More

    ಡಿಕೆಶಿ ವಿರುದ್ಧ ಎಸಿಬಿಗೆ ಇಬ್ಬರಿಂದ 2 ಪ್ರತ್ಯೇಕ ದೂರು

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕುರಿತು ಸಲೀಂ ಹಾಗೂ ಉಗ್ರಪ್ಪ ಸಂಭಾಷಣೆ ನಡೆಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ಇಬ್ಬರು ದೂರು ನೀಡಿದ್ದಾರೆ.

    ಹೆಲ್ಪಿಂಗ್ ಸಿಟಿಜನ್ ಆಂಡ್ ಪೀಪಲ್ಸ್ ಕೋರ್ಟ್ ಎನ್​ಜಿಒದ ಸಂಸ್ಥಾಪಕ ಆಲಂಪಾಷ ಹಾಗೂ ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಕಂಚನಹಳ್ಳಿ ಎಸಿಬಿಗೆ ಪ್ರತ್ಯೇಕವಾಗಿ ದೂರು ನೀಡಿದ್ದಾರೆ.

    ಡಿ.ಕೆ.ಶಿವಕುಮಾರ್, ಕೆಪಿಸಿಸಿ ಮಾಜಿ ಮಾಧ್ಯಮ ಕಾರ್ಯದರ್ಶಿ ಎಂ.ಎ.ಸಲೀಂ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೇರಿ 13 ಮಂದಿ ವಿರುದ್ಧ ಆಲಂಪಾಷ ದೂರು ಸಲ್ಲಿಸಿದ್ದಾರೆ.

    ಸಲೀಂ ಹಾಗೂ ಉಗ್ರಪ್ಪ ಸಂಭಾಷಣೆ ಸತ್ಯಕ್ಕೆ ಹತ್ತಿರವಾಗಿದ್ದು, ಡಿಕೆಶಿ ನೀರಾವರಿ ಹಾಗೂ ಜಲ ಸಂಪನ್ಮೂಲ ಸಚಿವರಾಗಿದ್ದಾಗ ಭ್ರಷ್ಟಾಚಾರ ಎಸಗಿದ್ದಾರೆ. ಡಿಕೆಶಿ ಶೇ. 8 ರಿಂದ 12 ರಷ್ಟು ಕಮಿಷನ್ ಪಡೆದಿದ್ದಾರೆ. ಭ್ರಷ್ಟಾಚಾರದ ಮೂಲಕ 2023ರ ಚುನಾವಣೆಗಾಗಿ ಕೋಟ್ಯಂತರ ರೂ. ಸಂಪಾದಿಸಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರಿಗೆ ಡಿಕೆಶಿ ಭ್ರಷ್ಟಾಚಾರದ ಬಗ್ಗೆ ಸಂಪೂರ್ಣವಾಗಿ ಗೊತ್ತಿದೆ. ಅಕ್ರಮದ ಬಗ್ಗೆ ಗೊತ್ತಿದ್ದರೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ದೂರಿನಲ್ಲಿ ಆಲಂಪಾಷ ಆರೋಪಿಸಿದ್ದಾರೆ.

    ಡಿಕೆಶಿಗೆ ಬೇನಾಮಿ ಆಸ್ತಿ: ರವಿಕುಮಾರ್ ಕಂಚನಹಳ್ಳಿ ಡಿ.ಕೆ ಶಿವಕುಮಾರ್ ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ದೂರು ನೀಡಿದ್ದಾರೆ. ಡಿಕೆಶಿ ನಡೆಸಿರುವ ಅಕ್ರಮವು ಉಗ್ರಪ್ಪ ಮತ್ತು ಸಲೀಂ ಸಂಭಾಷಣೆಯಲ್ಲಿ ತಿಳಿದು ಬಂದಿದೆ. ಡಿ.ಕೆ ಶಿವಕುಮಾರ್ ಶೇ.12 ಕಮಿಷನ್ ಪಡೆಯುತ್ತಾರೆ ಎಂದಿದ್ದಾರೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರಿನಲ್ಲಿ ಡಿಕೆಶಿ ಬೇನಾಮಿ ಆಸ್ತಿ ಮಾಡಿದ್ದಾರೆ. ಚಿಕ್ಕನಾಯಕನಹಳ್ಳಿಯಲ್ಲಿ ಬೇನಾಮಿ ಆಸ್ತಿ ಹೊಂದಿದ್ದಾರೆ. ಸೋಲಾರ್ ಫಟಕದಲ್ಲಿ ಅಕ್ರಮ ಹಣ ಸಂಪಾದಿಸಿದ್ದಾರೆ. ಹೆಂಚಿನ ಫ್ಯಾಕ್ಟರಿ ಬೇನಾಮಿ ಹೆಸರಿನಲ್ಲಿದೆ. ಕೃಷ್ಣಮೂರ್ತಿ ಎಂಬುವರ ಹೆಸರಿನಲ್ಲಿ 100 ಕೋಟಿ ರೂ.ಬೇನಾಮಿ ಆಸ್ತಿ ಹೊಂದಿದ್ದಾರೆ ಎಂದು ರವಿಕುಮಾರ್ ಆರೋಪಿಸಿದ್ದಾರೆ.

    ಅಗಲಿದ ಪತ್ನಿಯ ಫೋಟೋಗೆ ಹೂ ತರಲು ಬಂದ ಗಂಡನ ಪ್ರಾಣವನ್ನೂ ಹೊತ್ತೊಯ್ದ ಜವರಾಯ!

    ಲವ್​-ಸೆಕ್ಸ್​ ದೋಖಾ: ಎಎಸ್​ಐ ಸೇರಿ 8 ಮಂದಿ ವಿರುದ್ಧ ಎಫ್​ಐಆರ್! ಯುವತಿ ಸತ್ತ 11 ದಿನಕ್ಕೆ ಸಿಕ್ತು ಡೆತ್​ನೋಟ್​

    ಬೇಯಿಸಿದ ಮೊಟ್ಟೆ ತಿಂದು ಪ್ರಾಣಬಿಟ್ಟ ಮಹಿಳೆ! ಮೊಟ್ಟೆ ಪ್ರಿಯರನ್ನ ಬೆಚ್ಚಿಬೀಳಿಸುತ್ತೆ ಈ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts