More

    ನದಿಯಲ್ಲಿ ವೃದ್ಧನ ಶವ ತರಲು ಹೋದ ಮೂವರ ಪ್ರಾಣವನ್ನೂ ಹೊತ್ತೊಯ್ದ ಜವರಾಯ! ಬೆಚ್ಚಿಬೀಳಿಸುತ್ತೆ ಈ ಘಟನೆ

    ಮುದ್ದೇಬಿಹಾಳ(ವಿಜಯಪುರ): ಪ್ರಾಣಕ್ಕೆ ಕುತ್ತು ಯಾವಾಗ? ಯಾವ ರೂಪದಲ್ಲಿ ಬರುತ್ತೆ ಎಂದು ಊಹಿಸಿಕೊಳ್ಳೋಕು ಸಾಧ್ಯವಿಲ್ಲ ಎಂಬುದಕ್ಕೆ ಈ ದುರಂತ ಪ್ರಕರಣವೇ ಸಾಕ್ಷಿ.

    ನದಿಯಲ್ಲಿ ಮುಳುಗಿ ಮೃತಪಟ್ಟಿದ್ದ ವೃದ್ಧನ ಶವ ತರಲು ಬೋಟ್‌ನಲ್ಲಿ ಹೋಗಿದ್ದ ಮೂವರೂ ವಾಪಸ್​ ಜೀವಂತವಾಗಿ ಬರಲೇ ಇಲ್ಲ! ಇಂತಹ ಧಾರುಣ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದ ಗಡಿ ಭಾಗ ಧನ್ನೂರ ಬಳಿ ಗುರುವಾರ ಸಂಭವಿಸಿದೆ.

    ಘಟನೆ ವಿವರ: ತಾಳಿಕೋಟಿ ತಾಲೂಕಿನ ಹರನಾಳ ಗ್ರಾಮದ ಶಿವಪ್ಪ ಸಿದ್ದಪ್ಪ ಅಂಬಳನೂರ(75) ಎಂಬುವವರು ಮಂಗಳವಾರ ಮನೆ ಬಿಟ್ಟು ಹೋಗಿದ್ದರು. ವೃದ್ಧನಿಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಗುರುವಾರ ತಂಗಡಗಿ ಗ್ರಾಮದ ಬಳಿ ಸೇತುವೆ ಮೇಲೆ ವೃದ್ಧನ ರುಮಾಲು, ಚಪ್ಪಲಿ ಹಾಗೂ ಡೈರಿಯೊಂದು ಪತ್ತೆಯಾಗಿತ್ತು. ಆಗ ನದಿಯಲ್ಲಿಯೇ ವೃದ್ಧ ಬಿದ್ದಿರುವುದನ್ನು ಖಚಿತಪಡಿಸಿಕೊಂಡ ವೃದ್ಧನ ಸಂಬಂಧಿಕರಾದ ಶರಣಗೌಡ ಭೀಮನಗೌಡ ಪಾಟೀಲ(30), ಯಮನಪ್ಪ ಸಾಯಬಣ್ಣ ಅಂಬಳನೂರ(40) ಹಾಗೂ ಬೋಟ್​ ಆಪರೇಟರ್​ ಪರಸು ಅವರು ಕೂಡಲಸಂಗಮದಿಂದ ಖಾಸಗಿಯಾಗಿ ಲಾಂಚ್ ತೆಗೆದುಕೊಂಡು ಬಂದಿದ್ದರು. ಇವರ ಜತೆಗೆ ಮುದ್ದೇಬಿಹಾಳ ಅಗ್ನಿಶಾಮಕ ಠಾಣೆಯವರಿಗೂ ಮಾಹಿತಿ ನೀಡಿದ್ದು, ಅವರು ಇವರ ಜತೆಗೂಡಿ ವೃದ್ಧನ ಶವದ ಹುಡುಕಾಟದಲ್ಲಿ ನಿರತರಾಗಿದ್ದರು.

    ಈ ವೇಳೆ ಧನ್ನೂರ ಗ್ರಾಮಕ್ಕೆ ಸಂಪರ್ಕ ಕೊಡುವ ಜಾಕವೆಲ್ ಬಳಿ ಇದ್ದ ವಿದ್ಯುತ್ ತಂತಿಗಳು ನದಿಯಲ್ಲಿ ಕೆಳಮಟ್ಟದಲ್ಲಿ ಹಾದು ಹೋಗಿದ್ದು, ಅದರ ಸಮೀಪಕ್ಕೆ ಬೋಟ್ ಹೋಗಿದೆ. ವಿದ್ಯುತ್ ತಂತಿ ತಪ್ಪಿಸಬೇಕೆನ್ನುವಷ್ಟರಲ್ಲಿಯೇ ಬೋಟ್‌ಗೆ ವಿದ್ಯುತ್​ ಸ್ಪರ್ಶಿಸಿದೆ. ಬೋಟ್​ನಲ್ಲಿದ್ದ ಶರಣಗೌಡ ಪಾಟೀಲ, ಯಮನಪ್ಪ ಅಂಬಳನೂರ, ಪರಸು ವಿದ್ಯುತ್ ಶಾರ್ಟ್ ಸರ್ಕಿಟ್‌ಗೆ ತುತ್ತಾಗಿ ನದಿಯಲ್ಲಿ ಬಿದ್ದು ದುರಂತ ಅಂತ್ಯಕಂಡಿದ್ದಾರೆ.

    ಗಂಡನಿಗೆ ಹುಡುಗೀರ ಶೋಕಿ, ನನ್ನನ್ನು ಜೀವಂತ ಶವ ಮಾಡಿದ್ದಾನೆ, ಕಿರುಕುಳ ಸಹಿಸಲಾಗ್ತಿಲ್ಲ… ಕಣ್ಣೀರು ತರಿಸುತ್ತೆ ಈ ಸ್ಟೋರಿ

    ಮಗು ಸಾಯುವ ಭಯದಲ್ಲಿ 8 ತಿಂಗಳ ಗರ್ಭಿಣಿ ಆತ್ಮಹತ್ಯೆ! ಈ ಸಾವಿಗೆ ಹಿಂದಿನ ದುರ್ಘಟನೆಯೇ ಕಾರಣವಾಯ್ತಾ?

    ಬಿಎಸ್​ವೈ ಆಪ್ತನ ಮನೆ ಮೇಲೆ ಐಟಿ ದಾಳಿ! ವಿಜಯೇಂದ್ರ, ರಾಘವೇಂದ್ರರ ವ್ಯವಹಾರದಲ್ಲೂ ಉಮೇಶನ ಕೈಚಳಕ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts