20 ವರ್ಷ ಯುವತಿ ಎವೀ ಟೂಂಬೆಸ್​. ಈಕೆಯ ತಾಯಿ ಹೆಸರು ಕ್ಯಾರೋಲಿನ್‌.

    2001ರಲ್ಲಿ ಜನಿಸಿದ ಎವೀ ಟೂಂಬೆಸ್​, ‘ಸ್ಟಾರ್ ಶೋಜಂಪರ್ ಸ್ಪೈನಾ ಬೈಫಿಡಾ’ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಇದಕ್ಕೆ ನನ್ನ ಅಮ್ಮನಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಾದ ಡಾ.ಫಿಲಿಪ್ ಮಿಚೆಲ್ ಅವರೇ ಕಾರಣ. ನನ್ನನ್ನು ತಪ್ಪಾಗಿ ಹುಟ್ಟಿಸಲಾಗಿದೆ ಎಂದು ಎವೀ ಟೂಂಬೆಸ್​ ವಾದಿಸಿದ್ದಾಳೆ. ನಾನು ನನ್ನ ತಾಯಿಯ ಗರ್ಭದಲ್ಲಿದ್ದಾಗ ವೈದ್ಯರು ಸೂಕ್ತ ಮಾತ್ರೆ ಕೊಟ್ಟಿಲ್ಲ. ನನ್ನ ಅಮ್ಮ ಗರ್ಭಿಣಿಯಾಗಿದ್ದ ವೇಳೆ ಆಕೆಗೆ ಸರಿಯಾದ ಆಹಾರ ಕ್ರಮ ಅನುಸರಿಸುವಂತೆ ವೈದ್ಯರು ಹೇಳಿಲ್ಲ. ಅಷ್ಟೇ ಅಲ್ಲ, ಪೋಲಿಕ್​ ಆ್ಯಸಿಡ್​ ಮಾತ್ರೆಗಳನ್ನು ಸೇವಿಸುವಂತೆ ವೈದ್ಯರು ಹೇಳಿಲ್ಲ. ಪರಿಣಾಮ ನನ್ನ ಬೆನ್ನಹುರಿ ಸರಿಯಾಗಿ ಬೆಳವಣಿಗೆ ಆಗಲಿಲ್ಲ. ಸ್ಪೈನಾ ಬಿಫಿಡಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದೇನೆ. ದಿನದ 24 ಗಂಟೆಯೂ ಮೂಗಿನ ಮೂಲಕ ಟ್ಯೂಬ್​ ಹಾಕಿಕೊಂಡು ಬದುಕಬೇಕಾದ ಪರಿಸ್ಥಿತಿಗೆ ನನ್ನನ್ನು ದೂಡಿದ್ದಾರೆ ಎಂದು ಎವೀ ಟೂಂಬೆಸ್​ ಆರೋಪಿಸಿ ಕೋರ್ಟ್​ನಲ್ಲಿ ದಾವೆ ಹೂಡಿದ್ದಳು.

    ನನಗೇಕೆ ಜನ್ಮ ನೀಡಿದೆ? ನಾನು ಹುಟ್ಟಲೇಬಾರದಿತ್ತು... ಎನ್ನುತ್ತಾ ತಾಯಿಯ ವೈದ್ಯರ ವಿರುದ್ಧ ಕೇಸ್​ ಹಾಕಿ ಗೆದ್ದ ಯುವತಿ!

    ವಿಚಾರಣೆ ನಡೆಸಿದ ಬ್ರಿಟನ್​ ಹೈಕೋರ್ಟ್​ ಈ ಪ್ರಕರಣ ಸಂಬಂಧ ಡಾ.ಫಿಲಿಪ್ ಮಿಚೆಲ್​ರನ್ನು ತಪ್ಪಿತಸ್ಥರೆಂದು ಘೋಷಿಸಿ, ಯುವತಿಗೆ ಪರಿಹಾರ ನೀಡುವಂತೆ ಆದೇಶಿಸಿದೆ. ಮಗುವಿನ ಮೇಲೆ ಪರಿಣಾಮ ಬೀರುವ ಸ್ಪೈನಾ ಬೈಫಿಡಾದ ಅಪಾಯವನ್ನು ಕಡಿಮೆ ಮಾಡಲು ಫೋಲಿಕ್ ಆಮ್ಲ ಟ್ಯಾಬ್ಲೆಟ್​ ತೆಗೆದುಕೊಳ್ಳಬೇಕೆಂದು ವೈದ್ಯರು ಕ್ಯಾರೋಲಿನ್‌ಗೆ ಹೇಳಿದ್ದರೆ ಎವೀ ಟೂಂಬೆಸ್​ಗೆ ಇಂಥ ಸ್ಥಿತಿ ಬರುತ್ತಿರಲಿಲ್ಲ ಎಂದು ಕೋರ್ಟ್​ ಅಭಿಪ್ರಾಯಪಟ್ಟಿದೆ.

    ಹಸೆಮಣೆ ಏರಿದ 65 ವರ್ಷದ ಮೈಸೂರಿನ ವೃದ್ಧಜೋಡಿ: 35 ವರ್ಷದ ಬಳಿಕ ಪ್ರಿಯಕರನ ಸೇರಿದ ಪ್ರೇಯಸಿ

    ಗರ್ಭಿಣಿ ಪತ್ನಿಯ ಹತ್ಯೆಗೆ ಯತ್ನಿಸಿ ಎದುರು ಮನೆ ದಂಪತಿಯನ್ನೂ ಕೊಂದ! ಇವನ ಮಾತು ಕೇಳಿದ್ರೆ ಅಹಸ್ಯ ಅನ್ನಿಸುತ್ತೆ

    ನನ್ನ ಮಗ ಸತ್ತಾಗ ನಮ್ಮನ್ನು ತಬ್ಬಿಕೊಂಡು ನಾನಿದ್ದೀನಿ ಅಂತ ಚೆಕ್​ ಕೊಟ್ಟಿದ್ಯಲ್ಲಪ್ಪಾ.. ಅಪ್ಪು ಸಮಾಧಿ ಬಳಿ ಗೌರಮ್ಮ ಕಣ್ಣೀರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts