More

    ಕರಿಬಸವಸ್ವಾಮಿ ಮಠದ ಆನೆ ಅಪಹರಣಕ್ಕೆ ಯತ್ನ: ಆನೆಯನ್ನೇ ಕದ್ದು ಮಾರಲೆತ್ನಿಸಿದ್ರಾ ಅರಣ್ಯ ಸಿಬ್ಬಂದಿ?

    ತುಮಕೂರು: ಮಠವೊಂದರ ಆನೆಯನ್ನು ಕದಿಯಲು ಅರಣ್ಯ ಅಧಿಕಾರಿಗಳೇ ಯತ್ನಿಸಿದ್ದಾರೆ ಗಂಭೀರ ಆರೋಪ ಕೇಳಿಬಂದಿದೆ.

    ಕರಿಬಸವಸ್ವಾಮಿ ಮಠದಲ್ಲಿ 29 ವರ್ಷದಿಂದ ಒಂದು ಹೆಣ್ಣಾನೆಯನ್ನು ಸಾಕಿದ್ದರು. ಇದು ಯಾರಿಗೂ ಉಪಟಳ ಕೊಡದೆ ತುಂಬಾ ಸೌಮ್ಯ ಸ್ವಭಾವದ್ದಾಗಿತ್ತು. ಹಾಗಾಗಿ ಇಂತಹ ಆನೆಯನ್ನ ಸರ್ಕಸ್​ ಕಂಪನಿಗಳಲ್ಲಿ ಬಳಸಿಕೊಂಡ್ರೆ ಒಳ್ಳೆಯ ರೆಸ್ಪಾನ್ಸ್​ ಸಿಗುತ್ತೆ ಎಂದು ಅರಣ್ಯ ಅಧಿಕಾರಿಗಳೇ ಈ ಆನೆಯನ್ನು ಕದಿಯಲು ಯತ್ನಿಸಿದ್ದಾರೆ ಎಂದು ಮಠದ ಸಿಬ್ಬಂದಿ ಆರೋಪಿಸಿದ್ದಾರೆ.

    ಕರಿಬಸವಸ್ವಾಮಿ ಮಠದ ಆನೆಯ ಹೊಟ್ಟೆಯಲ್ಲಿ ಗಡ್ಡೆ ಇದೆ. ಬನ್ನೇರಘಟ್ಟದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂದು ಅರಣ್ಯ ಅಧಿಕಾರಿಗಳು ಬಳ್ಳಾರಿಯಿಂದ ಕರೆದುಕೊಂಡು ಹೋಗಿದ್ದರು.  ಮಾರ್ಗಮಧ್ಯೆ ದಾಬಸ್ ಪೇಟೆ ಬಳಿ ಆನೆಯ ಮಾವುತರ ಮೇಲೆ ಹಲ್ಲೆ ಮಾಡಿ ಅವರನ್ನು ಕೆಳಗಿಳಿಸಿ ಆನೆಯ ಅಪಹರಣಕ್ಕೆ ಯತ್ನಿಸಿದ್ದಾರೆ. ಬಳಿಕ ಕುಣಿಗಲ್​ನ ಹಳ್ಳಿಯೊಂದರಲ್ಲಿ ಆನೆಯನ್ನು ಬಚ್ಚಿಟ್ಟಿದ್ದರು… ಎಂದು ಮಾವುತರು ದೂರಿದ್ದಾರೆ. ಸದ್ಯ ಈ ಆನೆ ತುಮಕೂರು ಹೊರವಲಯದಲ್ಲಿ ಪತ್ತೆಯಾಗಿದ್ದು, ಲಾರಿ ಮೂಲಕ ಆನೆಯನ್ನು ವಾಪಸ್ ಮಠಕ್ಕೆ ಕರೆತಂದಿದ್ದಾರೆ.

    Photos| ದಶಕದ ಬಳಿಕ ಮೈದುಂಬಿ ಹರಿಯುತ್ತಿದೆ ಮೂಡಲ್​ ಕುಣಿಗಲ್​ ಕೆರೆ: ರಮಣೀಯ ದೃಶ್ಯ ಕಣ್ತುಂಬಿಕೊಳ್ಳಿ

    ಮೊದಲ ರಾತ್ರಿ ಕನ್ಯತ್ವ ಪರೀಕ್ಷೆ ನಡೆಯುತ್ತಾ? ಕನ್ಯಾಪೊರೆ ಇರಲಿಲ್ಲ ಅಂದ್ರೆ ಏನರ್ಥ?

    ಹೊಸ ವರ್ಷದ ಪಾರ್ಟಿಗೆ 2 ಮೇಕೆ ಕದ್ದ ಎಎಸ್​ಐ! ಮಾಲೀಕನ ಕಣ್ಣೀರಿಗೂ ಕರಗದೆ, ಬಾಡೂಟ ತಿಂದು ತೇಗಿದ್ರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts