More

    ಲೈಂಗಿಕ ಕ್ರಿಯೆ ವಿಚಾರಕ್ಕೆ ಹಿಂಸಿಸುತ್ತಾಳೆ, ಊಟ ಹಾಕ್ತಿಲ್ಲ, ಅವಳ ಕಾಟ ಸಹಿಸಲಾಗ್ತಿಲ್ಲ… ಎಂದು ಠಾಣೆಗೆ ಬಂದ ಪತಿ

    ಬೆಂಗಳೂರು: ಲೈಂಗಿಕ ಸಂಪರ್ಕ ನಡೆಸುವಂತೆ ಪದೇಪದೆ ನನಗೆ ಹಿಂಸಿಸುತ್ತಿದ್ದ ಪತ್ನಿ, ನಿನಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿಯೇ ಇಲ್ಲ ಎಂದು ಬಾಯಿಗೆ ಬಂದಂತೆ ಬೈಯ್ದು, ಊಟ ಹಾಕದೇ ಹಿಂಸೆ ಕೊಡುತ್ತಿದ್ದಾಳೆ ಎಂದು ಆರೋಪಿಸಿ ಪತಿ ನ್ಯಾಯಕ್ಕಾಗಿ ಪೊಲೀಸ್​​ ಠಾಣೆ ಮೆಟ್ಟಿಲೇರಿದ್ದಾನೆ.

    ಇಂತಹ ಪ್ರಕರಣ ವೈಟ್​ಫೀಲ್ಡ್​ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದೆ. ವೈಟ್​ಫೀಲ್ಡ್​ ನಿವಾಸಿ ನಿಖಿಲ್​ ರಾಜೇಂದ್ರನಾಥ್​(39) ಕೊಟ್ಟ ದೂರಿನ ಮೇರೆಗೆ ಈತನ ಪತ್ನಿ ವಿರುದ್ಧ ಎಫ್​​ಐಆರ್​ ದಾಖಲಾಗಿದೆ. 2010ರಲ್ಲಿ ಹಿರಿಯರ ಸಮ್ಮುಖದಲ್ಲಿ ಸಂಪ್ರದಾಯದಂತೆ ಕೇರಳದಲ್ಲಿ ಯುವತಿಯೊಬ್ಬಳ ಜತೆ ನಿಖಿಲ್​ ವಿವಾಹವಾಗಿದ್ದ. ಆರಂಭದಲ್ಲಿ ದಂಪತಿ ಅನ್ಯೋನ್ಯವಾಗಿದ್ದು, ಕೆಲ ವರ್ಷಗಳಿಂದ ಪತ್ನಿ, ಪತಿಯನ್ನು ನಿರ್ಲಕ್ಷಿಸಿ ಬೇರೊಬ್ಬ ವ್ಯಕ್ತಿಯ ಜತೆಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರ ಪತಿ ನಿಖಿಲ್​ಗೆ ತಿಳಿದು ಪತ್ನಿಯನ್ನು ಪ್ರಶ್ನಿಸಿದ್ದ. “ನೀನು ನನ್ನ ಲೆವೆಲ್​ಗೆ ಇರುವುದಿಲ್ಲ. ನಿನ್ನ ಜತೆಗೆ ದೈಹಿಕ ಸಂಪರ್ಕ ನಡೆಸಲು ಇಷ್ಟವಿಲ್ಲ’ ಎಂದು ಬೆದರಿಸುತ್ತಿದ್ದಳು. ತಮ್ಮ ಅಕ್ರಮ ಸಂಬಂಧ ಪತಿಗೆ ಗೊತ್ತಿದೆ ಎಂದು ತಿಳಿದಿದ್ದರೂ ಅದನ್ನು ಮುಂದುವರೆಸಿದ್ದಳು. ನಂತರ ಪತಿಯ ಒತ್ತಾಯದ ಮೇರೆಗೆ ಐವಿಎಫ್​ ಮೂಲಕ ಮಗು ಪಡೆಯಲು ಒಪ್ಪಿಕೊಂಡಿದ್ದಳು.

    2015ರಲ್ಲಿ ದಂಪತಿಗೆ ಗಂಡು ಮಗು ಜನಿಸಿತ್ತು. ನಿನಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿಯೇ ಇಲ್ಲ ಎಂದು ಆರೋಪಿಸಿ ಆಗಾಗ ಪತಿಯನ್ನು ನಿಂದಿಸುತ್ತಿದ್ದಳು. ಈ ವಿಚಾರವನ್ನು ನಿಖಿಲ್​, ಪತ್ನಿಯ ಪಾಲಕರ ಗಮನಕ್ಕೆ ತಂದಾಗ, ಅವರೂ ತಮ್ಮ ಮಗಳ ಪರವಾಗಿ ಮಾತನಾಡಿ ನಿಖಿಲ್​ಗೆ ಬೈದು ಕಳುಹಿಸಿದ್ದರು. ಪತ್ನಿಯ ಕಾಟ ಹೆಚ್ಚಾಗುತ್ತಿದ್ದರೂ ಅನುಸರಿಸಿಕೊಂಡು ಹೋಗುತ್ತಿದ್ದ. ಆಕೆಯ ಹೆಸರಿನಲ್ಲಿ ನಿರ್ಮಾಣ ಹಂತದ ಪ್ಲ್ಯಾಟ್​ ಖರೀದಿಸಿದ್ದ. ಇದಕ್ಕಾಗಿ ಪತ್ನಿ ಹೆಸರಲ್ಲಿ ಮಾಡಿದ್ದ 68 ಲಕ್ಷ ರೂ. ಸಾಲಕ್ಕೆ ಪ್ರತಿ ತಿಂಗಳು ನಿಖಿಲ್​ ಇಎಂಐ ಮೂಲಕ ಹಣ ಪಾವತಿಸುತ್ತಿದ್ದ. ಲಾಕ್​ಡೌನ್​ನಿಂದ ಕೆಲಸ ಕಳಕೊಂಡ ನಿಖಿಲ್​ಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಪ್ರತಿ ತಿಂಗಳು ಹಣ ಕಟ್ಟದ ಹಿನ್ನೆಲೆಯಲ್ಲಿ ಪತ್ನಿ ನಿಖಿಲ್​ಗೆ ಬಾಯಿಗೆ ಬಂದಂತೆ ಬೈದು, ಊಟ ಹಾಕದೆ ಹಿಂಸೆ ಕೊಡುತ್ತಿದ್ದಳು.

    ಇದೀಗ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡುವುದಾಗಿ ಪ್ರಾಣ ಬೆದರಿಕೆ ಹಾಕುತ್ತಿದ್ದಾಳೆ. ಕೆಲ ದಿನಗಳ ಹಿಂದೆ ಮನೆಗೆ ಅಕ್ರಮವಾಗಿ ಪ್ರವೇಶಿಸಿದ ಪತ್ನಿಯ ತಂದೆ, ಸಹೋದರ ಹಾಗೂ ಇತರರು ಹಲ್ಲೆ ನಡೆಸಿ ಬೆದರಿಸಿ, ಮನೆಯಲ್ಲಿದ್ದ ವಸ್ತುಗಳನ್ನು ಹಾನಿ ಮಾಡಿ ಮೌಲ್ಯಯುತ ವಸ್ತುಗಳನ್ನು ಹೊತ್ತೊಯ್ದಿದ್ದಾರೆ ಎಂದು ದೂರಿನಲ್ಲಿ ನಿಖಿಲ್​ ಆರೋಪಿಸಿದ್ದಾರೆ. ವೈಟ್​ಪೀಲ್ಡ್​ ಪೊಲೀಸರು ತನಿಖೆ ನಡೆಸಿ ಪ್ರಕರಣದ ಹಿಂದಿನ ರಹಸ್ಯ ಬೇದಿಸಲು ಹೊರಟಿದ್ದಾರೆ.

    ದುರಂತಕ್ಕೆ ದಾರಿ ಮಾಡಿದ್ದೇ ಅರ್ಚನಾಳ 3ನೇ ಗಂಡನ ಜತೆ ಮಗಳ ಸಲ್ಲಾಪ! ಒಂದೂವರೆ ತಿಂಗಳ ರಹಸ್ಯ ಬಯಲು

    ತಾಯಿ ಗರ್ಭದಲ್ಲೇ ಕಲ್ಲಾದ 7 ತಿಂಗಳ ಮಗು! ಬರೋಬ್ಬರಿ 35 ವರ್ಷ ಹೊಟ್ಟೆಯಲ್ಲೇ ಇತ್ತು ಕಲ್ಲಿನ ಮಗು… ವೈದ್ಯರೇ ಶಾಕ್​

    ಚೇಳು ಕಡಿತಕ್ಕೆ ಯುವಕ ಬಲಿ! ಬದುಕುವ ಚಾನ್ಸ್​ ಇದ್ದರೂ ಆ 3 ದಿನ ಆತ ಬಳಸಿಕೊಳ್ಳಲೇ ಇಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts